Advertisement

ನಿಪ್ಪಾಣಿಗೆ ಸರ್ಕಾರಿ ಪಪೂ ಕಾಲೇಜು

02:06 PM Aug 07, 2020 | Suhan S |

ಚಿಕ್ಕೋಡಿ: ನಿಪ್ಪಾಣಿ ನಗರದಲ್ಲಿ ಸರಕಾರಿ ಪದವಿ ಮಹಾವಿದ್ಯಾಲಯಕ್ಕೆ ಅನುಮೋದನೆ ಸಿಕ್ಕಿದ್ದು, ಪ್ರಸಕ್ತ ವರ್ಷದಿಂದ ಕಾಲೇಜು ಆರಂಭಿಸಲಾಗುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಿಪ್ಪಾಣಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಒಂದು ಸರಕಾರಿ ಪದವಿ ಮಹಾವಿದ್ಯಾಲಯವನ್ನು ಆರಂಭಿಸುವ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ನಮ್ಮ ಬೇಡಿಕೆಗೆ ಸ್ಪಂದಿಸಿದ್ದು, ಸ್ವಂತ ಕಟ್ಟಡದಲ್ಲಿ ಕಾಲೇಜು ಆರಂಭಿಸಲು ಸೂಚಿಸಿದ್ದಾರೆ. ಲೋಕಾರ್ಪಣೆಗೆ ಖುದ್ದಾಗಿ ಬರುವುದಾಗಿ ಹೇಳಿದ್ದಾರೆ ಎಂದರು. ಸದ್ಯ ಇಲ್ಲಿನ ಮುನಿಸಿಪಲ್‌ ಪ್ರೌಢಶಾಲೆಯ ಆವರಣದಲ್ಲಿ ಬಿ.ಎ. ಬಿ.ಕಾಂ., ಬಿ.ಎಸ್ಸಿ. ಪದವಿಗಳನ್ನು ತಲಾ 120 ದಾಖಲಾತಿಗಳೊಂದಿಗೆ ಆರಂಭಿಸಲಾಗುವುದು. ಪ್ರಾಚಾರ್ಯರಾಗಿ ಎ.ಪಿ. ಮುಲ್ಲಾ ಅವರನ್ನು ನಿಯೋಜಿಸಲಾಗಿದ್ದು ಕ್ಷೇತ್ರದ ವಿದ್ಯಾರ್ಥಿಗಳು ಅವರ ಮೊ.ಸಂ. 9448630701 ಸಂಪರ್ಕಿಸಿ ದಾಖಲಾತಿ ಪಡೆಯಬೇಕು ಎಂದರು.

ನಗರ ಸಮೀಪದ ಗವಾನ ಗ್ರಾಮದಲ್ಲಿ 40 ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲಾಗಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ ಅಕ್ಕೋಳ ರಸ್ತೆಯಲ್ಲಿರುವ ದೇವರಾಜ ಅರಸು ಮಹಿಳಾ ವಸತಿ ನಿಲಯ, ತಾಲೂಕಿನ ಕಾರದಗಾ, ಬೇಡಕಿಹಾಳ ಮೊದಲಾದೆಡೆ ಸರಕಾರಿ ವಸತಿ ನಿಲಯಗಳಲ್ಲಿ ಸುಮಾರು 20 ರಿಂದ 30 ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸಲಾಗುವುದು. ಜೊತೆಗೆ ಜೊಲ್ಲೆ ಉದ್ಯೋಗ ಸಮೂಹದ ಎಕ್ಸಂಬಾದ ಮತ್ತು ಶ್ರೀಪೇವಾಡಿಯ ಶಾಲಾ ಆವರಣದಲ್ಲಿ ಸುಮಾರು 40 ಹಾಸಿಗೆಯ ಕೇರ್‌ ಸೆಂಟರ್‌ ಆರಂಭಿಸಲು ಸೂಚಿಸಲಾಗಿದೆ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪ್ರಾಚಾರ್ಯ ಎ.ಪಿ. ಮುಲ್ಲಾ, ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next