Advertisement

Karnataka; ಸರಕಾರ Vs ಅತಿಥಿ ಉಪನ್ಯಾಸಕರು

01:40 AM Jan 01, 2024 | Team Udayavani |

ಬೆಂಗಳೂರು: ಅತಿಥಿ ಉಪನ್ಯಾಸಕರ ಗೌರವಧನವನ್ನು ಪ್ರತೀ ತಿಂಗಳಿಗೆ 5 ಸಾವಿರ ರೂ. ಏರಿಕೆ ಮಾಡಿದರೂ ಸೇವಾಭದ್ರತೆ ನೀಡುವಂತೆ ಪಟ್ಟುಹಿಡಿದಿದ್ದಾರೆ. ಹೀಗಾಗಿ ಅಂಥವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಮೂಲಕ ಅವರ ವಿರುದ್ಧ ಸರಕಾರ ಬಲ ಪ್ರಯೋಗಕ್ಕೆ ಮುಂದಾಗಿದೆ.

Advertisement

ಸೋಮವಾರ ಅತಿಥಿ ಉಪನ್ಯಾಸಕರು ತುಮಕೂರಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಸೋಮವಾರ ಕಾಲೇಜುಗಳಿಗೆ ಗೈರು ಹಾಜರಾಗುವ ಅತಿಥಿ ಉಪನ್ಯಾಸಕರ ಪಟ್ಟಿ ತಯಾರಿಸಿ, ಅವರ ವಿವರಗಳನ್ನು ಸಲ್ಲಿಸುವಂತೆ ತನ್ನ ವ್ಯಾಪ್ತಿಯಲ್ಲಿ ಇರುವ ಎಲ್ಲ 430 ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.

ಇಂದು ಪಾದಯಾತ್ರೆ; ಕ್ರಮಕ್ಕೆ ಮುಂದಾದರೆ ಕೋರ್ಟ್‌ಗೆ
ಬೆಂಗಳೂರು: ರಾಜ್ಯ ಸರಕಾರ ಸೇವಾ ಭದ್ರತೆ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಅತಿಥಿ ಉಪನ್ಯಾಸಕರ ಒಕ್ಕೂಟವು ತುಮಕೂರಿನ ಸಿದ್ಧಗಂಗಾ ಮಠದಿಂದ ಬೆಂಗಳೂರಿಗೆ ಸೋಮವಾರ ಪಾದಯಾತ್ರೆ ಕೈಗೊಳ್ಳಲಿದೆ.

ಮಾಸಿಕ 5 ಸಾವಿರ ರೂ ಗೌರವ ಧನ ಹೆಚ್ಚಳ, ಆರೋಗ್ಯ ವಿಮೆ, ಐದು ಲಕ್ಷ ರೂಗಳ ನಿವೃತ್ತಿ ಇಡಗಂಟು ಭರವಸೆಯನ್ನು ನಾವು ಒಪ್ಪುವುದಿಲ್ಲ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ಹೇಳಿದ್ದಾರೆ.

ನಮ್ಮ ವಿರುದ್ಧ ಸರಕಾರ ಕಠಿನ ಕ್ರಮಕ್ಕೆ ಮುಂದಾದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಅವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next