Advertisement

ಸರ್ಕಾರಿ ಮಳಿಗೆ ಬಾಡಿಗೆಯಲ್ಲಿ ಉಪಗುತ್ತಿಗೆ ಹೊರೆ!

07:09 PM Sep 07, 2021 | Team Udayavani |

ಸಿಂಧನೂರು: ಸರ್ಕಾರದ ಬೊಕ್ಕಸಕ್ಕೆ ಬಾಡಿಗೆ ಪಾವತಿಯಾಗುವ ಯಾವುದೇ ಸರ್ಕಾರಿ ಮಳಿಗೆ ಆಯಾ ಸಂಸ್ಥೆ ಮಾತ್ರ ಹರಾಜು ಹಾಕಬಹುದು. ಪ್ರಭಾವ ಬಳಸಿ ಮಳಿಗೆ ಬಾಡಿಗೆ ಪಡೆದ ನಂತರ ಉಪಗುತ್ತಿಗೆ ನೀಡುವ ಪರಂಪರೆಯಿಂದಾಗಿ ಇಲ್ಲಿನ ಸಾರಿಗೆ ಘಟಕಕ್ಕೆಸೇರಿದ 19 ಮಳಿಗೆ ಕೇಳ್ಳೋರಿಲ್ಲವಾಗಿದೆ.

Advertisement

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ವಾರ್ಷಿಕ ‌ 30 ಲಕ್ಷ ರೂ. ಆದಾಯ ತರಬಹುದಾದ ಮಳಿಗೆಗಳು ಪಾಳು ಬಿದ್ದಿವೆ. 2006-07ನೇಸಾಲಿನಲ್ಲಿ ಬರೋಬ್ಬರಿ 1.70 ಕೋಟಿ ರೂ. ವ್ಯಯಿಸಿ ಸಾರಿಗೆ ಸಂಸ್ಥೆಗೆ ಸೇರಿದ ನಗರದ ಹೃದಯ ಭಾಗದಲ್ಲಿನ ಜಾಗದಲ್ಲಿ ಮಳಿಗೆ ನಿರ್ಮಿಸಲಾಗಿದೆ. ಅವು ಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ನಿರ್ಲಕ್ಷ್ಯಕಾಣಿಸಿದೆ.

27ರಲ್ಲಿ 8 ಮಾತ್ರ ಹರಾಜು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬರೋಬ್ಬರಿ 2 ಬಾರಿ ಟೆಂಡರ್‌ ಕರೆದಾಗಲೂ 8 ಮಳಿಗೆ ಮಾತ್ರ ಹರಾಜಿಗೆ
ಒಳಪಟ್ಟಿವೆ. ಅದರಲ್ಲೂ ಕೆಲವರು ಮಾತ್ರ ವ್ಯಾಪಾರ ಆರಂಭಿಸಿದ್ದಾರೆ. ಕೆಲವರು ಮಳಿಗೆ ಗುತ್ತಿಗೆ  ಪಡೆದ ಮೇಲೆ ಅಲ್ಲಿಗೆ ಕಾಲಿಟ್ಟಿಲ್ಲ. ಬದಲಿಗೆ ಮಳಿಗೆ ಬಾಡಿಗೆಗೆ ಇದೆ ಎಂಬ ಬೋರ್ಡ್‌ ನೇತು ಹಾಕಿದ್ದಾರೆ. ಈ ರೀತಿ ಸರ್ಕಾರಿ ಮಳಿಗೆಯನ್ನು ಬಾಡಿಗೆಗೆ ಖಾಸಗಿ ವ್ಯಕ್ತಿ ಫಲಕ ಹಾಕಲು ನಿಯಮದಲ್ಲಿ ಅವಕಾಶವಿಲ್ಲ. ಸರ್ಕಾರಿ ಮಳಿಗೆಗೆ ಫಲಕ ಹಾಕಿದ್ದರೂ ಕೇಳ್ಳೋರಿಲ್ಲವಾಗಿದೆ.

ಉಪಗುತ್ತಿಗೆಯ ಕಾಟ: ಉಪಗುತ್ತಿಗೆ ಪಡೆದವರು ಅದರ ದುಪ್ಪಟ್ಟು ಬಾಡಿಗೆಗೆ ವ್ಯಾಪಾರಿಗಳಿಗೆ ನೀಡುವ ಪರಂಪರೆ ಬೆಳೆದು ಬಂದ ಹಿನ್ನೆಲೆಯಲ್ಲಿ
ವಾಸ್ತವವಾಗಿ ದುಡಿಯುವವರು ಸಂಕಷ್ಟ ಎದುರಿಸುವಂತಾಗಿದೆ. ಟೆಂಡರ್‌ ಸಂದರ್ಭದ ಲಾಬಿ, ಅನಗತ್ಯ ಪೈಪೋಟಿಯಿಂದಾಗಿ ಇರುವ ‌ ಮಳಿಗೆ ಕೂಡ ಬಳಸುವವರು ಇಲ್ಲವಾಗಿದೆ. 27 ವಾಣಿಜ್ಯ ಮಳಿಗೆ ಒಳಗೊಂಡ ಸಂಕೀರ್ಣ ಸದ್ಯ ಬಯಲು ಶೌಚಾಲಯ ತಾಣವಾಗಿದೆ. ಮುಂದಿನ ಐದಾರು ಅಂಗಡಿ ಮಾತ್ರ ಬಳಕೆಯಾಗುತ್ತಿವೆ. ಉಳಿದವುಗಳಿಗೆ  ಬೀಗ ಜಡಿಯಲಾಗಿದೆ. ಉಪಗುತ್ತಿಗೆ ಕಾಟ ತಪ್ಪಿಸಿದರೆ ಟೆಂಡರ್‌ನಲ್ಲಿ ಪಾಲ್ಗೊಳ್ಳಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಇದನ್ನೂ ಓದಿ:ಭಾರತದ ಗಡಿ ಪ್ರದೇಶ ಚೀನಾಗೆ ಹೊಸ ಕಮಾಂಡರ್‌

