Advertisement

ಗೋಹತ್ಯೆ ತಡೆಗೆ ಹೆಣ್ಣು ಕರುಗಳ ಮೊರೆ ಹೋದ ಸರ್ಕಾರ!

08:11 AM Jul 11, 2017 | |

ನವದೆಹಲಿ: ಇದಕ್ಕೆ ಪಕ್ಕಾ ಕಮರ್ಷಿಯಲ್‌ ಚಿಂತನೆ ಎನ್ನಬೇಕೋ ಅಥವಾ ಗೋ ಹತ್ಯೆ ತಡೆಗಾಗಿ ಮಾಡಿದ ಉಪಾಯವೆನ್ನಬೇಕೋ ಗೊತ್ತಿಲ್ಲ! ಆದರೆ, ಕೇಂದ್ರ ಸರ್ಕಾರ ಗೋಹತ್ಯೆ ತಡೆಗಾಗಿ ಹೆಣ್ಣು ಕರುಗಳ ಮೊರೆ ಹೋಗಿದೆ ಎಂಬುದು ಮಾತ್ರ ಸತ್ಯ.

Advertisement

ಭಾರತದ ಕೆಲ ಪ್ರದೇಶಗಳಲ್ಲಿ ಇನ್ನೂ ಮನುಷ್ಯರ ವಿಚಾರದಲ್ಲಿ ವಂಶ ವೃದ್ಧಿಗೆ ಗಂಡೇ ಬೇಕು ಎಂಬ ಮೂಢ ನಂಬಿಕೆ ಇದೆ. ಆದರೆ ಹಸುವಿನ ವಿಚಾರದಲ್ಲಿ ಇದು ಪೂರ್ಣ ಉಲ್ಟಾ ಆಗಿದೆ. ಕೇಂದ್ರ ಸರ್ಕಾರದ ಹೊಸ ಸೂಚನೆಯಂತೆ, ಇನ್ನು ಮುಂದೆ ದೇಶದ 10 ಪಶು ಸಂಗೋಪನಾ ಕೇಂದ್ರಗಳು ಗಂಡುಕರುಗಳ ಜನನಕ್ಕೆ ಕಡಿವಾಣ ಹಾಕುವ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ. ಬೇರೆ ದೇಶಗಳಲ್ಲಿ ಮಾಂಸಕ್ಕಾಗಿಯೇ ಗಂಡು ಕರುಗಳ ಸಂತತಿ ಬಳಕೆ ಮಾಡಲಾಗುತ್ತದೆ. ಆದರೆ ಭಾರತದ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿರುವುದರಿಂದ ಗಂಡು ಕರುಗಳ ಜನನಕ್ಕೆ ಪ್ರೋತ್ಸಾಹ ನೀಡಲು ಸಾಧ್ಯವಿಲ್ಲ. ಹೀಗಾಗಿ ಪ್ರಸ್ತುತ ಬಳಕೆಯಲ್ಲಿರುವ ತಂತ್ರಜ್ಞಾನ ಬಳಸಿಕೊಂಡು ಕೇವಲ ಹೆಣ್ಣು ಕರುಗಳನ್ನೇ ಪಡೆಯಲು ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಇದಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಕಾರ್ಯಕ್ಕೆ ಯಂತ್ರೋಪಕರಣಗಳನ್ನು ಬಳಸುವುದ  ರಿಂದ ಎತ್ತು, ಹೋರಿಗಳು ರೈತರಿಗೆ ಹೊರೆಯಾಗಿವೆ. ಹೀಗಾಗಿ ಹಾಲು ನೀಡುವ ಹಸುಗಳನ್ನು ಹೊಂದಲು ಕೃಷಿಕರು ಇಚ್ಛಿಸುತ್ತಾರೆ. ನಿರ್ದಿಷ್ಟವಾಗಿ ಹೆಣ್ಣು ಕರು ಹುಟ್ಟಿಗೆ ಕಾರಣವಾಗುವ ಕೃತಕ ವೀರ್ಯ ಬಳಸಿದಾಗ ಒಂದು ಗಂಡುಕರುವಿಗೆ ಪ್ರತಿಯಾಗಿ ಒಂಬತ್ತು ಹೆಣ್ಣು ಕರುಗಳನ್ನು ಪಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಬಿಎಐಎಫ್ ಡೆವಲಪ್‌ಮೆಂಟ್‌ ರಿಸರ್ಚ್‌ ಫೌಂಡೇಷನ್‌ನ ಸಲಹೆಗಾರರಾಗಿರುವ ನಾರಾಯಣ್‌ ಹೆಗಡೆ ಅವರು ಹೇಳುವಂತೆ, ದೇಶದಲ್ಲಿ ಹಸು ಮತ್ತು ಹೋರಿಗಳ ಅನುಪಾತ ಸಮನಾಗಿದೆ. ಆದರೆ ಬರಡು ರಾಸುಗಳ ಸಂಖ್ಯೆ ಹೆಚ್ಚಿದೆ. ಲಿಂಗಾಧಾರಿತ ವೀರ್ಯ ಉತ್ಪಾದನೆ ಘಟಕಗಳ ಸ್ಥಾಪನೆಯಿಂದ ಭಾರತದ ಕೃಷಿಕರಿಗೆ
ಹೆಚ್ಚು ಲಾಭವಾಗಲಿದೆ. ಹೆಚ್ಚು ಹೆಣ್ಣು ಕರುಗಳು ಹುಟ್ಟುವುದರಿಂದ ಹಾಲಿನ ಉತ್ಪಾದನೆ ಹೆಚ್ಚಿ, ಕೃಷಿಕರ ಆದಾಯ ವೃದ್ಧಿಯಾಗಲಿದೆ. 

