Advertisement

ಸರಕಾರಿ ಆಸ್ಪತ್ರೆ ಹೆಲ್ಪ್ ಲೈನ್ : ಇಂದಿನಿಂದ ಮತ್ತೆ ಆರಂಭ

09:48 PM May 02, 2021 | Team Udayavani |

ಕುಂದಾಪುರ:  ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾಹಿತಿ ನೀಡುತ್ತಿದ್ದ ರಾಜ್ಯದ 50 ನಾಗರಿಕ ಸಹಾಯವಾಣಿ ಕೇಂದ್ರಗಳನ್ನು ರದ್ದು ಪಡಿಸುವಂತೆ ಸರಕಾರ ಆದೇಶ ನೀಡಿದ್ದರೂ ಕುಂದಾಪುರ ಆಸ್ಪತ್ರೆಯಲ್ಲಿ ಮತ್ತೆ ದೂರವಾಣಿ ರಿಂಗಿಣಿಸಲಿದೆ.

Advertisement

ಮಾರ್ಗದರ್ಶನ :

2017ರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ  ಜಿಲ್ಲೆ ಹಾಗೂ ಉಪ ವಿಭಾಗ ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು, ಅವರ ಬಂಧುಗಳಿಗೆ ಕ್ಲಪ್ತ ಸಮಯದಲ್ಲಿ ವೈದ್ಯಕೀಯ ಸೇವೆಗಾಗಿ ನಾಗರಿಕ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರತಿ ಕೇಂದ್ರಗಳಲ್ಲಿ ಒಬ್ಬ  ವ್ಯವಸ್ಥಾಪಕರು ಸೇರಿದಂತೆ 6 ಸಿಬಂದಿ ಗಳಿದ್ದರು. ಸಿಬಂದಿ ವೇತನ ಹಾಗೂ ಇತರ ನಿರ್ವಹಣೆಗಾಗಿ ಕೇಂದ್ರದಿಂದ ಶೇ. 70 ಹಾಗೂ ರಾಜ್ಯ ಸರಕಾರದಿಂದ ಶೇ. 30 ಅನುದಾನ ಬರುತ್ತಿತ್ತು.

ಕಾರ್ಯನಿರ್ವಹಣೆ :

ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಕೀಯ ಸೇವೆ ಮಾಹಿತಿ, ಸಂಬಂಧಿಸಿದ ವೈದ್ಯರ ಬಳಿ ಕಳುಹಿಸಿ, ವೈದ್ಯಕೀಯ ಪರೀಕ್ಷೆ ಹಾಗೂ ತಪಾಸಣೆಗೆ ನೆರವಾಗು ವುದು. ಆ್ಯಂಬುಲೆನ್ಸ್‌ ಸೇವೆಗೆ ಸಹಕರಿಸುವುದು. ರೋಗಿಗಳು ಹಾಗೂ ಅವರ ಮನೆಯವರೊಂದಿಗೆ ಸಮನ್ವಯ, ರೋಗಿ ಗಳು, ವೈದ್ಯರು,  ಸಿಬಂದಿಗಳೊಂದಿಗೆ ಪರಸ್ಪರ ಸಂವಹನ ಹಾಗೂ ಸಮನ್ವಯಕ್ಕೆ  ಮಾರ್ಗದರ್ಶನ ಸೇರಿದಂತೆ ಆಸ್ಪತ್ರೆಯ ದೈನಂದಿನ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದ ನಾಗರಿಕ ಸಹಾಯವಾಣಿ ಕೇಂದ್ರದ ಸಿಬಂದಿ  ಕೋವಿಡ್‌-19 ಸಂಕಷ್ಟದ ದಿನಗಳಲ್ಲಿ ಆಸ್ಪತ್ರೆಯ ಪ್ರಮುಖ ಕೊಂಡಿ ಯಾಗಿದ್ದರು.

