Advertisement

ಮಕ್ಕಳ ಕಲಿಕೆ ಖೋತಾ ಪತ್ತೆಗೆ ಸಮೀಕ್ಷೆ

10:02 PM Nov 10, 2021 | Team Udayavani |

ನವದೆಹಲಿ: ಕೋವಿಡ್‌ ಲಾಕ್‌ಡೌನ್‌ನಲ್ಲಿ ಶಾಲೆಗಳು ಮುಚ್ಚಿದ್ದರಿಂದಾಗಿ ಮಕ್ಕಳ ಕಲಿಕೆಯಲ್ಲಿ ಆವರಿಸಿರುವ ಕೊರತೆಯನ್ನು ಪತ್ತೆ ಹಚ್ಚುವ ಸಲುವಾಗಿ ದೇಶದ ಲಕ್ಷಾಂತರ ಮಕ್ಕಳನ್ನು ಸಮೀಕ್ಷೆಗೊಳಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಸಾಧನಾ ಸಮೀಕ್ಷೆ (ಎನ್‌ಎಎಸ್‌) ಅಡಿಯಲ್ಲಿ ಈ ಸಮೀಕ್ಷೆ ನಡೆಯಲಿದೆ.

Advertisement

ಕೇಂದ್ರ ಶಿಕ್ಷಣ ಇಲಾಖೆ ಈ ಕುರಿತಂತೆ ಪ್ರಕಟಣೆ ನೀಡಿದ್ದು, 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 733 ಜಿಲ್ಲೆಗಳ 1.23 ಲಕ್ಷ ಶಾಲೆಗಳಲ್ಲಿ ಕಲಿಯುತ್ತಿರುವ 3, 5, 8 ಹಾಗೂ 10ನೇ ತರಗತಿಗೆ ಸೇರಿದ 38 ಲಕ್ಷ ವಿದ್ಯಾರ್ಥಿಗಳನ್ನು ಸಮೀಕ್ಷೆಗೊಳಪಡಿಸಲಾಗುತ್ತದೆ.
ದೇಶದ 22 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳು ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಮಾತನಾಡಿಸಿ ಅವರಿಂದ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ.

ಉದ್ದೇಶವೇನು?
ಈ ಸಮೀಕ್ಷೆಯಿಂದ, ಕೊರೊನಾ ಲಾಕ್‌ಡೌನ್‌ನಿಂದಾಗಿ ಮಕ್ಕಳ ಕಲಿಕೆಗೆ ತೊಂದರೆ ನೀಡಿದ ಅಂಶಗಳಾವ್ಯವು ಎಂಬುದನ್ನು ತಿಳಿಯಲು ನಿರ್ಧರಿಸಲಾಗಿದೆ. ಅಲ್ಲದೆ, ಕೊರೊನಾ ಲಾಕ್‌ಡೌನ್‌ ಸಂದರ್ಭವು, ಆನ್‌ಲೈನ್‌ ಶಿಕ್ಷಣ ಅಥವಾ ವಚ್ಯುìವಲ್‌ ತರಗತಿಗಳು ಎಂಬ ಹೊಸ ಕಲಿಕಾ ಮಾಧ್ಯಮವನ್ನು ಪರಿಚಯಿಸಿದೆ. ಅದನ್ನು ಮುಂದೆ ಯಾವ ಹಂತಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಅಭಿವೃದ್ಧಿಗೆ ಬಳಸಬಹುದು ಎಂಬುದನ್ನು ನಿರ್ಧರಿಸುವ ಉದ್ದೇಶ, ಕೇಂದ್ರ ಶಿಕ್ಷಣ ಇಲಾಖೆಗಿದೆ.

ಇದನ್ನೂ ಓದಿ:ಐಎನ್‌ಕ್ಸ್‌ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲಿಸಲು ಚಿದು, ಪುತ್ರಗೆ ಅವಕಾಶ

ಹಿಂದೆಯೂ ಆಗಿತ್ತು ಸಮೀಕ್ಷೆ
ಇದೇ ರೀತಿಯ ಸಮೀಕ್ಷೆಯೊಂದು 2017ರಲ್ಲಿ ನಡೆದಿದ್ದು ಅದರ ಉದ್ದೇಶ ಬೇರೆಯಾಗಿತ್ತು. 3, 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಯಾವ ರೀತಿಯಲ್ಲಿದೆ ಎಂಬುದನ್ನು ತಿಳಿಯಲು ಆ ಸಮೀಕ್ಷೆ ನಡೆಸಲಾಗಿತ್ತು.

Advertisement

ಸಮೀಕ್ಷೆಯ ವ್ಯಾಪ್ತಿ
36 ರಾಜ್ಯಗಳು
733 ಜಿಲ್ಲೆಗಳು
1.23 ಲಕ್ಷ ಶಾಲೆಗಳು
38 ಲಕ್ಷ ವಿದ್ಯಾರ್ಥಿಗಳು
3, 5, 8, 10ನೇ ತರಗತಿ ವಿದ್ಯಾರ್ಥಿಗಳು ಭಾಗಿ

Advertisement

Udayavani is now on Telegram. Click here to join our channel and stay updated with the latest news.

Next