ಕೃತಕ ವೀರ್ಯ ಹೇಗೆ ಕಾರ್ಯನಿರ್ವಹಿಸುತ್ತದೆ?
“ಹೆಣ್ಣು’ ವೀರ್ಯ (ಹೆಣ್ಣು ಕರುಗಳ ಜನನಕ್ಕೆ ಕಾರಣವಾಗುತ್ತದೆ) ಗಂಡು ವೀರ್ಯಕ್ಕಿಂತಲೂ ಹೆಚ್ಚು ಡಿಎನ್‌ಎ ಅಂಶಗಳನ್ನು ಹೊಂದಿರುತ್ತದೆ. ಈ ಡಿಎನ್‌ಎ ವರ್ಣತಂತುಗಳನ್ನು ಹೊಂದಿರುತ್ತದೆ.

Advertisement

ವರ್ಣತಂತುಗಳನ್ನು ಲೇಸರ್‌ ಕಿರಣಗಳ ಪ್ರಕ್ರಿಯೆಗೆ ಒಡ್ಡಿದಾಗ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ ಕೃತಕ ವೀರ್ಯ ಹೇಗೆ ಕಾರ್ಯನಿರ್ವಹಿಸುತ್ತದೆ?

ಇಂಥ ವೀರ್ಯವನ್ನು ಬಳಸಿದರೆ ಒಂದು ಗಂಡುಕರುವಿಗೆ ಪ್ರತಿಯಾಗಿ ಒಂಬತ್ತು ಹೆಣ್ಣು ಕರುಗಳನ್ನು ಪಡೆಯಬಹುದು

ಲಿಂಗಾಧಾರಿತ ವೀರ್ಯವನ್ನು ಪ್ರಸ್ತುತ ಅಮೆರಿಕ, ಕೆನಡಾ, ಯುರೋಪ್‌ ರಾಷ್ಟ್ರಗಳು, ಬ್ರೆಜಿಲ್‌, ಚೀನಾ ಮತ್ತು ಆಸ್ಟ್ರೇಲಿಯಾದಲ್ಲಿ ಬಳಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next