Advertisement

ಹುಣಸೂರು: ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಚಿವ ಸೋಮಶೇಖರ್

06:49 PM May 13, 2022 | Team Udayavani |

ಹುಣಸೂರು: ನಗರದ ವಿವಿಧೆಡೆ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತಯಾಚಿಸಿದರು.ನಗರದ ಜೆ.ಎಸ್.ಎಸ್.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಲಿ-ಕಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದ್ದು .ಶಾಲೆಗೆ ಭೇಟಿ ನೀಡಿ ಶಿಕ್ಷಕರ ಬಳಿ ಮತಯಾಚಿಸಿದ ನಂತರ ಹುಣಸೂರು ವಕೀಲರ ಸಂಘದ ಭವನದಲ್ಲಿ ವಕೀಲರನ್ನು ಭೇಟಿ ಮಾಡಿ ಮತಯಾಚಿಸಿದರು.

Advertisement

ಈ ವೇಳೆ ಮಾತಮಾಡಿದ ಸಚಿವರು, ಕಳೆದ ಬಾರಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ ಮೈ.ವಿ.ರವಿಶಂಕರ್ ಕಾರ್ಯವೈಖರಿಯನ್ನು ಗುರುತಿಸಿರುವ ಬಿಜೆಪಿ ಪಕ್ಷವು ಮತ್ತೊಂದು ಅವಕಾಶ ಕಲ್ಪಿಸುವ ಮೂಲಕ ಈಬಾರಿ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇವರು ಸರಕಾರದ ಅಭ್ಯರ್ಥಿ ಕೂಡ ರಾಜ್ಯದಲ್ಲಿ ಇನ್ನೂ ಒಂದು ವರ್ಷ ಕಾಲ ಬಿಜೆಪಿ ಸರಕಾರ ವಿರಲಿದೆ. ಪದವೀಧರರ ಸಂಕಷ್ಟ .ನಾಡಿ ಮಿಡಿತ ಅರಿತಿರುವ ರವಿಶಂಕರ್ ರವರಿಗೆ ಮತ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಯನ್ನು ವಿಜಯಿಯನ್ನಾಗಿಸಿರೆಂದು ಮನವಿ ಮಾಡಿದರು.

ಪದವೀಧರರ ಸಂಕಷ್ಟಕ್ಕೆ ನೆರವಾಗುವ ಗುಣವುಳ್ಳ, ಸರಳ ಸಜ್ಜನಿಕೆಗೆ ಹೆಸರಾಗಿರುವ ಮೈ.ವಿ. ರವಿಶಂಕರ್‌ರನ್ನು ಗೆಲ್ಲಿಸಿಕೊಟ್ಟಲ್ಲಿ ಮೇಲ್ಮನೆಯಲ್ಲಿ ಪದವೀಧರರ ಸಮಸ್ಯೆಗಳಿಗೆ ಧ್ವನಿ ಎತ್ತುವ ಮೂಲಕ ನೆರವಾಗಲಿದ್ದಾರೆಂದು ಭರವಸೆ ಇತ್ತರು.

60 ಸಾವಿರ ನೊಂದಣಿ

ಜಿಲ್ಲೆಯಲ್ಲಿ ಸುಮಾರು 60 ಸಾವಿರ ಪದವೀಧರರನ್ನು ಈ ಬಾರಿ ನೊಂದಾಯಿಸಲಾಗಿದೆ. ಪ್ರತಿಯೊಬ್ಬ ಪಧವೀಧರರನ್ನು ಮುಖಂಡರು ಹಾಗೂ ನಮ್ಮ ಅಭ್ಯರ್ಥಿ ಈಗಾಗಲೆ ಭೇಟಿ ಮಾಡಿದ್ದಾರೆ. ಇವರು ಸರಕಾರದ ಅಭ್ಯರ್ಥಿಯೂ ಆಗಿದ್ದಾರೆ.ಹೀಗಾಗಿ ಗೆಲ್ಲುವ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಬಿಜೆಪಿ ಮುಖಂಡರಾದ ಜಾಬಗರೆ ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಜಾಬಗೆರೆ ರಮೇಶ್ ಕುಮಾರ್, ಜಿಲ್ಲಾ ಕಾರ್ಯ ದರ್ಶಿ ಯೋಗಾನಂದ ಕುಮಾರ್, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಸಭಾ ಸದಸ್ಯ ವಿವೇಕಾನಂದ ಸೇರಿದಂತೆ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next