Advertisement

ಶಿರೂರು ಸರಕಾರಿ ಪದವಿಪೂರ್ವ ಕಾಲೇಜು : 1.50 ಲ.ರೂ. ಅನುದಾನದ ಶೌಚಾಲಯ: ಕಳಪೆ ಕಾಮಗಾರಿ

03:03 AM Mar 11, 2022 | Team Udayavani |

ಬೈಂದೂರು: ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳಿಗೆ ಅನುಕೂಲ
ವಾಗಬೇಕು ಎಂದು ಹತ್ತಾರು ವಿಭಾಗದ ಅನುದಾನಗಳನ್ನು ಗ್ರಾಮೀಣ ಮಟ್ಟದವರೆಗೆ ಒದಗಿಸುತ್ತದೆ. ಆದರೆ ರಾಜ
ಕೀಯ ಹಸ್ತಕ್ಷೇಪ, ಗುತ್ತಿಗೆದಾರರು ಹಣ ಮಾಡುವ ಉದ್ದೇಶದಿಂದ ಲಕ್ಷಾಂತರ ರೂ. ಕೊಳ್ಳೆ ಹೊಡೆದರೂ ಸಹ ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳು ಗಮನ ಹರಿಸದಿರುವುದು ಬೈಂದೂರು ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಕಂಡುಬರುತ್ತಿದೆ.

Advertisement

ಸೆಕೆಂಡ್‌ ಹ್ಯಾಂಡ್‌ ಬಾಗಿಲು, ಸಿಮೆಂಟ್‌ ಇಲ್ಲ, ಬಣ್ಣವೂ ಕಾಣುತ್ತಿಲ್ಲಶಿರೂರು ಗ್ರಾ.ಪಂ ವ್ಯಾಪ್ತಿಯ ಶಿರೂರು
ಸರಕಾರಿ ಪ.ಪೂ. ಕಾಲೇಜಿನ ದುರಸ್ತಿಗೆತಾ. ಪಂ. ಸಂಯುಕ್ತ ಅನುದಾನ ಯೋಜನೆಯಡಿಯಲ್ಲಿ 1.50 ಲ.ರೂ. ಮಂಜೂ ರಾಗಿದೆ. ಇದರ ಗುತ್ತಿಗೆ ಪಡೆದ ವ್ಯಕ್ತಿ ಸೆಕೆಂಡ್‌ಹ್ಯಾಂಡ್‌ ಬಾಗಿಲು, ಕಳಪೆ ಮಟ್ಟದ ಸಿಮೆಂಟ್‌, ಗಲೀಜು ಟೈಲ್ಸ್‌, ನೀರಿನ ವ್ಯವಸ್ಥೆ ಇಲ್ಲದೆ ಸಂಪೂರ್ಣ ಕಳಪೆ ಕಾಮಗಾರಿ ನಡೆಸಿದ್ದು ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದಂತಾಗಿದೆ. ಮಾತ್ರವಲ್ಲದೆ ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕ ವೃಂದ ಈ ಕಳಪೆ ಕಾಮಗಾರಿ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರುನೀಡಿದರೂ ಯಾವ ಅಧಿಕಾರಿಯೂ ಭೇಟಿ ನೀಡಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಣಾಭಿಮಾನಿಗಳ ಅಭಿಪ್ರಾಯವಾಗಿದೆ.

ಕ್ರಮ ಕೈಗೊಳ್ಳಿ
ಶಾಲಾಭಿವೃದ್ದಿಗಾಗಿ ಶಿಕ್ಷಕರು,ಪಾಲಕರು, ಶಾಲಾಭಿವೃದ್ದಿ ಸಮಿತಿ, ದಾನಿಗಳ ಸಹಕಾರದಿಂದ ಹತ್ತಾರು ಅಭಿವೃದ್ಧಿ ಯೋಜನೆಗೆ ಪ್ರಯತ್ನ ನಡೆಸಲಾಗುತ್ತಿದೆ.ಆದರೆ ಇಂತಹ ಗುತ್ತಿಗೆದಾರರು ಕಾಟಾಚಾರದ ಕಾಮಗಾರಿ ನಡೆಸಿ ಸರಕಾರದ ಹಣ ಪೋಲಾಗುವುದು ನಿಲ್ಲಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು.
-ತುಳಸೀದಾಸ್‌ ಮೊಗೇರ್‌, ಪ್ರೌಢಶಾಲಾ
ವಿಭಾಗದ ಕಾರ್ಯಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next