Advertisement
ಕೋವಿಡ್ ಮೂರನೇ ಅಲೆಯ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ದಿನಂಪ್ರತಿ ಮುನ್ನೂ ರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿನ ಸಂಖ್ಯೆಯೂ ದಿನವಹಿ ಏರಿಕೆಯಾಗುತ್ತಿದೆ. ಕೋವಿಡ್ ನಿಯಮ ಪಾಲನೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಮಿನಿ ವಿಧಾನಸೌಧ, ಜಿಲ್ಲಾಧಿಕಾರಿ ಕಚೇರಿ, ವೆನಾÉಕ್ ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ, ಬ್ಯಾಂಕ್‌ಗಳ ಎಟಿಎಂ, ಬಸ್ ನಿಲ್ದಾಣ, ಮಾಲ್‌ಗಳು ಸಹಿತ ವಿವಿಧ ಕಡೆಗಳಲ್ಲಿ “ಸುದಿನ’ ತಂಡ ರಿಯಾಲಿಟಿ ಚೆಕ್ ನಡೆಸಿದೆ.
Related Articles
ಚಿಕಿತ್ಸೆ ಸಹಿತ ವಿವಿಧ ಕಾರಣಕ್ಕೆ ವೆನ್ಲಾಕ್ ಆಸ್ಪತ್ರೆಗೆ ಪ್ರತೀ ದಿನ ನೂರಾರು ಮಂದಿ ಆಗಮಿಸುತ್ತಾರೆ. ವಿಪರ್ಯಾಸ ಅಂದರೆ ವೆನ್ಲಾಕ್ ಆಸ್ಪತ್ರೆಯಲ್ಲೇ ಕೋವಿಡ್ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಸ್ಯಾನಿಟೈಸರ್ ಇಲ್ಲ. ಸಾಮಾಜಿಕ ಅಂತರ, ಮಾಸ್ಕ್ ಕುರಿತು ಜಾಗೃತಿ ಮೂಡಿಸಲು ಯಾವುದೇ ಸಿಬಂದಿ ಇಲ್ಲ.
Advertisement
“ಮಾಸ್ಕ್ ಕಡ್ಡಾಯ’ ಬೋರ್ಡ್‌ನಲ್ಲಿ ಮಾತ್ರಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ತೆರವು ಬಳಿಕ ಬಹುತೇಕ ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡಿವೆ. ನಗರದ ಹಲವು ಅಂಗಡಿಗಳಲ್ಲಿ “ಮಾಸ್ಕ್ ಕಡ್ಡಾಯ’ ಎಂಬ ಬೋರ್ಡ್ ಇದೆ. ಆದರೆ ಬಹುತೇಕರು ಮಾಸ್ಕ್ ಅಳವಡಿಸದೇ ಅಂಗಡಿಗಳಿಗೆ ಬರುತ್ತಿದ್ದಾರೆ. ಮಾಲ್‌ಗಳಿಗೆ ಬರಲು ಲಸಿಕೆ ಪ್ರಮಾಣಪತ್ರ ಕಡ್ಡಾಯ ಎಂದು ಜಿಲ್ಲಾಡಳಿತ ಹೇಳಿದ್ದು, ಈ ನಿಯಮ ಪಾಲನೆಯಾಗುತ್ತಿದೆ. ಕೆಲವು ಮಂದಿ ಮಾಲ್‌ಗಳಿಗೆ ತೆರಳಿದ ಬಳಿಕ ಮಾಸ್ಕ್ ತೆಗೆಯುತ್ತಿದ್ದಾರೆ. ಒಂದೇ ದಿನಕ್ಕೆ ಸೀಮಿತಗೊಂಡ
“ದಿಢೀರ್ ಮಾಸ್ಕ್ ಡ್ರೈವ್’
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದ.ಕ. ಜಿಲ್ಲಾಡಳಿತ ಜನರಿಗೆ ಪದೇ ಪದೇ ಮನವಿ ಮಾಡುತ್ತಿದೆ. ಆದರೂ ಕೆಲವರು ಮಾತ್ರ ಇದನ್ನು ಪಾಲಿಸುತ್ತಲೇ ಇಲ್ಲ. ಅಂತಹ ಜನರಿಗೆ ಜಿಲ್ಲಾಡಳಿತ ಕೆಲವು ತಿಂಗಳ ಹಿಂದೆ ಬಿಸಿ ಮುಟ್ಟಿಸಿತ್ತು. ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರೇ ಖುದ್ದಾಗಿ ಪೊಲೀಸ್, ಪಾಲಿಕೆ ಅಧಿಕಾರಿಗಳೊಂದಿಗೆ ನಗರದ ವಿವಿಧ ಭಾಗಗಳಿಗೆ ದಿಢೀರ್ ದಾಳಿ ನಡೆಸಿ ನಗರದಲ್ಲಿ ಮಾಸ್ಕ್ ಧರಿಸದೆ ಓಡಾಡುವವರನ್ನು ತರಾಟೆಗೆ ತೆಗೆದು ಕೊಂಡಿದ್ದರು. ಅಲ್ಲದೇ ಸಾರ್ವಜನಿಕವಾಗಿ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಇದೇ ವೇಳೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಅವರು ಮಾಡಿದ್ದರು. ಬಳಿಕ ಆ ಮಟ್ಟದಲ್ಲಿ ದಿಢೀರ್ ಮಾಸ್ಕ್ ಡ್ರೈವ್ ನಗರದಲ್ಲಿ ನಡೆಯಲಿಲ್ಲ. 1.14 ಕೋಟಿ ರೂ. ದಂಡ ವಸೂಲಿ
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಸಹಿತ ಕೋವಿಡ್ ಮಾರ್ಗಸೂಚಿ ಕಡ್ಡಾಯ ಘೋಷಿಸಿದೆ. ಆದರೂ ದ.ಕ. ಜಿಲ್ಲೆಯಲ್ಲಿ ಮುಖಗವಸು ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸಿದವರಿಗೆ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ, ಗ್ರಾ.ಪಂ. ತಂಡವು ದಂಡ ವಿಧಿಸುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಅಲೆಯಿಂದ ಈವರೆಗೆ ಒಟ್ಟು 94,914 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 1,14,75,280 ರೂ. ದಂಡ ಸಂಗ್ರಹಿಸಲಾಗಿದೆ. ಸಾರ್ವಜನಿಕರಲ್ಲಿ
ಅರಿವು ಮೂಡಬೇಕು
ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ದೈನಂದಿನ ಪ್ರಕರಣ ಕೆಲವು ದಿನಗಳಿಂದ ಮತ್ತೆ ಇಳಿಮುಖಗೊಳ್ಳುತ್ತಿದೆ. ಸಾರ್ವಜನಿಕರು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಫಲಾನುಭವಿಗಳು ಕೊರೊನಾ ರೋಗ ನಿರೋಧಕ ಲಸಿಕೆ ಪಡೆದಿಲ್ಲವೂ ಅವರು ಪಡೆದುಕೊಳ್ಳಿ. ಸಾರ್ವಜನಿಕರೇ ಸ್ವಯಂ ಆಗಿ ಕಾರ್ಯಪ್ರವೃತ್ತರಾಗಿ ಕೋವಿಡ್ ನಿಯಮ ಪಾಲನೆ ಮಾಡಬೇಕಿದೆ..
-ಡಾ| ಕಿಶೋರ್ ಕುಮಾರ್,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ -ನವೀನ್ ಭಟ್ ಇಳಂತಿಲ