Advertisement

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

11:27 AM Jan 01, 2025 | Team Udayavani |

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ(ಜ1) ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ”ದೆಹಲಿಯಲ್ಲಿ ಬಿಜೆಪಿಯು ಮತದಾರರ ಹೆಸರು ಅಳಿಸುವಿಕೆ ಮತ್ತು ಹಣ ಹಂಚಿಕೆ ಮಾಡುವುದರಲ್ಲಿ ನಿರತವಾಗಿದೆ”  ಎಂದು ಆರೋಪಿಸಿದ್ದಾರೆ.

Advertisement

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಕೇಜ್ರಿವಾಲ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಿಜೆಪಿ ಮಾಡಿದ ತಪ್ಪುಗಳನ್ನು ಆರ್ ಎಸ್ಎಸ್ ಅನುಮೋದಿಸುತ್ತದೆಯೇ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಭಾಗವತ್ ಅವರನ್ನು ಪ್ರಶ್ನಿಸಿದ್ದಾರೆ.

ಮತಗಳನ್ನು ಖರೀದಿಸಲು ಬಿಜೆಪಿ ನಾಯಕರು ಬಹಿರಂಗವಾಗಿ ಹಣ ಹಂಚುತ್ತಿರುವುದನ್ನು ಮತ್ತು ಬಿಜೆಪಿಯು ಪೂರ್ವಾಂಚಲಿ ಮತ್ತು ದಲಿತರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಿ ಹಾಕುತ್ತಿದೆ. ಅದನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಆಪ್ ಮತ್ತು ಕೇಜ್ರಿವಾಲ್ ದೆಹಲಿಯಲ್ಲಿರುವ ಅಕ್ರಮ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳಿಗೆ ದಾಖಲೆಗಳು ಮತ್ತು ಹಣವನ್ನು ಚುನಾವಣೆಯಲ್ಲಿ ಮತಬ್ಯಾಂಕ್ ಆಗಿ ಬಳಸಲು ಸಹಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತು ಆಪ್ ನಡುವೆ ತೀವ್ರ ವಾಗ್ಸಮರ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next