Advertisement

ಗೂಗಲ್ ಫೋನ್ ಹೊಸ ಫೀಚರ್: ಇನ್ನು ಯಾರು, ಏಕೆ ಕರೆ ಮಾಡುತ್ತಿದ್ದಾರೆ ಎಲ್ಲವೂ ತಿಳಿಯಲಿದೆ !

03:37 PM Sep 09, 2020 | Mithun PG |

ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್ ಇದೀಗ ತನ್ನ ಪೋನ್ ಆ್ಯಪ್ ನಲ್ಲಿ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಇದು ಟ್ರೂ ಕಾಲರ್ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದ್ದು ಅದರೇ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡು ಸಾಕಷ್ಟು ಕುತೂಹಲ ಕೆರಳಿಸಿದೆ.

Advertisement

ಹೌದು. ಗೂಗಲ್ ಫೋನ್ ಆ್ಯಪ್ ನಲ್ಲಿ ವೇರಿಫೈಡ್ ಕಾಲ್ಸ್ (ಪರಿಶೀಲಿಸಲ್ಪಟ್ಟ ಕರೆಗಳು)  ಫೀಚರ್ ಬಂದಿದ್ದು, ಇನ್ನು ಮುಂದೆ ಕರೆ ಮಾಡುವವರ ಹೆಸರು, ಕರೆ ಮಾಡಿರುವುದಕ್ಕೆ ಕಾರಣ, ಪ್ರೋಫೈಲ್ ಫೋಟೋ ಅಥವಾ ಲೋಗೋ, ಗೂಗಲ್ ನಿಂದ ದೃಢಿಕರಿಸಲ್ಪಟ್ಟ ಚಿಹ್ನೆ ಎಲ್ಲಾ ಅಂಶಗಳು ಕಾಣಿಸಿಕೊಳ್ಳಲಿದೆ. ಆ ಮೂಲಕ ವಂಚನೆಯ ಕರೆಗಳನ್ನು ತಡೆಗಟ್ಟುವುದು ಇದರ ಮೂಲ ಉದ್ದೇಶವಾಗಿದೆ.

ವೇರಿಫೈಡ್ ಕಾಲ್ಸ್ ಎಂಬುದು Google Phone Appನ ಹೊಸ ಫೀಚರ್. ಹಲವು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಇದು ಇನ್ ಬಿಲ್ಟ್ ಆ್ಯಪ್ ಆಗಿದೆ. ಅದಾಗ್ಯೂ ಒಂದು ವಾರದ ನಂತರ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಗೆ ಸಿಗಲಿದೆ. ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

ಮಾತ್ರವಲ್ಲದೆ ಈ ಫೀಚರ್ ಅನ್ನು ಭಾರತವೂ ಸೇರಿದಂತೆ ಅಮೆರಿಕಾ, ಮೆಕ್ಸಿಕೋ, ಬ್ರೆಜಿಲ್, ಸ್ಪೇನ್ ದೇಶಗಳಲ್ಲಿ ಪ್ರಥಮವಾಗಿ ಜಾರಿಗೆ ತರಲಾಗಿದೆ. ತದನಂತರ ಉಳಿದ ದೇಶಗಳಲ್ಲಿ ಬಳಕೆಗೆ ಸಿಗಲಿದೆ. ಕಳೆದ 5 ತಿಂಗಳಿನಿಂದ ಈ ಫೀಚರ್ ಪರೀಕ್ಷೆಗೊಳಪಟ್ಟಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ಗೂಗಲ್ ತಿಳಿಸಿದೆ.

Advertisement

ಅದಾಗ್ಯೂ ಸುರಕ್ಷತೆಗಾಗಿ ಮಾತ್ರ ಈ ಫೀಚರ್ ಜಾರಿಗೆ ತಂದಿದ್ದು, ಗೂಗಲ್ ಯಾವುದೇ ರೀತಿಯಲ್ಲೂ ವ್ಯಕ್ತಿಗಳ ವ್ಯಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಫೀಚರ್ ಸುಲಭವಾಗಿ ಕರೆ ಮಾಡುವವರ ಕುರಿತು ಮಾಹಿತಿ ನೀಡುತ್ತದೆ. ಇದರಿಂದ ಅನಗತ್ಯ ಕರೆಗಳ ಕಿರಿ ಕಿರಿಯೂ ತಪ್ಪುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next