ಇಂಡಿ: ಶಿಕ್ಷಣ ಅಂದರೆ ಕೇವಲ ಪದವಿ ಪಡೆಯುವುದು ಅಲ್ಲ. ಅಜ್ಞಾನ, ಮೂಢನಂಬಿಕೆಯನ್ನು ಬಿಡುವುದು. ಪ್ರಾಮಾಣಿಕವಾಗಿ ಬದುಕುವುದನ್ನು ಕಲಿಯುವುದು. ತಾಯಿ-ತಂದೆ, ಗುರು-ಹಿರಿಯರನ್ನು ಗೌರವಿಸುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಉಮರ್ ಶೇಖ್ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ 2020-21ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಘಟಕ ಇಂಡಿ ವಲಯಕ್ಕೆ
ಆಯ್ಕೆಯಾದ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು, ಶಿಕ್ಷಕರು ತಮ್ಮ ಪವಿತ್ರ ವೃತ್ತಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಬೇಕು. ಶಿಕ್ಷಕರ ನಡವಳಿಕೆಯನ್ನು ವಿದ್ಯಾರ್ಥಿಗಳು ಅನುಸರಿಸುತ್ತಿರುತ್ತಾರೆ. ಎಲ್ಲವನ್ನೂ ಮನಗಂಡು ನಾವು ನಮ್ಮ ಕಾರ್ಯ ಮಾಡಬೇಕು ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಹರಳಯ್ಯ, ಎಂ.ಎಂ. ವಾಲಿಕಾರ, ಅಲ್ಲಾಭಕ್ಷ ವಾಲಿಕಾರ, ಎಸ್.ಟಿ. ಲಮಾಣಿ, ಎಮ್.ಎಮ್. ನೇದಲಗಿ, ಸಿ.ಆರ್. ಮ್ಯಾಕೇರಿ, ಶ್ರೀಮತಿ ಎಸ್.ಸಿ. ಗಿರಣಿ, ಜೆ.ಎ. ಚವಡಿಹಾಳ, ಶ್ರೀದೇವಿ ಮುಗಳಿ, ಟಿ.ಎಲ್. ಜಮಾದಾರ, ಶಾಹಿನ ಅಂಜುಮ ಬೋಸಗೆ, ವೈ.ಟಿ. ಪಾಟೀಲ, ಅಲ್ತಾಫ್ ಬೋರಾಮಣಿ, ಸುರೇಶ ಚವ್ಹಾಣ, ಸಿ.ಎಸ್. ಝಳಕಿ, ಜಯರಾಮ ಚವ್ಹಾಣ, ಆರ್.ಎಸ್. ನಾರಾಯಣಕರ, ಜಯಶ್ರೀ ತೆಲಗ, ಅನಿತಾ ರಾಠೊಡ, ವಿಜಯಲಕ್ಷ್ಮೀ ಡಿಸ್ಲೆ, ಆನಂದ ಕೆಂಭಾವಿ, ಟಿ.ಕೆ. ಜಂಬಗಿ, ಪಿ.ಎಸ್. ಚಾಂಕವಟೆ, ಪಿ.ಎ. ಎಲಿಗಾರ, ಕಂಟಿಕಾರ ಅವರನ್ನು ಸನ್ಮಾನಿಸಲಾಯಿತು. ಕೆ.ಎ. ಗೌರ, ಕೆ.ಎಂ. ಬಾಗವಾನ, ಫಯಾಜ ಖತೀಬ, ಎಚ್.ಡಿ. ಟೇಲರ, ಆರ್ .ಡಿ. ಇಂಡಿಕರ ಮತ್ತಿತರರಿದ್ದರು.