Advertisement

Government Hospital ಸಮೀಪದ ಖಾಸಗಿ ಪ್ರಯೋಗಾಲಯ ಮುಚ್ಚಲು ಸರಕಾರ ಸುತ್ತೋಲೆ

11:07 PM Feb 28, 2024 | Team Udayavani |

ಬೆಂಗಳೂರು: ಸರಕಾರಿ ಆಸ್ಪತ್ರೆಯಿಂದ 200 ಮೀಟರ್‌ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಪ್ರಯೋಗಾಲಯಗಳನ್ನು(ಲ್ಯಾಬ್‌) ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಜತೆಗೆ ಆಸ್ಪತ್ರೆಯಿಂದ 200 ಮೀಟರ್‌ ಅಂತರದೊಳಗೆ ಯಾವುದೇ ಹೊಸ ಖಾಸಗಿ ಪ್ರಯೋಗಾಲಯಕ್ಕೆ ಅನುಮತಿ ಕೊಡಬಾರದೆಂದೂ ಸೂಚಿಸಿದೆ. ಜತೆಗೆ ಮುಚ್ಚಿದ ಪ್ರಯೋಗಾಲಯಗಳ ಸಂಪೂರ್ಣ ಮಾಹಿತಿಗಳನ್ನು ಮಾರ್ಚ್‌ 30ರ ಒಳಗೆ ಛಛ2ಞಛಿಛಜಿcಚlಃಜಞಚಜಿl.cಟಞ ಗೆ ರವಾನಿಸಬೇಕು ಎಂದು ಎಲ್ಲ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.

Advertisement

2019ರ ಎಪ್ರಿಲ್‌ 4ರ ಬಳಿಕ ಯಾವುದೇ ಹೊಸ ಖಾಸಗಿ ಪ್ರಯೋಗಾಲಯಗಳು ಸರಕಾರಿ ಆಸ್ಪತ್ರೆಯಿಂದ ರಾಜ್ಯ ಸರಕಾರ, ಕೇಂದ್ರ ಸರಕಾರ, ಸ್ಥಳೀಯ ಸಂಸ್ಥೆಗಳು, ಸ್ವಯತ್ತ ಸಂಸ್ಥೆಯಿಂದ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್‌ಗಳ ದೂರದ ಒಳಗೆ ಇದ್ದರೆ ಅಂತಹ ಲ್ಯಾಬ್‌ಗಳನ್ನು ಕೆಪಿಎಂಇ ಅಧಿನಿಯಮ 2007ರ ಸೆಕ್ಷನ್‌ (22) ಅನ್ವಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಆದೇಶಿಸುವಂತೆ ಎಲ್ಲ ಜಿಲ್ಲೆಯ ಅಧಿಕಾರಿಗಳು (ಅಧ್ಯಕ್ಷರು, ನೋಂದಣಿ ಮತ್ತು ಕುಂದು ಕೊರತೆ ನಿವಾರಣ ಪ್ರಾಧಿಕಾರ) ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next