Advertisement

ಗ್ರಾ.ಪಂ. ಉಪ ಚುನಾವಣೆ: ವೇಳಾಪಟ್ಟಿ

12:18 AM May 09, 2019 | Team Udayavani |

ಉಡುಪಿ/ಮಂಗಳೂರು: ರಾಜ್ಯದ ಗ್ರಾ.ಪಂ.ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳನ್ನು ಉಪ ಚುನಾವಣೆ ಮೂಲಕ ಭರ್ತಿ ಮಾಡಲಾಗುತ್ತಿದೆ.

Advertisement

ಬ್ರಹ್ಮಾವರ ತಾಲೂಕಿನ ಕೋಟ, ಕಾಪು ತಾಲೂಕಿನ ಮುದರಂಗಡಿ, ಕುಂದಾಪುರ ತಾಲೂಕಿನ ತಲ್ಲೂರು ಮತ್ತು ಹಾಲಾಡಿ ಗ್ರಾ.ಪಂ.ಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಜಿಲ್ಲೆಯ ಪಡುಪೆರಾರ, ತಲಪಾಡಿ, ಕಬಕ, ನೆಕ್ಕಿಲಾಡಿ, ಉಜಿರೆ, ಕೊಯ್ಯೂರು ಗ್ರಾ.ಪಂ. ಕ್ಷೇತ್ರಗಳ ಕೆಲವು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಮೇ 13ರಿಂದ 31ರ ವರೆಗೆ ಜಾರಿಯಲ್ಲಿರುತ್ತದೆ.

ಚುನಾವಣ ಅಧಿಸೂಚನೆ ಹೊರಡಿಸುವ ದಿನ ಮೇ 13, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮೇ 16,ನಾಮಪತ್ರ ಪರಿಶೀಲಿಸುವ ದಿನ ಮೇ 17, ಉಮೇದುದಾರಿಕೆ ಹಿಂದೆಗೆದು
ಕೊಳ್ಳಲು ಕೊನೆಯ ದಿನ ಮೇ 20,ಮತದಾನ ದಿನ ಮೇ 29. ಮತ ಎಣಿಕೆಯು ಮೇ 31ರಂದು ನಡೆಯಲಿದೆ. ಚುನಾವಣೆ ನಡೆಯುವ ಗ್ರಾ. ಪಂ.ವ್ಯಾಪ್ತಿಯಲ್ಲಿ ಮೇ 13ರಿಂದ 30ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುತ್ತದೆ.

ನಗರ ಸ್ಥಳೀಯ ಸಂಸ್ಥೆ
ಇದೇವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪುರಸಭೆ, ಸುಳ್ಯ ಮತ್ತು ಮೂಲ್ಕಿ ಪ.ಪಂ.ಗಳಿಗೂ ಚುನಾವಣೆ ಮೇ 29ರಂದು ನಡೆಯಲಿದೆ. ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು 31ರ ವರೆಗೆ ಜಾರಿಯಲ್ಲಿರುತ್ತದೆ.

Advertisement

ಮೇ 9ರಂದು ಜಿಲ್ಲಾಧಿಕಾರಿಗಳು ಚುನಾವಣ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಮೇ 16, ನಾಮಪತ್ರ ಪರಿಶೀಲಿಸುವ ದಿನಾಂಕ ಮೇ 17, ಉಮೇದುವಾರಿಕೆಯನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನಾಂಕ ಮೇ 20.
ಮತದಾನ ಅವಶ್ಯವಿದ್ದರೆ ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ಹಾಗೂ ಮತಗಳ ಎಣಿಕೆ ಮೇ 31ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next