Advertisement
ಬಿಹಾರದ ಬಿಜೆಪಿಯ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್ ಸೋಮವಾರ ಮಾತನಾಡಿ ಪಾಟ್ನಾದ 5ನೇ ದೇಶ್‌ರತ್ನಾ ರಸ್ತೆಯಲ್ಲಿನ ಸರಕಾರಿ ಬಂಗಲೆಯಲ್ಲಿ ವಾಸವಿದ್ದ ತೇಜಸ್ವಿ ಯಾದವ್ ಅಲ್ಲಿಂದ ತೆರಳಿದ ನಂತರ “ಹೈಡ್ರಾಲಿಕ್ ಬೆಡ್‌ಗಳು , ಎಸಿ ಮತ್ತು ದೀಪಗಳು, ಸ್ನಾನದ ಕೊಠಡಿಯಲ್ಲಿನ ನೀರಿನ ಕೊಳಾಯಿಗಳು, ಬ್ಯಾಡ್ಮಿಂಟನ್ ಕೋರ್ಟ್ ಮ್ಯಾಟ್ ,ಫೌಂಟೇನ್ ಲೈಟ್‌ಗಳು ಮತ್ತು ಸೋಫಾಗಳು ವಿವಿಧ ವಸ್ತುಗಳು ಮನೆಯಿಂದ ಕಾಣೆಯಾಗಿವೆ ಎಂದು ಆರೋಪಿಸಿದರು.
ಸಾರ್ವಜನಿಕ ಸ್ಥಾನದಲ್ಲಿರುವವರು ಇಂತಹ ಅವಹೇಳನಕಾರಿ ಚಟುವಟಿಕೆಗಳ ಮಾಡಬಾರದು. ತೇಜಸ್ವಿ ಯಾದವ್ ಬಂಗಲೆ ನವೀಕರಣಕ್ಕೆ ಎಷ್ಟು ಹಣ ಖರ್ಚಾಗಿದೆ ಎಂದು ವಿಚಾರಿಸಲು ತನಿಖಾ ಸಮಿತಿ ರಚಿಸಿ ಪ್ರಕರಣ ದಾಖಲಿಸಬೇಕು” ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹಿಸಿದ್ದಾರೆ.
Related Articles
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸರುವ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಸರಕಾರಿ ಬಂಗಲೆಗೆ ನೀಡಿರುವ ವಸ್ತುಗಳ ಪಟ್ಟಿಯನ್ನು ತಕ್ಷಣವೇ ಬಿಡುಗಡೆಗೊಳಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಬಿಜೆಪಿ ಸುಳ್ಳು ಆರೋಪಗಳ ಮಾಡುತ್ತಿದೆ ಮತ್ತು ಮಾಧ್ಯಮಗಳ ಹೆಡ್‌ಲೈನ್‌ಗಳ ನಿರ್ವಹಿಸುವುದಕ್ಕಾಗಿ ಬಿಜೆಪಿ ಇಂತಹ ಆರೋಪ ಮಾಡುತ್ತಿದೆ. ಲಂಚ ಪಡೆದಿದ್ದಕ್ಕಾಗಿ ಬಿಹಾರದ ಎನ್‌ಐಎಯ ಡಿಎಸ್‌ಪಿಯೊಬ್ಬರನ್ನು ಸಿಬಿಐ ಬಂಧಿಸಿತ್ತು. ಆ ಡಿಎಸ್ಪಿ ಬಿಜೆಪಿಯ ಮಾಜಿ ಶಾಸಕರೊಬ್ಬರ ಅಳಿಯ. ಆದರೆ ಬಿಹಾರಿ ಮಾಧ್ಯಮಗಳಲ್ಲಿ ಇದು ಎಲ್ಲೂ ಪ್ರಕಟವಾಗಿಲ್ಲ. ಆ ಡಿಎಸ್ಪಿ ಬಿಹಾರದಲ್ಲಿ ನೂರಾರು ಜನರನ್ನು ಸುಲಿಗೆ ಮಾಡಿದ್ದಾನೆ. ಹಣ ಕೊಡಲು ನಿರಾಕರಿಸಿದರೆ ನಕ್ಸಲರ ಜೊತೆ ಸಂಬಂಧವಿದೆ ಎಂದು ಬಂಧಿಸುವ ಎಂದು ಬೆದರಿಕೆ ಹಾಕಿದ್ದಾನೆ…ದೇಶದಲ್ಲಿ ಸರ್ಕಾರ ಹೀಗೆ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು.
Advertisement