Advertisement

High School, ಪಿಯು ಮಕ್ಕಳಿಗೆ “ವೃತ್ತಿ ಸಲಹೆ’ ನೀಡಲು ಸರಕಾರದ ಸಿದ್ಧತೆ

02:11 AM Jan 11, 2024 | Team Udayavani |

ಬೆಂಗಳೂರು: ಪದವಿ, ಸ್ನಾತ ಕೋತ್ತರ, ವೃತ್ತಿಪರ ಕಾಲೇಜು, ವಿವಿಗಳಲ್ಲಿ ಸಾಮಾನ್ಯವಾಗಿರುವ ವೃತ್ತಿ ಮಾರ್ಗದರ್ಶನವನ್ನು ರಾಜ್ಯದ ಸರಕಾರಿ ಹೈಸ್ಕೂಲ್‌ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೂ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ.

Advertisement

ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷ 2024-25ರಲ್ಲಿ ವೃತ್ತಿ ಮಾರ್ಗದರ್ಶನ ಕೋಶಗಳನ್ನು ಪ್ರಾರಂಭಿಸುವ ಬಗ್ಗೆ ಸಮಗ್ರ ಶಿಕ್ಷಣ ಕರ್ನಾಟಕ ಈಗಾಗಲೇ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದು ಬಂದಿದೆ.

ಮುಂದಿನ ಬಜೆಟ್‌ನಲ್ಲಿ ವೃತ್ತಿ ಮಾರ್ಗದರ್ಶನ ಕೋಶ ಯೋಜನೆಯನ್ನು ಮುಖ್ಯಮಂತ್ರಿಗಳು ಪ್ರಕಟಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳಲ್ಲಿ ಗೊಂದಲ ತಪ್ಪಿಸಲು ವೃತ್ತಿ ಮಾರ್ಗದರ್ಶನ ಅಗತ್ಯ ಎಂದು ಸರಕಾರ ಹೇಳಿದೆ.

ಗ್ರಾಮೀಣ, ಬಡ ಮಕ್ಕಳಿಗೆ ಹೈಸ್ಕೂಲ್‌ ಮತ್ತು ಪಿಯು ಮಟ್ಟದಲ್ಲಿ ಸೂಕ್ತ ಮಾರ್ಗದರ್ಶನ ಸಿಕ್ಕಿದರೆ ಅವರು ವೃತ್ತಿ ಬದುಕಿನ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕ (ಗುಣಮಟ್ಟ) ಮಾರುತಿ ಎಂ.ಆರ್‌. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next