Advertisement

ಹೊನ್ನಾವರದಲ್ಲಿ ಸರ್ಕಾರಿ ಬಸ್‌ ಪಲ್ಟಿ : 25 ಮಂದಿಗೆ ಗಾಯ 

11:45 AM Jul 23, 2017 | Team Udayavani |

ಹೊನ್ನಾವರ: ತಾಲೂಕಿನ ಕಡಗೇರಿ ಘಾಟ್‌ ಬಳಿ ಸರ್ಕಾರಿ ಬಸ್‌ ಪಲ್ಟಿಯಾಗಿ 25 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. 

Advertisement

ಗಾಯಾಳುಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂತ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಹೊನ್ನಾವರದಿಂದ ಮಾವಿನಕುರ್ವಾಗೆ ಬಸ್‌ ತೆರಳುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ. 

ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next