Advertisement

ಪಿಎಫ್ ಗೆ ಶೇ.8.5 ಬಡ್ಡಿ ದರ: ವಿತ್ತ ಇಲಾಖೆ ಒಪ್ಪಿಗೆ

08:28 PM Oct 29, 2021 | Team Udayavani |

ನವದೆಹಲಿ: ಭವಿಷ್ಯ ನಿಧಿ(ಪಿಎಫ್) ಚಂದಾದಾರರಿಗೆ ಕೇಂದ್ರ ಸರ್ಕಾರವು “ಬೆಳಕಿನ ಹಬ್ಬ’ದ ಸಿಹಿ ನೀಡಿದೆ.

Advertisement

2020-21ರ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇ.8.5ರಷ್ಟು ಬಡ್ಡಿ ನೀಡಲು ಕೇಂದ್ರ ವಿತ್ತ ಸಚಿವಾಲಯ ಒಪ್ಪಿಗೆ ನೀಡಿದೆ.

ಇದರಿಂದಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಯ ಸುಮಾರು 5 ಕೋಟಿ ಚಂದಾದಾರರ ಖಾತೆಗೆ ಸದ್ಯದಲ್ಲೇ ಪಿಎಫ್ ಬಡ್ಡಿ ಮೊತ್ತ ಜಮೆ ಆಗಲಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಕಾರ್ಮಿಕ ಸಚಿವರ ನೇತೃತ್ವದಲ್ಲಿ ನಡೆದ ಸೆಂಟ್ರಲ್‌ ಬೋರ್ಡ್‌ ಆಫ್ ಟ್ರಸ್ಟೀಸ್‌(ಸಿಬಿಟಿ) ಸಭೆ ಕಳೆದ ವಿತ್ತ ವರ್ಷದ ಪಿಎಫ್ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.8.5ಕ್ಕೆ ನಿಗದಿಪಡಿಸಿತ್ತು. ಅದಕ್ಕೆ ಈಗ ವಿತ್ತ ಸಚಿವಾಲಯ ಸಮ್ಮತಿ ಸೂಚಿಸಿದೆ.

ಇದನ್ನೂ ಓದಿ:ಪುನೀತ್ ಸರ್ ಅತ್ಯಂತ ಸುಲಭವಾಗಿ ತಲುಪಬಹುದಾಗಿದ್ದ ಸೂಪರ್ ಸ್ಟಾರ್: ಮಣಿಕಾಂತ್ ಕದ್ರಿ

Advertisement

ಕಳೆದ ವರ್ಷದ ಮಾರ್ಚ್‌ನಲ್ಲಿ, 2019-20ರ ಪಿಎಫ್ ಬಡ್ಡಿ ದರವನ್ನು 7 ವರ್ಷಗಳಲ್ಲೇ ಕನಿಷ್ಠಕ್ಕೆ ಅಂದರೆ ಶೇ.8.5ಕ್ಕೆ ಇಪಿಎಫ್ಒ ಇಳಿಸಿತ್ತು. ಅದಕ್ಕೂ ಹಿಂದಿನ ವರ್ಷ(2018-19) ಬಡ್ಡಿ ದರ ಶೇ.8.65ರಷ್ಟಿತ್ತು. 2017-18ರಲ್ಲಿ ಶೇ.8.55, 2015-16ರಲ್ಲಿ ಶೇ.8.8ರಷ್ಟು, 2013-14ರಲ್ಲಿ ಶೇ.8.75ರಷ್ಟು ಬಡ್ಡಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next