ಕುಂಬಳೆ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂಬ ಸುಪ್ರೀಂ ಕೋರ್ಟ್ ತೀರ್ಪಿನ ನೆಪದಲ್ಲಿ ಕೇರಳ ರಾಜ್ಯ ಎಡರಂಗ ಸರಕಾರ ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ. ಮಹಿಳೆಯರಿಗೆ ಎಂದೂ ಶಬರಿಮಲೆಯಲ್ಲಿ ಪ್ರವೇಶ ನಿರ್ಬಂಧಿಸಿಲ್ಲ.
ಕೆಲವೊಂದು ವಿಧಿವಿಧಾನಗಳನ್ನು ಪಾಲಿಸ ಬೇಕೆಂಬುದಾಗಿ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಿಬಂಧನೆ ಯನ್ನು ಹೇರಿದೆ.ಸರ್ವೋಚ್ಚ ನ್ಯಾಯಾಲಯದ ಆದೇಶವೆಂಬ ನೆಪದಲ್ಲಿ ಹಿಂದೂಗಳ ಭಾವನೆಯನ್ನು ಪರಿಗಣಿ ಸದೆ ಆಸ್ತಿಕರ ತಾಳ್ಮೆಯನ್ನು ಸರಕಾರ ಪರೀಕ್ಷಿಸುತ್ತಿದೆ. ಯಾವುದೇ ಬೆಲೆ ತೆತ್ತಾದರೂ ಶಬರಿಮಲೆಯ ಪಾವಿತ್ರ್ಯವನ್ನು ಕಾಪಾಡಲು ಹಿಂದೂಗಳು ಸಂಘಟಿತರಾಗಿ ಹೋರಾಡುವುದಾಗಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಎಡರಂಗ ಸರಕಾರವನ್ನು ಎಚ್ಚರಿಸಿದರು.
ಭಾರತೀಯ ಯುವಮೋರ್ಚಾ ವತಿಯಿಂದ ಕುಂಬಳೆಯಲ್ಲಿ ನಡೆದ ಬೃಹತ್ ಪ್ರತಿಭಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಘ ಪರಿವಾರದ ನಾಯಕರಾದ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಕೋಳಾರು ಸತೀಶ್ಚಂದ್ರ ಭಂಡಾರಿ, ವಿ.ರವೀಂದ್ರನ್, ಕೆ. ವಿನೋದನ್, ಧನಂಜಯ ಮಧೂರ್, ಸುಮಿತ್‌ರಾಜ್ ಪೆರ್ಲ, ಧನರಾಜ್, ಐತ್ತಪ್ಪ ಕುಲಾಲ್, ಕೆ. ರಮೇಶ್ ಭಟ್,ಸುಜಿತ್ ರೈ, ಪುಷ್ಪಲತಾ, ಹರೀಶ್ ಗಟ್ಟಿ, ಪ್ರೇಮಾ ಶೆಟ್ಟಿ, ಗಿರಿಜಾ, ಪ್ರಭಾವತಿ, ಉಷಾಕುಮಾರಿ, ಕುಂಬಳೆ ಶ್ರೀ ಅಯ್ಯಪ್ಪ ಕೇÒತ್ರ ಸಮಿತಿ ಪದಾಧಿಕಾರಿಗಳಾದ ನ್ಯಾಯವಾದಿ ರಾಮಪಾಟಾಳಿ, ಎಂ. ಶಂಕರ ಆಳ್ವ, ಹಿಂದೂ ಐಕ್ಯವೇದಿಯ ನಾಯಕರಾದ ವಸಂತಿ, ಸಂದೀಪ್ ಗಟ್ಟಿ, ವಿನಯ ಆಳ್ವ ಕಾರ್ಲೆ, ಸುರೇಶ್ ಶಾಂತಿಪ್ಪಳ್ಳ, ಪೆರ್ವಾಡು ಶ್ರೀ ಅಯ್ಯಪ್ಪ ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಮಹಿಳಾ ಮೋರ್ಚಾ ಪದಾಧಿಕಾರಗಳ ಸಹಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಯುವಮೋರ್ಚಾ ಕುಂಬ್ಳೆ ಪಂಚಾಯತ್ ಸಮಿತಿ ಅಧ್ಯಕ್ಷ ಕೆ. ಸುಧಾಕರ ಕಾಮತ್ ಸ್ವಾಗತಿಸಿದರು. ಯುವಮೋರ್ಚಾ ಮಂಡಲ ಉಪಾಧ್ಯಕ್ಷ ಚಂದ್ರಕಾಂತ ಶೆಟ್ಟಿ ವಂದಿಸಿದರು.
ನಾಸ್ತಿಕ ಎಡರಂಗ ಸರಕಾರ ಮತ್ತು ರಾಜ್ಯ ದೇವಸ್ವಂ ಬೋರ್ಡ್ ಸವೋಚ್ಚ ನ್ಯಾಯಾಲಯದ ತೀರ್ಪನ್ನು ರಾಜಕೀಯ ಲಾಭಕ್ಕಾಗಿ ಪುನರ್‌ವಿಮರ್ಶೆ ನಡೆಸಲು ಮುಂದಾಗದಿರುವುದು ಅಕ್ಷಮ್ಯ ಅಪರಾಧವಾಗಿದೆ. ಆದುದರಿಂದ ಇನ್ನಾದರೂ ಮಹಿಳೆಯರ ಸಹಿತ ಬಹುಸಂಖ್ಯಾಕ ಭಕ್ತರ ಭಾವನೆಯನ್ನು ಪರಿಗಣಿಸಿ ಸರಕಾರ ನ್ಯಾಯಾಲಯದ ಮೊರೆ ಹೋಗಲು ಮುಂದಾಗಬೇಕು.
– ಕುಂಟಾರು ರವೀಶ ತಂತ್ರಿ
ಬಿ.ಜೆ.ಪಿ. ರಾಜ್ಯ ಸಮಿತಿ ಸದಸ್ಯ