Advertisement

ವಿಲೀನ :

ಎಪ್ರಿಲ್‌ನಿಂದ ಕೇಂದ್ರ ಸರಕಾರ  ಎನ್‌.ಎಚ್‌.ಎಂ. (ರಾಷ್ಟ್ರೀಯ ಆರೋಗ್ಯ  ಅಭಿಯಾನ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ಸಹಾಯ ವಾಣಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ಗ್ರಿವೆನ್ಸ್‌ ರಿಡ್ರೆಸಲ್‌ ವ್ಯವಸ್ಥೆ ಅಡಿಯಲ್ಲಿ 104 ಸಹಾಯವಾಣಿಯೊಂದಿಗೆ ವಿಲೀನಗೊಳಿಸಲು ಸೂಚಿಸಿದೆ. “ಮೇರಾ ಹಾಸ್ಪಿಟಲ್‌’ ಕಾರ್ಯಕ್ರಮದ ಮೂಲಕ ಇ-ಆಸ್ಪತ್ರೆ ಅಡಿಯಲ್ಲಿ ಅನುಷ್ಠಾನ ಗೊಳಿಸಲು ಸೂಚನೆ ನೀಡಿದೆ. ಆನ್‌ಲೈನ್‌  ಆಗಿರುವುದರಿಂದ ಇದು ಗ್ರಾಮಾಂತರದ ರೋಗಿಗಳಿಗೆ ಕಷ್ಟವಾಗುತ್ತಿತ್ತು.

ಶಾಸಕರಿಂದ ಪತ್ರ :

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಆಸ್ಪತ್ರೆಗೆ ಪತ್ರ  ಬರೆದು ಹೆಲ್ಪ್ಲೈನ್‌ ನಿಲ್ಲಿಸದಂತೆ ಸೂಚಿಸಿದ್ದರು. ಆದರಂತೆ 1 ತಿಂಗಳು ಆಸ್ಪತ್ರೆ ಸಿಬಂದಿಯಿಂದಲೇ ಘಟಕ ನಿರ್ವಹಿಸ ಲಾಗಿತ್ತು. ರವಿವಾರ ಸಚಿವ ಶ್ರೀನಿವಾಸ ಪೂಜಾರಿ ಅವರೂ ಹೆಲ್ಪ್ಲೈನ್‌ ಮುಂದು ವರಿಸುವಂತೆ ಸೂಚಿಸಿದ್ದಾರೆ. ಉದಯವಾಣಿ  ಮಾ.5ರಂದು ಈ ಕುರಿತು  ವರದಿ ಪ್ರಕಟಿಸಿತ್ತು. ಇದರ  ಪರಿಣಾಮ  ಈಗ ಹೆಲ್ಪ್ಲೈನ್‌ ಮತ್ತೆ ಸದ್ದು ಮಾಡಲಿದೆ. ಮೇ 1ರಿಂದ ಆಸ್ಪತ್ರೆಗೆ ಹೊರಗುತ್ತಿಗೆ ಸಿಬಂದಿ ನೇಮಕಾತಿಗೆ ಬೆಂಗಳೂರಿನ ದುರ್ಗಾ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆ ಗುತ್ತಿಗೆ ಪಡೆದಿದ್ದು ಇದರ ಮೂಲಕ ಆಸ್ಪತ್ರೆಯ ಆರೋಗ್ಯರಕ್ಷಾ ನಿಧಿಯಲ್ಲಿ ವೇತನ ನೀಡಿ ಮೂವರು ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಮೇ 1ರಿಂದ ಕಾರ್ಯಾರಂಭಿಸಿ ಎಂದು ಎ.27ರಂದೇ ಪತ್ರ ಬರೆಯಲಾಗಿದೆ. ಸೋಮವಾರದಿಂದ ಹೊಸ ಸಂಸ್ಥೆ ಮೂಲಕ ಆರಂಭವಾಗಲಿದೆ. ಈ  1 ತಿಂಗಳು ಆಸ್ಪತ್ರೆ ಸಿಬಂದಿಯೇ ನಿರ್ವಹಿಸಿ ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಡಾ| ರಾಬರ್ಟ್‌ ರೆಬೆಲ್ಲೋ,  ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಸರಕಾರಿ ಉಪವಿಭಾಗ ಆಸ್ಪತ್ರೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next