Advertisement

2 ಸಾವಿರ ಸಾಲ ಆ್ಯಪ್‌ ಗೂಗಲ್‌ನಿಂದ ವಜಾ

11:39 PM Aug 25, 2022 | Team Udayavani |

ಹೊಸದಿಲ್ಲಿ: ನಿಯಮಗಳ ಉಲ್ಲಂಘನೆ, ಮಾಹಿತಿಗಳನ್ನು ತಿರುಚಿದ್ದು ಮತ್ತು ಆಕ್ಷೇಪಾರ್ಹ ಆಫ್ಲೈನ್‌ ನಡವಳಿಕೆ ಪ್ರದರ್ಶಿಸಿದ ಕಾರಣಕ್ಕಾಗಿ ಪ್ರಸ್ತುತ ವರ್ಷದ ಜನವರಿಯಿಂದ ಈಚೆಗೆ 2 ಸಾವಿರಕ್ಕೂ ಅಧಿಕ ಆನ್‌ಲೈನ್‌ ಸಾಲ ಆ್ಯಪ್‌ಗಳನ್ನು ಇಂಡಿಯಾ ಪ್ಲೇಸ್ಟೋರ್‌ನಿಂದ ತೆಗೆದುಹಾಕಿರುವುದಾಗಿ ಗೂಗಲ್‌ ತಿಳಿಸಿದೆ.

Advertisement

ಈ ವಿಚಾರದಲ್ಲಿ ಸದ್ಯವೇ ಇನ್ನಷ್ಟು ಕಠಿನ ನಿಗಾ, ಪರಿಶೀಲನೆಯನ್ನು ಜಾರಿಗೆ ತರುವುದಾಗಿ ಅದು ತಿಳಿಸಿದೆ. ತಾನು ಕಾರ್ಯಾಚರಿಸುತ್ತಿರುವ ದೇಶಗಳ ವ್ಯಾಪ್ತಿಯ ಕಾನೂನು, ನಿಯಮಗಳ ಪಾಲನೆಗೆ ಗೂಗಲ್‌ ಸದಾ ಕಟಿಬದ್ಧವಾಗಿದೆ. ಆನ್‌ಲೈನ್‌ ಹಾನಿ, ಮೋಸ ಒಂದು ಜಾಗತಿಕ ಪಿಡುಗು ಎಂಬುದಾಗಿ ಗೂಗಲ್‌ ಏಶ್ಯಾ- ಪೆಸಿಫಿಕ್‌ ವಲಯದ ನಿರ್ದೇಶಕ ಮತ್ತು ಮುಖ್ಯಸ್ಥ ಸೈಕತ್‌ ಮಿತ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next