Advertisement
ನಾವು ಫಾಸ್ಟ್ಯಾಗ್ ಬದಲು ಜಿಪಿಎಸ್ ವ್ಯವಸ್ಥೆ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದೇವೆ. ನಮ್ಮ ಮುಂದೆ 2 ಆಯ್ಕೆಗಳಿವೆ.
Related Articles
Advertisement
ಆದರೆ, ಇದೆಲ್ಲವೂ ಸಂಸತ್‌ನಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆದ ಬಳಿಕವಷ್ಟೇ ಜಾರಿಗೆ ಬರಲಿದೆ ಎಂದೂ ತಿಳಿಸಿದ್ದಾರೆ.
ನಾನೇ ಟೋಲ್ ಪಿತಾಮಹ:ಸಿಟಿ ವ್ಯಾಪ್ತಿಯೊಳಗೆ ಟೋಲ್ ಪ್ಲಾಜಾ ನಿರ್ಮಿಸಿರುವ ಕಾರಣ ಸ್ಥಳೀಯರು ಕೂಡ ಟೋಲ್ ಪಾವತಿಸಬೇಕಾದ ಸ್ಥಿತಿಯಿದೆ ಎಂಬ ಪ್ರತಿಪಕ್ಷ ನಾಯಕರ ಕಳವಳಕ್ಕೆ ಉತ್ತರಿಸಿದ ಗಡ್ಕರಿ, ಆದಷ್ಟು ಬೇಗೆ ಈ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ. ಜತೆಗೆ, ನಾನು ದೇಶದ “ಎಕ್ಸ್‌ಪ್ರೆಸ್‌ವೇ ಟೋಲ್ ಟ್ಯಾಕ್ಸ್‌ನ ಪಿತಾಮಹ’. 90ರ ದಶಕದಲ್ಲಿ ಸಚಿವನಾಗಿದ್ದಾಗ ಮಹಾರಾಷ್ಟ್ರದಲ್ಲಿ ಅಂಥ ಮೊದಲ ಹೆದ್ದಾರಿ ನಿರ್ಮಿಸಿದ್ದೇ ನಾನು ಎಂದೂ ತಿಳಿಸಿದ್ದಾರೆ. ಇದೇ ವೇಳೆ, 3 ವರ್ಷಗಳಲ್ಲಿ ದೇಶದಲ್ಲಿ 26 ಪರಿಸರ ಸ್ನೇಹಿ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದೆ. ಇವು ನಿರ್ಮಾಣವಾದರೆ ಪ್ರಯಾಣದ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ. ಚೆನ್ನೈನಿಂದ ಬೆಂಗಳೂರಿಗೆ 2 ಗಂಟೆಗಳಲ್ಲಿ, ದೆಹಲಿಯಿಂದ ಮುಂಬೈಗೆ 12 ಗಂಟೆಗಳಲ್ಲಿ ತಲುಪಬಹುದು ಎಂದೂ ಗಡ್ಕರಿ ಹೇಳಿದ್ದಾರೆ. ವಿಧೇಯಕ ವಾಪಸ್:
ಈ ನಡುವೆ, ದತ್ತಾಂಶ ಸುರಕ್ಷತಾ ವಿಧೇಯಕವನ್ನು ಸರ್ಕಾರ ಬುಧವಾರ ಲೋಕಸಭೆಯಿಂದ ವಾಪಸ್ ಪಡೆದಿದೆ. ವಿಧೇಯಕಕ್ಕೆ 81 ಬದಲಾವಣೆಗಳನ್ನು ತರುವಂತೆ ಸಂಸದೀಯ ಸಮಿತಿ ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಖಂಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ನೇತೃತ್ವದಲ್ಲಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ, ಕಲಾಪ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.