ಚೇಳೂರು: ಕೊರೊನಾ ಹಿನ್ನೆಲೆ ಪ್ರತಿಯೊಬ್ಬರೂ ಸರ್ಕಾರದ ನಿಯಮ ಪಾಲಿಸಿಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆ ಗ್ರಾಪಂ ಸದಸ್ಯ ಅಜಯ್‌ಕುಮಾರ್ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಹಾಗೂಬಡವರಿಗೆ ಲಾಕ್‌ಡೌನ್ ಮುಗಿಯುವರಗೆ ಉಚಿತ ಊಟದ ವ್ಯವಸ್ಥೆ ಏರ್ಪಡಿಸಿದ್ದಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆಕಠಿಣ ಕ್ರಮ ಕೈಗೊಂಡಿದ್ದರೂ ಜನ ಇಲ್ಲಸಲ್ಲದ ನೆಪ ಹೇಳಿ ಓಡಾಡುತ್ತಿದ್ದು, ಇದರಿಂದಕೊರೊನಾ ನಿಯಂತ್ರಣ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಅಜಯ್ ಕುಮಾರ್ ಆಸ್ಪತ್ರೆ ರೋಗಿಗಳಿಗೆ ಹಾಗೂ ಬಡವರಿಗೆ ಉಚಿತ ಊಟದವ್ಯವಸ್ಥೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇಂತಹ ವ್ಯವಸ್ಥೆ ಸದುಪಯೊಗಪಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಗ್ರಾಪಮ ಆಡಳಿತ ಅಧಿಕಾರಿ, ಕಂದಾಯ, ಆರೋಗ್ಯಇಲಾಖೆ ಮತ್ತು ಆಶಾ ಕಾರ್ಯಕರ್ತರ ಸಹಯೋಗದೊಂದಿಗೆ ಮನೆ ಮನೆ ಭೇಟಿನೀಡಿ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಬರುತ್ತಿದೆ.
ಕೊರೊನಾ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಜಾಗೃತಿಯಿಂದ ಇರಬೇಕು ಎಂದರು.ಗ್ರಾಪಂ ಸದಸ್ಯ ಅಜಯ್‌ಕುಮಾರ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಸಾಕಷ್ಟುಸಂಘ- ಸಂಸ್ಥೆಗಳ ಸಹಾಯ ದೊರೆಯುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗೆಬಂದು ಹೋಗುವ ಬಡ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತೇವಡೆಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ,ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ವೈದ್ಯಾಧಿಕಾರಿ ಡಾ.ಮಹಾಂತೇಶ್, ಗುರುರೇಣುಕಾರಾಧ್ಯ, ಗ್ರಾಪಂ ಸದಸ್ಯ ಮಹಾ ರುದ್ರಸ್ವಾಮಿ, ನರಸಿಂಹಮೂರ್ತಿ, ರೇಣುಕಯ್ಯ,ದಯಾನಂದ್ ಹಾಗೂ ಇತರರು ಇದ್ದರು.