ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಅಭ್ಯರ್ಥಿ, ಅಬಕಾರಿ ಸಚಿವ ಕೆ. ಗೋಪಾಲಯ್ಯ ಅನೇಕಲ್ ಮತ್ತು ರಾಜಾಜಿನಗರದ ಬಿಜೆಪಿ ಅಭ್ಯರ್ಥಿಗಳ ಪರ ಶುಕ್ರವಾರ ಮತ ಯಾಚನೆ ನಡೆಸಿದರು.
ಅನೇಕಲ್‌ನ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭ್ಯರ್ಥಿ. ಕ್ಷೇತ್ರದ ಜನರು ಹೆಚ್ಚಿನ ಬಹುಮತವನ್ನು ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಗೋಪಾಲಯ್ಯ ಕೋರಿದರು.
ಇಡೀ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾದ ಸಮುದಾಯ.ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಕಟ್ಟಿರುವಂತಹ ಇತಿಹಾಸವನ್ನು ಸೂರ್ಯ ಹಾಗೂ ಚಂದ್ರ ಇರುವವರೆಗೂ ಮರೆಮಾಡಲು ಸಾಧ್ಯವಿಲ್ಲ. ನಾಡಪ್ರಭು ಕೆಂಪೇ ಗೌಡರನ್ನು ನಾವೆಲ್ಲರೂ ಪ್ರತಿದಿನ ಪೂಜೆ ಮಾಡಬೇಕು. ಒಕ್ಕಲಿಗ ಸಮುದಾಯ ಸಹಾಯ ಹಸ್ತ ಚಾಚುವುದರಲ್ಲಿ ಸದಾ ಮುಂದಿದೆ. ಕಷ್ಟಪಟ್ಟು ದುಡಿಯುವುದು ನಮ್ಮ ಗುಣವಾಗಿದೆ. ನಾವೆಲ್ಲರೂ ರೈತ ಕುಟುಂಬದವರು ಎಂದರು.
ಆನೇಕಲ್‌ನಲ್ಲಿ ಬಿಜೆಪಿ ಪ್ರಬಲವಾದ ಶಕ್ತಿ ಹೊಂದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ನಾಡಪ್ರಭು ಕೆಂಪೇಗೌಡರ ಹೆಸ ರನ್ನು ಆಯ್ದುಕೊಂಡಿದೆ. ಕೆಂಪೇಗೌಡರ ಪ್ರತಿಮೆಯನ್ನು ಏರ್ಪೋಟ್ ನ ಮುಂಭಾಗ ಮಾಡಲೇಬೇಕು ಎಂದು ಒತ್ತಾಯಿಸಿದ್ದೇವು ಎಂದರು.
ಆನೇಕಲ್ ತಾಲೂಕಿನ ಒಕ್ಕಲಿಗ ಸಮುದಾಯದ ಹಿರಿಯರಾದ ಕುಮಾರಸ್ವಾಮಿ,ಮಂಡಲದ ಅಧ್ಯಕ್ಷರಾದ ಪುಟ್ಟರಾಜು ಗೌಡ, ಸತೀಶ್, ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಶಂಕರ್, ಎಸ್. ಅಶ್ವತಿ, ಭಾಗ್ಯಮ್ಮ, ಶ್ರೀನಿವಾಸ ಗೌಡ, ರಾಮಕೃಷ್ಣಯ್ಯ, ಕೋದಂಡರಾಮ, ರಾಜೇಂದ್ರಪ್ಪ, ಪಕ್ಷದ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ಇತರರಿದ್ದರು. ತಮ್ಮ ಕ್ಷೇತ್ರದ ನೆರೆಯ ರಾಜಾಜಿನಗರದಲ್ಲಿಯೂ ಅಲ್ಲಿನ ಶಾಸಕ ಸುರೇಶ್ ಕುಮಾರ್ ಪರ ಗೋಪಾಲಯ್ಯ ಪ್ರಚಾರ ನಡೆಸಿದರು.