ಕೆ.ಆರ್.ನಗರ: ಕೇಂದ್ರ ಮತ್ತು ರಾಜ್ಯಸರ್ಕಾರದ ಜನಪರ ಯೋಜನೆಗಳನ್ನುಜನರಿಗೆ ಮನವರಿಕೆ ಮಾಡಿಕೊಟ್ಟು, ಪಕ್ಷವನ್ನು ತಳಮಟ್ಟದಿಂದ ಮುಖಂಡರು ಮತ್ತುಕಾರ್ಯಕರ್ತರು ಸಂಘಟಿಸಬೇಕು ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯ ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದ ಆದಿಶಕ್ತಿ ತೋಪಮ್ಮಸಮುದಾಯ ಭವನದಲ್ಲಿ ನಡೆದ ತಾಲೂಕುಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಚುನಾವಣೆಯಲ್ಲಿ ಪಕ ಅÒ ತಿ ಹೆಚ್ಚು ಸ್ಥಾನಗಳನ್ನುಪಡೆಯುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕರ್ತರ ಸೋಲು: ಜಗತ್ತು ಕಂಡಜನಪ್ರಿಯ ಪ್ರಧಾನಿಗಳಲ್ಲಿ ಒಬ್ಬರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರುಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಇಡೀ ವಿಶ್ವವೇ ಭಾರತ ದೇಶದತ್ತ ತಿರುಗಿನೋಡುವಂತೆ ಮಾಡಿದ್ದರು. ಆದರೆ,ನಂತರದ ಚುನಾವಣೆಗಳಲ್ಲಿ ಪರಾಭವಗೊಂಡಾಗ ಅವರು ಕೊಟ್ಟ ಉತ್ತರ ಇದು ನನ್ನಸೋಲಲ್ಲ. ಪಕ್ಷದ ಕಾರ್ಯಕರ್ತರ ಸೋಲು ಎಂದಿದ್ದರು ಎಂದು ಸ್ಮರಿಸಿದರು.
ಜಯಗಳಿಸಲು ಸಾಧ್ಯ: ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತದ ರಾಜ್ಯ ಸರ್ಕಾರ ನೂರಾರುಜನಪ್ರಿಯ, ಬಡವರ ಪರವಾದಯೋಜನೆಗಳನ್ನು ರೂಪಿಸಿ ಜನರಿಗೆ ತಲುಪಿಸಿದ್ದು, ಇವುಗಳ ಬಗ್ಗೆ ನಾವು ಜನರಿಗೆಅರಿವು ಮೂಡಿಸಿ ಸಂಘಟಿಸಿದರೆ ಪಕ್ಷಮುಂದಿನ ಚುನಾವಣೆಗಳಲ್ಲಿ ಜಯಗಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಅಧ್ಯಕ್ಷ ಕೆ.ವೈ.ಮಂಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಾಮಾಂತರಬಿಜೆಪಿ ಉಪಾಧ್ಯಕ್ಷ ರಾಜೇಗೌಡ, ವಕ್ತಾರಮಿರ್ಲೆ ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿಯೋಗಾನಂದ, ಟಿಎಪಿಸಿಎಂ ಎಸ್ ಅಧ್ಯಕ್ಷಎಚ್.ಡಿ.ಪ್ರಭಾಕರ್‌ಜೈನ್, ಮಾಜಿ ವಕ್ತಾರಎಚ್.ಪಿ.ಗೋಪಾಲ್ ಮಾತನಾಡಿದರು.ಪುರಸಭಾ ಸದಸ್ಯೆ ಕೆ.ಬಿ.ವೀಣಾ, ಎಪಿಎಂಸಿನಿರ್ದೇಶಕ ಪ್ರಕಾಶ್, ಕುಪ್ಪೆ ಗ್ರಾಪಂ ಅಧ್ಯಕ್ಷೆಗೌರಮ್ಮ, ಜಿಲ್ಲಾ ಗ್ರಾಮಾಂತರ ಬಿಜೆಪಿಉಪಾಧ್ಯಕ್ಷೆ ಶ್ವೇತಾಗೋಪಾಲ್, ಖಜಾಂಚಿಎ.ಜಿ.ನಂಜೇಶ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಚಂದಗಾಲುರಾಚಯ್ಯ, ಎಸ್.ಟಿ. ಮೋರ್ಚಾ ಜಿಲ್ಲಾ ಉಪಾಧ್ಯಕ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ರಾಮನಾಯಕ, ತಾಲೂಕು ಮಹಿಳಾ ಮೋರ್ಚಾಧ್ಯಕ್ಷೆ ದ್ರಾಕ್ಷಾಯಿಣಿ, ಮುಖಂಡರಾದ ಸಾ.ರಾ. ತಿಲಕ್, ಎಚ್ .ವಿ.ಅನಿಲ್, ಸೋಮಶೇಖರ್, ಉಮಾಶಂಕರ ಮತ್ತಿತರರು ಹಾಜರಿದ್ದರ .