Advertisement
1925ರಲ್ಲಿ ಆರಂಭಗೊಂಡ ಈ ಶಾಲೆ 96 ವರ್ಷ ಪೂರೈಸಿದೆ. 1ರಿಂದ 7ನೇ ತರಗತಿಯಿರುವ ಶಾಲೆಯಲ್ಲಿ 2020-21ರಲ್ಲಿ 81 ಮಕ್ಕಳಿದ್ದು, 2021-22ರಲ್ಲಿ 98 ಮಕ್ಕಳ ದಾಖಲಾತಿಯ ಮೂಲಕ 17 ಮಕ್ಕಳು ಹೆಚ್ಚುವರಿಯಾಗಿದ್ದರು. ಹೀಗಾಗಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ ಮೂಲ ಸೌಕರ್ಯ ಒದಗಿಸಿ ಎಂಬ ಅಂಕಣವನ್ನು ಉದಯವಾಣಿ ಪ್ರಕಟಿಸಿ ಬೆಳಕುಚೆಲ್ಲಿತ್ತು. ವರದಿ ಆಲಿಸಿದ ವಿ.ಪ.ಶಾಸಕರು ಶಿಕ್ಷಕರ, ಶಾಲಾಡಳಿತದೊಂದಿಗೆ ಚರ್ಚಿಸಿ ಇದೀಗ 1ರಿಂದ 7ನೇ ತರಗತಿ ನೂತನ ಕಟ್ಟಡ ರಚನೆಗೆ ತಮ್ಮ ಅನುದಾನದಡಿ 1.50 ಕೋ.ರೂ. ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ.
Related Articles
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶತಮಾನದಂಚಿನ ಶಾಲಾ ಕಟ್ಟಡದ ಸ್ಥಿತಿ ಗಮನಿಸಿ ನೂತನ ಕಟ್ಟಡ ರಚನೆಗೆ ಅನುದಾನ ಒದಗಿಸುತ್ತಿದ್ದೇನೆ. ನನ್ನ ಮನೆಯ ಸಮೀಪವೇ ಇರುವ ಶಾಲೆಯಾದ್ದರಿಂದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ.
-ಹರೀಶ್ ಕುಮಾರ್,
ವಿಧಾನ ಪರಿಷತ್‌ಸದಸ್ಯ
Advertisement
35 ಲಕ್ಷ ರೂ. ಅನುದಾನನಾಲ್ವರು ಶಿಕ್ಷಕರಿರುವ ಈ ಶಾಲೆಗೆ ಕಟ್ಟಡದ್ದೇ ಕೊರತೆ ಎದುರಾಗಿತ್ತು. 96 ವರ್ಷ ಪೂರೈಸಿದ್ದರಿಂದ ಎಲ್ಲವೂ ಶತಮಾನದ ಪಟ್ಟಿಗೆ ಸೇರ್ಪಡೆ ಗೊಂಡಿತ್ತು. ಇದೀಗ 1.50 ಕೋ.ರೂ. ಅನುದಾನದಂತೆ 1ರಿಂದ 3ನೇ ತರಗತಿಗೆ ನಲಿಕಲಿ ಕೊಠಡಿ, 4ರಿಂದ 7ನೇ ತರಗತಿವರೆಗೆ ಪ್ರತ್ಯೇಕ ಕೊಠಡಿ ಹಾಗೂ 1 ಸ್ಮಾರ್ಟ್ ಕ್ಲಾಸ್ ಕೊಠಡಿ ರಚಿಸಲು ಯೋಜನೆ ರೂಪಿಸಲಾಗಿದೆ. ಆರಂಭಿಕ 35 ಲಕ್ಷ ರೂ. ಅನುದಾನ ಒದಗಿಸಿದ್ದು, ಜೂನ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಚಿಂತನೆ ನಡೆಸಲಾಗಿದೆ.