Advertisement

ವೀಕ್ಷಕರಿಲ್ಲದೆ ಯು.ಎಸ್‌. ಓಪನ್‌ ; ಈ ವಾರ ಅಧಿಕೃತ ಪ್ರಕಟನೆ ಸಾಧ್ಯತೆ

02:36 AM Jun 17, 2020 | Hari Prasad |

ನ್ಯೂಯಾರ್ಕ್: ಕೋವಿಡ್ 19 ವೈರಸ್‌ನಂಥ ಅಪಾಯಕಾರಿ ಕಾಲಘಟ್ಟದಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಪಂದ್ಯಾವಳಿಯ ಆಯೋಜನೆಗೆ ಹಾದಿ ತೆರೆದುಕೊಳ್ಳುವ ಸೂಚನೆ ಲಭಿಸಿದೆ.

Advertisement

ವೀಕ್ಷಕರನ್ನು ನಿರ್ಬಂಧಿಸಿ ಯು.ಎಸ್‌. ಓಪನ್‌ ಟೂರ್ನಿಯನ್ನು ನಡೆಸಲು ಸಂಘ ಟಕರು ಮುಂದಾಗಿದ್ದಾರೆ. ಇದಕ್ಕಾಗಿ ನ್ಯೂಯಾರ್ಕ್‌ ರಾಜ್ಯ ಸರಕಾರದ ಒಪ್ಪಿಗೆಯನ್ನು ಕಾಯಲಾಗುತ್ತಿದೆ.

ಕಠಿನ ಆರೋಗ್ಯಸೂಚಿಯನ್ನು ಪಾಲಿಸಿ ಈ ಪಂದ್ಯಾವಳಿಯನ್ನು ನಡೆಸಲು ನಾವು ಸಿದ್ಧ ಎಂಬುದಾಗಿ ಯುಎಸ್‌ ಓಪನ್‌ ಟೆನಿಸ್‌ ಸಂಘಟನಾ ಸಮಿತಿ ಹೇಳಿದೆ.

ಇದರ ವಕ್ತಾರ ಕ್ರಿಸ್‌ ಮಿಡ್‌ಮೈರ್‌ ಟೆಲಿಫೋನ್‌ ಸಂದರ್ಶನವೊಂದರ ಮೂಲಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ್ದಾರೆ. ಈ ವಾರ ಅಧಿಕೃತ ಪ್ರಕಟನೆ ಹೊರಬೀಳುವ ನಿರೀಕ್ಷೆ ಇದೆ.

ಇದೇ ವೇಳೆ ನ್ಯೂಯಾರ್ಕ ಸರಕಾರದ ವಕ್ತಾರ ಆ್ಯಂಡ್ರ್ಯೂ ಕುಮೊ ಕೂಡ ಸಕಾರಾತ್ಮಕ ಹೇಳಿಕೆಯೊಂದನ್ನು ನೀಡಿರುವುದು ಸಂಘಟಕರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ. ‘ಯುಎಸ್‌ ಓಪನ್‌ ಸಂಘಟನಾ ಸಮಿತಿಯಿಂದ ಪ್ರಸ್ತಾವವೊಂದು ಬಂದಿದೆ. ಇದನ್ನು ಪರಿಶೀಲಿಸಲಾಗುವುದು’ ಎಂದು ಕುಮೊ ಹೇಳಿದ್ದಾರೆ.

Advertisement

ಸ್ಟಾರ್‌ ಆಟಗಾರರ ಗೈರು?
ನ್ಯೂಯಾರ್ಕ್‌ನಲ್ಲಿ ಕೋವಿಡ್ 19 ಸೋಂಕು ತೀವ್ರ ಗೊಂಡಿರುವುದರಿಂದ ಈ ಪಂದ್ಯಾವಳಿಯಿಂದ ಸ್ಟಾರ್‌ ಟೆನಿಸಿಗರನೇಕರು ದೂರ ಸರಿಯುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ನಂ.1 ಆಟಗಾರರಾದ ನೊವಾಕ್‌ ಜೊಕೋವಿಕ್‌, ಆ್ಯಶ್ಲಿ ಬಾರ್ಟಿ, ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಯುಎಸ್‌ ಓಪನ್‌ ನಡೆಸಲು ಅವಸರ ಮಾಡುವುದು ಬೇಡ ಎಂದಿದ್ದಾರೆ.

5 ಬಾರಿಯ ಚಾಂಪಿ ಯನ್‌ ರೋಜರ್‌ ಫೆಡರರ್‌ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದಾಗಿ ಈ ವರ್ಷವಿಡೀ ವಿಶ್ರಾಂತಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಯುಎಸ್‌ ಓಪನ್‌ ಪಂದ್ಯಾವಳಿ ನಡೆದರೆ ಇದರಲ್ಲಿ ಪಾಲ್ಗೊಳ್ಳುವ ಖಚಿತ ನಿರ್ಧಾರವನ್ನು ಯಾವ ಟೆನಿಸ್‌ ಆಟಗಾರರೂ ತೆಗೆದುಕೊಂಡಿಲ್ಲ ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next