Advertisement

ಗೂಡಂಗಡಿ ತೆರವಿಗೆ ಪತ್ರ
ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಗೂಡಂಗಡಿಗಳಿವೆ. ಸಾರಿಗೆ ಸಂಸ್ಥೆಯ ಮಳಿಗೆಗಳಿಗೆ ಇವು ಅಡ್ಡವಾದಹಿನ್ನೆಲೆಯಲ್ಲಿ ಅನಧಿಕೃತ ಅಂಗಡಿ ತೆರವುಗೊಳಿಸಲು ಸಾರಿಗೆ ಸಂಸ್ಥೆ ಪತ್ರ ಬರೆದಿದೆ. ನಗರಸಭೆ ಅಧಿಕಾರಿಗಳು ಈ ಮಳಿಗೆಗಳಿಗೆ ನಗರಸಭೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಅವರನ್ನು ತೆರವುಗೊಳಿಸುವ ಪ್ರಶ್ನೆಯೇ ಇಲ್ಲವೆಂಬ ಉತ್ತರ ನೀಡಿದ್ದಾರೆ

ಈವರೆಗೂ ಕ್ರಮ ಶೂನ್ಯ
ಉದ್ದೇಶಿತ ವ್ಯಾಪಾರಕ್ಕೆಹೊರತುಪಡಿಸಿ ಬೇರೆ ರೀತಿಯ ಚಟುವಟಿಕೆ ಸರ್ಕಾರಿ ಮಳಿಗೆಗಳಲ್ಲಿ ನಡೆಸುವಂತಿಲ್ಲ. ಈ ನಿಯಮ ಅನ್ವಯಿಸಿಎಪಿಎಂಸಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿ, ತೋಟಗಾರಿಕೆ ಇಲಾಖೆ ಆವರಣದ 12 ಮಳಿಗೆ ಮಾಲೀಕರಿಗೆ ನೋಟಿಸ್‌ ನೀಡಿದ್ದರು. ನಂತರ ದಲ್ಲಿ ಯಾವುದೇ ಕ್ರಮ ಜಾರಿಯಾಗಲಿಲ್ಲ. ಇಂತಹ ಮೃದು ಧೋರಣೆಯಿಂದಾಗಿ ಬಹುತೇಕಕಡೆ ಸರ್ಕಾರಿ ಮಳಿಗೆಗಳು ಉಪ ಬಾಡಿಗೆ ನೀಡುವ ವ್ಯವಹಾರಕ್ಕೆ ದಾಳವಾಗಿವೆ. ನ್ಯಾಯವಾಗಿ ವ್ಯಾಪಾರ ನಡೆಸುವವರು, ದುಬಾರಿಗೆ ಬಾಡಿಗೆಯನ್ನು ಸರ್ಕಾರದ ಬದಲಿಗೆಖಾಸಗಿ ವ್ಯಕ್ತಿಗಳಿಗೆ ನೀಡಬೇಕಾದ ಅನಿವಾರ್ಯತೆ ತಲೆದೋರಿದೆ.

ಕಮರ್ಷಿಯಲ್‌ ಕಾಂಪ್ಲೆಕ್ಸ್‌ನ 27 ಮಳಿಗೆ ಪೈಕಿ 8 ಮಳಿಗೆಹೊರತುಪಡಿಸಿ, ಉಳಿದವುಗಳಿಗೆ ಟೆಂಡರ್‌ಕರೆಯಲಾಗುವುದು. ಆಸಕ್ತರು ಅರ್ಜಿ ಹಾಕಿದರೆ, ಅವಕಾಶ ನೀಡಲಾಗುತ್ತದೆ. ವಾರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ.
-ಐ.ಸಿ. ಹೊಸಮನಿ,
ಡಿಟಿಒ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸೆ

ಸಾರಿಗೆ ಸಚಿವರನ್ನು ಸಂಪರ್ಕಿಸಿ, ಅವರಿಂದ ಸಾರಿಗೆ ಸಂಸ್ಥೆಯ ಮಳಿಗೆ ಉದ್ಘಾಟಿಸುವುದಕ್ಕೆ ನಿರ್ಧರಿಸಲಾಗಿದೆ. ಪುನರ್‌ ಟೆಂಡರ್‌ಕರೆದು ಎಲ್ಲ ಮಳಿಗೆ ಹರಾಜುಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ವೆಂಕಟರಾವ್‌ ನಾಡಗೌಡ,
ಶಾಸಕರು, ಸಿಂಧನೂರು

-ಯಮನಪ್ಪ ಪವಾರ

 

Advertisement

Udayavani is now on Telegram. Click here to join our channel and stay updated with the latest news.

Next