Advertisement

ಏರುತ್ತಿದೆ ಗ್ರಾಪಂ ಚುನಾವಣೆ ಕಾವು

07:17 PM Dec 14, 2020 | Suhan S |

ಭದ್ರಾವತಿ: ತಾಲೂಕಿನಲ್ಲಿ ಗ್ರಾಪಂ ಪಂಚಾಯತ್‌ ಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ.ಭದ್ರಾವತಿ ಕ್ಷೇತ್ರದಲ್ಲಿ ಈವರೆಗೆ ಪಕ್ಷ ರಾಜಕಾರಣದ ಚುನಾವಣೆ ಗೌಣವಾಗಿ ವ್ಯಕ್ತಿ ಆಧಾರಿತ ಚುನಾವಣೆಯೇ ವಿಜೃಂಭಿಸುತ್ತಾ ಬಂದಿದ್ದು, ಇದೇ ಪ್ರಥಮ ಬಾರಿಗೆ ಇಲ್ಲಿನ ಚುನಾವಣಾರಾಜಕಾರಣದಲ್ಲಿ ಬದಲಾದ ಹೊಸ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ. ಅದಕ್ಕೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರ ನಿಧನವೇ ಪ್ರಮುಖ ಕಾರಣ.

Advertisement

ಈವರೆಗೆ ಇಲ್ಲಿನ ಎರಡು ರಾಜಕೀಯ ಧ್ರುವಗಳೆಂದೇ ಗುರುತಿಸಲ್ಪಡುತ್ತಿದ್ದ ಹಾಲಿ ಶಾಸಕಬಿ.ಕೆ ಸಂಗಮೇಶ್ವರ್‌ ಮತ್ತು ದಿ| ಮಾಜಿ ಶಾಸಕಎಂ.ಜೆ. ಅಪ್ಪಾಜಿಗೌಡರ ನಡುವಿನ ಜಿದ್ದಾ-ಜಿದ್ದಿ ರಾಜಕಾರಣವೇ ಇಲ್ಲಿನ ಎಲ್ಲಾ ರಾಜಕಾರಣದ ಮತ್ತು ಚುನಾವಣೆಯ ಹೂರಣವಾಗುತ್ತಾ ಬಂದಿತ್ತು. ಮಾಜಿ ಶಾಸಕ ಅಪ್ಪಾಜಿ ಗೌಡ ಒಕ್ಕಲಿಗಸಮುದಾಯಕ್ಕೆ ಸೇರಿದ ‌ನಾಯಕರಾಗಿದ್ದರೂ ಸಹ ಅವರು ತಾಲೂಕಿನ ಎಲ್ಲಾ ವರ್ಗದ ಜನರಬೆಂಬಲ ಆದರಗಳಿಗೆ ಪಾತ್ರರಾಗಿದ್ದ ಕಾರಣ ಕ್ಷೇತ್ರದ ರಾಜಕಾರಣದಲ್ಲಿ ತಮ್ಮದೇಆದ ಛಾಪನ್ನು ಗಳಿಸಿಉಳಿಸಿಕೊಂಡು ಬಂದಿದ್ದರು. ಹಾಗಾಗಿ ಕ್ಷೇತ್ರದ ಯಾವುದೇ ಚುನಾವಣೆಯಾಗಲಿ ಅಪ್ಪಾಜಿಯ ಪ್ರಭಾವ ಪ್ರಬಲವಾಗಿದ್ದು ಅನೇಕರು ಅಪ್ಪಾಜಿ ಹೆಸರಿನಲ್ಲೇ ಚುನಾವಣೆಯನ್ನು ಎದುರಿಸಿ ಗೆಲ್ಲುತ್ತಾ ಬಂದಿದ್ದರು.

ಹಾಗಾಗಿ ಅಪ್ಪಾಜಿ ಗೌಡರು ಎಂಎಲ್‌ಎ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ. ಗ್ರಾಪಂ, ತಾಪಂ, ಜಿಪಂ, ನಗರಸಭೆಯ ಚುನಾವಣೆಗಳಲ್ಲಿ ಜಯ ಸಾಧಿಸಿ ಅವುಗಳ ಅಧಿಕಾರದ ಚುಕ್ಕಾಣಿಯನ್ನುಪರೋಕ್ಷವಾಗಿ ತಮ್ಮ ಹಿಡಿತದಲ್ಲಿಯೇ ಇರಿಸಿಕೊಳ್ಳುವಚಾಕಚಕ್ಯತೆಯ ರಾಜಕಾರಣಿಯಾಗಿದ್ದರು. ಮಾಜಿ ಶಾಸಕರಾಗಿದ್ದಾಗಲೂ ಹಾಲಿ ಶಾಸಕರಷ್ಟೇ ಪ್ರಭಾವ ಹೊಂದಿದ ರಾಜಕಾರಣಿಯಾಗಿದ್ದರು.

