Advertisement

Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ

03:43 AM Jan 06, 2025 | Team Udayavani |

ಬೀದರ್‌: ಬಿಜೆಪಿ ಸರ್ಕಾರದ ಅವ ಧಿಯಲ್ಲಿ ಭರ್ತಿಯಾಗಿದ್ದ ಗೋಶಾಲೆಗಳು ಕಾಂಗ್ರೆಸ್‌ ಸರ್ಕಾರದಲ್ಲಿ ಖಾಲಿಯಾಗಿರುವುದು ಹೇಗೆ? ಗೋ ಶಾಲೆಗಳನ್ನು ಮುಚ್ಚುವುದರ ಮೂಲಕ ಕಾಂಗ್ರೆಸ್‌ ಸರ್ಕಾರ ಗೋಹತ್ಯೆಗೆ ಪ್ರಚೋದನೆ ನೀಡುತ್ತಿದೆ ಎಂದು ಪಶು ಸಂಗೋಪನೆ ಇಲಾಖೆ ಮಾಜಿ ಸಚಿವ ಪ್ರಭು ಚವ್ಹಾಣ ಟೀಕಿಸಿದ್ದಾರೆ.

Advertisement

ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ 14 ಗೋಶಾಲೆಗಳಿಗೆ ಗೋವುಗಳು ಬರುತ್ತಿಲ್ಲ ಎಂದು ಸರ್ಕಾರ ಸಮಜಾಯಿಷಿ ನೀಡಿ ಈ ಗೋಶಾಲೆಗಳನ್ನು ಬಂದ್‌ ಮಾಡಲು ಹಾಗೂ ಇದರ ಅನುದಾನವನ್ನು ಇತರೆ ಗೋಶಾಲೆಗಳಿಗೆ ನೀಡಲು ಮುನ್ನುಡಿ ಬರೆದಿರುವುದು ಬೇಸರ ತಂದಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಅಕ್ರಮ ಗೋವುಗಳ ಸಾಗಾಣಿಕೆ ಹೆಚ್ಚಳ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವುಗಳ ರಕ್ಷಣೆಗೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಗೋಹತ್ಯೆ ನಿಷೇಧ ಕಾನೂನು ಹಾಗೂ ಪ್ರಾಣಿ ಕಲ್ಯಾಣ ಮಂಡಳಿ, ಪಶು ಸಹಾಯವಾಣಿ, ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕೆ ತಂದು ಪ್ರಾಣಿಗಳ ರಕ್ಷಣೆಗೆ ಮುಂದಾಗಿತ್ತು. ಅಕ್ರಮ ಗೋವುಗಳ ಸಾಗಾಣಿಕೆ ಹೆಚ್ಚಾಗಿರುವುದರಿಂದ ಗೋಶಾಲೆಗೆ ಬರಬೇಕಾಗಿದ್ದ ಗೋವುಗಳೆಲ್ಲ ಕಸಾಯಿ ಖಾನೆಗೆ ಹೋಗುತ್ತಿವೆ ಇದರಿಂದಾಗಿ ಗೋಶಾಲೆಗಳು ಬರಿದಾಗುತ್ತಿವೆ. ಅಕ್ರಮ ಗೋವುಗಳ ಸಾಗಾಣಿಕೆಗೆ ತಡೆ ಒಡ್ಡಲು ನಿರ್ಮಾಣ ಮಾಡಿದ್ದ ಚೆಕ್‌ ಪೋಸ್ಟ್‌ಗಳನ್ನೆಲ್ಲ ಕಾಂಗ್ರೆಸ್‌ ಸರ್ಕಾರ ತೆರವುಗೊಳಿಸಿದೆ. ಇದರಿಂದಾಗಿ ಎಲ್ಲೆಂದರಲ್ಲಿ ಅಕ್ರಮ ಗೋವುಗಳ ಸಾಗಾಣಿಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ನೇತ್ರಾವತಿ ನದಿ ಸಾಕ್ಷಿ:

ನೇತ್ರಾವತಿ ನದಿಯ ಉಪನದಿಯಾದ ಮೃತ್ಯುಂಜಯ ನದಿಯಲ್ಲಿ 11 ಚೀಲಗಳಲ್ಲಿ ಚರ್ಮ ಸೇರಿದಂತೆ ತ್ಯಾಜ್ಯವನ್ನು ಎಸೆಯಲಾಗಿದೆ. ಇದು ರಾಜ್ಯದಲ್ಲಿ ಗೋ ಹತ್ಯೆ ಹೆಚ್ಚುತ್ತಿರುವುದರ ಸಂಕೇತವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಸರ್ಕಾರ ಸಹ ಗೋಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next