Advertisement

ಮರಳು ದೋಣಿಗಳಿಗೂ ಜಿಪಿಎಸ್‌: ಪ್ರಮೋದ್‌

08:35 AM Sep 12, 2017 | Team Udayavani |

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ಈ ಭಾಗದ ನದಿಗಳಲ್ಲಿ ಮೀನುಗಾರಿಕಾ ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರುಳು ದಿಬ್ಬಗಳನ್ನು ಮಾತ್ರ ತೆಗೆಯಲು ಹಸಿರು ಪೀಠ ಅವಕಾಶ ನೀಡಿದ್ದು, ಅದರಂತೆ ಮರಳು ದಿಬ್ಬಗಳ ತೆರವು ಕಾರ್ಯ ನಡೆಸಲಾಗುತ್ತದೆ. ದಿಬ್ಬಗಳಿಂದ ತೆಗೆಯಲಾಗುವ ಮರಳು ಹೊರ ಜಿಲ್ಲೆಗಳಿಗೆ ಹೋಗದಂತೆ ಮರಳು ಸಾಗಾಟದ ವಾಹನ ಮಾತ್ರ ವಲ್ಲದೆ, ಮರಳು ದಿಬ್ಬ ತೆರವುಗೊಳಿಸುವ ದೋಣಿಗಳಿಗೂ ಜಿಪಿಎಸ್‌ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಸೋಮವಾರ ರಜತಾದ್ರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ದಿಢೀರ್‌ ಭೇಟಿ ಮಾಡಿ ಮಾತನಾಡಿದರು.

ಜಿಪಿಎಸ್‌ ಅಳವಡಿಕೆಯಿಂದ ಮರಳು ತೆಗೆಯುವ, ಕೊಂಡೊಯ್ಯುವ ಪ್ರತಿಯೊಂದು ಮಾಹಿತಿ ಲಭ್ಯವಾಗಲಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಜಿಪಿಎಸ್‌ ಅಳವಡಿಸಲು ಟೆಲಿಮ್ಯಾಟಿಕ್ಸ್‌ ಫಾರ್‌ ಯು ಸರ್ವಿಸ್‌ ಪ್ರ„ ಲಿ. ಕಂಪೆನಿ ಟೆಂಡರ್‌ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ಜಿಪಿಎಸ್‌ ಅಳವಡಿಸಿ ಮರಳು ತೆಗೆಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಉಪಯೋಗಕ್ಕೆ ಮಾತ್ರ
ಎನ್‌ಐಟಿಕೆ ತಜ್ಞರ ತಂಡದಿಂದ ದೋಣಿಗಳ ಸಂಚರಿಸಲು ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಅವರ ವರದಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಗುರುತಿಸಿರುವ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ತೆಗೆಯುವ ಮರಳನ್ನು ಜಿಲ್ಲೆಯ ಉಪಯೋಗಕ್ಕೆ ಮಾತ್ರ ಬಳಸುವಂತೆ ಮತ್ತು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೊರಗೆ ಸಾಗಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮರಳು ತೆಗೆಯಲು ಪರ್ಮಿಟ್‌ ಪಡೆದಿರುವ ಪ್ರತಿಯೊಬ್ಬರಿಗೂ ಜಿಪಿಎಸ್‌ ಅಳವಡಿಕೆ ಕುರಿತು ಮಾಹಿತಿ ನೀಡಿದ ಹಾಗೂ ರಾಷ್ಟ್ರೀಯ ಹಸಿರು ಪೀಠ ಹಾಕಿರುವ ಷರತ್ತುಗಳ ಅನ್ವಯ ಮರಳುಗಾರಿಕೆ ನಡೆಸುವಂತೆ ಎಲ್ಲ ಪರ್ಮಿಟ್‌ದಾರರಿಗೆ ಸೂಚಿಸಿದ ಸಚಿವರು, ನಿಯಮ ಉಲ್ಲಂ ಸಿದಲ್ಲಿ ಮರಳು ತೆಗೆ ಯಲು ತಡೆಯಾಜ್ಞೆ ಬರಲಿದೆ ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಾಧಿಕಾರಿ ಕೋದಂಡರಾಮ ಉಪಸ್ಥಿತರಿದ್ದರು. 

Advertisement

ದೂಷಣೆ ಮಾಡಬೇಡಿ: ಎಚ್ಚರಿಕೆ
ಸಚಿವರ ತುಘಲಕ್‌ ದರ್ಬಾರ್‌ ಎಂದೆಲ್ಲ ಮರಳು ಸಂಘಟನೆಯವರು ಆರೋಪಿಸಿ ದ್ದಾರೆ. ಇಲ್ಲಿ ಕಾನೂನು ನಾನು ಮಾಡಿದ್ದಲ್ಲ. ಆಯಾ ಸರಕಾರಗಳು ಮಾಡಿದ್ದು. ಅದರಂತೆ ಪರ್ಮಿಟ್‌ ನೀಡಲಾಗುತ್ತಿದೆ. ಮುಂದಕ್ಕೆ ನಿರಾಧಾರ ಆರೋಪ ಮಾಡಿದರೆ ನಮಗೇನು ಮಾಡಬೇಕೆಂದು ಗೊತ್ತಿದೆ ಎಂದು ಪ್ರಮೋದ್‌ ಮಧ್ವರಾಜ್‌ ಎಚ್ಚರಿಸಿದರು. ಸಚಿವರದ್ದು ಇಲ್ಲಿ ಏನೂ ಪಾತ್ರವಿಲ್ಲ ಸರಕಾರದ ನಿಯಮದಂತೆಯೇ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next