Advertisement

ಮುಕ್ತ ಮತ್ತು ದೂರ ಶಿಕ್ಷಣ ಕೇಂದ್ರಕ್ಕೆ ಸರ್ಕಾರ ಷರತ್ತು

11:26 PM Jun 15, 2019 | Team Udayavani |

ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯಗಳು ಮುಕ್ತ ಮತ್ತು ದೂರ ಶಿಕ್ಷಣ ಕಾರ್ಯಕ್ರಮಗಳನ್ನು ಆರಂಭಿಸಲು ಕಡ್ಡಾಯವಾಗಿ ಅನುಸರಿಸಬೇಕಾದ ಮಾರ್ಗಸೂಚಿ ಮತ್ತು ಮಾನದಂಡವನ್ನು ಸರ್ಕಾರ ಬಿಡುಗಡೆ ಮಾಡಿದೆ.

Advertisement

ವಿಶ್ವವಿದ್ಯಾಲಯವು ಮುಕ್ತ ಹಾಗೂ ದೂರ ಶಿಕ್ಷಣಕ್ಕೆ ಕಡ್ಡಾಯವಾಗಿ ಯುಜಿಸಿ ಮಾನ್ಯತೆ ಪಡೆದಿರಬೇಕು. ವಿವಿಯ ಪ್ರಾದೇಶಿಕ ವ್ಯಾಪ್ತಿಯೊಳಗೆ ಕೋರ್ಸ್‌ ನಡೆಸಬೇಕು, ಹೊರ ರಾಜ್ಯಗಳಲ್ಲಿ ನಡೆಸುವಂತಿಲ್ಲ. ಪರೀಕ್ಷೆ ಮತ್ತು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಯುಜಿಸಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಯಾವುದೇ ಕಾರಣಕ್ಕೂ ಖಾಸಗಿ ಅಥವಾ ಮಾನ್ಯತೆ ಹೊಂದಿರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರ ಹಂಚಿಕೆ ಮಾಡಬಾರದು. ಪರೀಕ್ಷೆಯ ಮೇಲ್ವಿಚಾರಣೆಗೆ ವಿವಿಗೆ ಸಂಬಂಧಿಸಿದ ಕಾಲೇಜಿನ ಬೋಧಕರನ್ನು ನೇಮಿಸಬೇಕು. ದೂರ ಶಿಕ್ಷಣ ವ್ಯಾಪಾರೀಕರಣಕ್ಕೆ ಅವಕಾಶ ನೀಡಬಾರದು. ಖಾಯಂ ಪ್ರಾಧ್ಯಾಪಕರನ್ನು ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನೇಮಿಸಬೇಕು, ಸಿಬಿಎಸ್‌ಇ ಮಾದರಿಯಲ್ಲೇ ಕೋರ್ಸ್‌ಗಳು ಇರಬೇಕು.

ಪ್ರತಿ ನಿರ್ದೇಶನಾಲಯದಲ್ಲೂ ಪ್ಲೇಸ್‌ಮೆಂಟ್‌ ಸೆಲ್‌ ತೆರೆಯಬೇಕು. ಇ-ಲರ್ನಿಂಗ್‌ ಮೂಲಕ ದೂರ ಶಿಕ್ಷಣದ ವ್ಯವಸ್ಥೆ ಮಾಡುವುದು ಸೇರಿದಂತೆ ಪ್ರಮುಖ 30 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next