ಬೆಂಗಳೂರು: ಸೋಂಕಿತರು ಮತ್ತು ಶವ ಸಾಗಾಟ ಮಾಡುವ ಆ್ಯಂಬುಲೆನ್ಸ್ ಗಳ ವಸೂಲಿಗೆ ಕಡಿವಾಣ ಹಾಕಲು ಶೀಘ್ರದಲ್ಲೆ ಸರ್ಕಾರದಿಂದ ದರ ನಿಗದಿಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ಗುರುವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಂಬುಲೆನ್ಸ್ ಶುಲ್ಕ ಸುಲಿಗೆಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 108 ಆ್ಯಂಬುಲೆನ್ಸ್ ಬಳಕೆ ಆದ್ಯತೆ ನೀಡಿ. ಖಾಸಗಿ ಆ್ಯಂಬುಲೆನ್ಸ್ ಗಳಿಗೂ ನಿರ್ದಿಷ್ಟ ದರ ಶೀಘ್ರ ನಿಗದಿ ಮಾಡುವುದಾಗಿ ತಿಳಿಸಿದರು.
ಜನರು ಆತ್ಮವಿಶ್ವಾಸದಿಂದ ಇರಬೇಕು ಸರ್ಕಾರ ನಿಮ್ಮ ಜೊತೆಗೆ ಇದೆ. ಮುಖ್ಯಮಂತ್ರಿಯಿಂದ ಕಟ್ಟಕಡೆಯ ಅಧಿಕಾರಿಗಳು ನಿಮ್ಮ ಜೊತೆಗೆ ಇರುತ್ತೇವೆ. ನಿಮ್ಮ ಆರೋಗ್ಯ, ನಿಮ್ಮ ಜೊತೆಗೆ ನಾವಿದ್ದೇವೆ. ರೋಗದ ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯಿರಿ. ನಮ್ಮ ಲಸಿಕೆ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲರನ್ನ ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಕೊರೊನಾ ಪಾಸಿಟಿವ್ ಬಂದ್ರೆ ಹೆದರಬೇಡಿ, ಧೃತಿಗೆಡಬೇಡಿ ಧೈರ್ಯದಿಂದ ಇರಿ ಎಂದು ಭರವಸೆ ನೀಡಿದರು.
ಆಕ್ಸಿಜನ್ ಮತ್ತು ರೆಮ್ ಡಿಸಿವಿಯರ್ ಗಾಗಿ 24*7 ಸಹಾಯವಾಣಿ ತೆರೆಯಲಾಗಿದೆ. ರಾಜ್ಯದಲ್ಲಿ 48 ಗಂಟೆಯಲ್ಲಿ ಎಲ್ಲೂ ಆಕ್ಸಿಜನ್ ಕೊರತೆಯಾಗಿಲ್ಲ. ಸದ್ಯ ಎರಡನೇ ಅಲೆ ಕೊರೊನಾ ಸೋಂಕಿನ ಹೋರಾಟ ಮಧ್ಯೆ ಇದ್ದೇವೆ ನಾವೆಲ್ಲರೂ ಒಟ್ಟಿಗೆ ಸೇರಿ ಹೋರಾಟ ನಡೆಸಬೇಕಿದೆ. ಎಲ್ಲರ ಜೊತೆಗೆ ಸಭೆ ನಡೆಸುತ್ತೇನೆ. ಮುಂದಿನ ಒಂದು ವಾರದಲ್ಲಿ 2,000 ಐಸಿಯು ಮಾಡಿಲರ್ ಐಸಿಯು ಬೆಂಗಳೂರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಮಾಜಿ ಸಚಿವ ಎಂ.ಬಿ ಪಾಟೀಲ್ ಅವರ ಆಸ್ಪತ್ರೆಯಲ್ಲಿ ಉತ್ತಮ ಕೆಲಸ ನಡೆಯುತ್ತಿದೆ, ಸರ್ಕಾರಕ್ಕೆ ಜನರಿಗೆ ಸ್ಪಂದಿಸಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.