ಅಪ್ಪಾಜಿ ಅಗಲಿಕೆ ನಂತರದ ರಾಜಕಾರಣ: ಅಪ್ಪಾಜಿ ಗೌಡರನ್ನು ಹೊರತುಪಡಿಸಿದರೆ ಜೆಡಿಎಸ್‌ಅಥವಾ ಒಕ್ಕಲಿಗ ಜನಾಂಗದವರಲ್ಲಿ ಆ ಮಟ್ಟಕ್ಕೆರಾಜಕಾರಣದ ಏಣಿಯಲ್ಲಿ ಯಾರೂ ಏರಲು ಸಾಧ್ಯವಾಗದಿದ್ದರಿಂದಾಗಿ ಅಪ್ಪಾಜಿ ಗೌಡರ ಹೆಸರನ್ನೇನಂಬಿಕೊಂಡು ರಾಜಕಾರಣ ಮತ್ತು ಚುನಾವಣೆಎದುರಿಸಿ ಗೆಲ್ಲುತ್ತಿದ್ದವರಿಗೆ ಈಗ ಗ್ರಾಪಂ, ತಾಪಂ,ಜಿಪಂ, ನಗರಸಭೆ ಸೇರಿದಂತೆ ಜಾತಿ ಸಮಾಜದ ಚುನಾವಣೆಗಳಲ್ಲಿಯೂ ಸಹ ಗೆಲ್ಲುವುದಿರಲಿ ಸ್ಪರ್ಧಿಸುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ.

ಮುಟ್ಟಿದ್ದೆಲ್ಲಾ ಚಿನ್ನ: ಕಾಂಗ್ರೆಸ್‌ನ ಹಾಲಿ ಶಾಸಕ ಬಿ.ಕೆ.ಸಗಮೇಶ್ವರ್‌ ಈ ವರೆಗೆ ವಿಧಾನಸಭೆಚುನಾವಣೆಯಿಂದ ಹಿಡಿದು ಗ್ರಾಪಂ, ತಾಪಂ,ಜಿಪಂ, ನಗರಸಭೆ ಎಲ್ಲಾ ಚುನಾವಣೆಯಲ್ಲಿತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಆವುಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ಅಪ್ಪಾಜಿ ಗೌಡರಿಗೆ ಸರಸಮವಾಗಿ ಚುನಾವಣೆಯಲ್ಲಿ ಕಾರ್ಯತಂತ್ರಗಳನ್ನು ಹೆಣೆದು ಅದರಲ್ಲಿ ಕೆಲವು ಬಾರಿ ಯಶಸ್ವಿಯಾಗುತ್ತಲೂ ಬಂದಿದ್ದಾರೆ.

Advertisement

ಬಿಜೆಪಿಗೆ ಅಧಿಕಾರವೇ ಬಂಡವಾಳ: ಇನ್ನು ಕ್ಷೇತ್ರದಲ್ಲಿ ಬಿಜೆಪಿ ತಾಲೂಕಿನಲ್ಲಿ ಶಾಸಕ ಸ್ಥಾನವಿರಲಿ ಈವರೆಗೆ ಗ್ರಾಪಂ, ತಾಪಂ,ಜಿಪಂ, ನಗರಸಭೆ ಯವುದೇ ಸ್ಥಳೀಯ ಆಡಳಿತದ ಅಧಿಕಾರದ ಚುಕ್ಕಾಣಿಯನ್ನು ಸ್ವತಂತ್ರವಾಗಿ ಹಿಡಿಯುವ ಮಟ್ಟಕ್ಕೆ ಇಲ್ಲಿನ ಪಕ್ಷದ ನಾಯಕರು ಬೆಳೆಯದೆ ಇರುವುದರಿಂದ, ಈಗ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮಟ್ಟದಲ್ಲಿ ಗೆಲ್ಲಿಸುವಷ್ಟು ರಾಜಕೀಯ ಚಾಣಾಕ್ಷತೆಶೂನ್ಯ ಎಂದರೆ ತಪ್ಪಾಗಲಾರದು.

 

ಕೆ.ಎಸ್‌.ಸುಧೀಂದ್ರ

Advertisement

Udayavani is now on Telegram. Click here to join our channel and stay updated with the latest news.

Next