Advertisement

ಗೌಡರ ಉನ್ನತೀಕರಣ ಸಂಸ್ಥೆ  ಮಹಿಳಾ ವಿಭಾಗ: ಧಾರ್ಮಿಕ ಕಾರ್ಯಕ್ರಮ

05:45 PM Aug 19, 2018 | Team Udayavani |

ಮುಂಬಯಿ: ಗೌಡರ ಉನ್ನತೀಕರಣ ಸಂಸ್ಥೆ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ದ್ವಿತೀಯ ವಾರ್ಷಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆ. 15 ರಂದು ಅಪರಾಹ್ನ 4 ರಿಂದ ವಾಶಿ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಸಿಡ್ಕೊà ಎಕ್ಸಿಬಿಷನ್‌ ಸೆಂಟರ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಅಪರಾಹ್ನ 4 ರಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ, ಅರಸಿನ ಕುಂಕುಮ, ಸಂಜೆ 5 ರಿಂದ ಸಂಸ್ಥೆಯ ಸದಸ್ಯರಿಂದ ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ, ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ ಇನ್ನಿತರ ಕಾರ್ಯಕ್ರಮಗಳು ನೆರವೇರಿದವು. ಅನಂತರ ಸಂಸ್ಥೆಯ ಸದಸ್ಯರಿಂದ ಸತೀಶ್‌ ಎರ್ಮಾಳ್‌ ರಚಿಸಿ, ಬಾಬಾ ಪ್ರಸಾದ್‌ ಅರಸ ಕುತ್ಯಾರ್‌ ಅವರ ನಿರ್ದೇಶನದಲ್ಲಿ ಕಾಡದಿರು ಮನವೇ ನಾಟಕ ಪ್ರದರ್ಶನಗೊಂಡಿತು.

ಸಂಸ್ಥೆಯ ಅಧ್ಯಕ್ಷ ಮೋಹನ್‌ ಕುಮಾರ್‌ ಜೆ. ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಶನೀಶ್ವರ ಮಂದಿರ ಚೆಂಬೂರು ಇದರ ಗುರುಸ್ವಾಮಿಗಳಾದ ಕೆ. ಎಂ. ರಾಮು ಸ್ವಾಮೀಜಿ, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕ ಡಾ| ಶಿವಾ ಮೂಡಿಗೆರೆ, ಬೆಂಗಳೂರಿನ ಸಮಾಜ ಸೇವಕ ಜಿ. ಆರ್‌. ಪ್ರದೀಪ್‌ ಗೌಡ ಅವರು ಉಪಸ್ಥಿತರಿದ್ದರು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಎನ್‌. ಗೌಡ, ಕೋಶಾಧಿಕಾರಿಗಳಾದ ರವಿ ಜೆ. ಗೌಡ, ಉಪಾಧ್ಯಕ್ಷರುಗಳಾದ ನಾಗರಾಜ್‌ ಎನ್‌. ಗೌಡ, ರಮೇಶ್‌ ಎಚ್‌. ಎಸ್‌. ಗೌಡ, ಜತೆ ಕಾರ್ಯದರ್ಶಿಗಳಾದ ಅಶೋಕ್‌ ಕಾಲಪ್ಪ, ಜತೆ ಕೋಶಾಧಿಕಾರಿಗಳಾದ ಸಂದೀಪ್‌ ಎಸ್‌. ಪಾಚ್‌ಪುಟೆ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಸಮಾಜ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next