Advertisement

ಗರ್ಲ್ ಫ್ರೆಂಡ್‌ ಖರ್ಚಿಗಾಗಿ 10,000 ರೂ.ಕದ್ದ ಗೂಗಲ್‌ ಟೆಕ್ಕಿ arrest

11:40 AM Oct 11, 2018 | udayavani editorial |

ಹೊಸದಿಲ್ಲಿ: ತನ್ನ ಗರ್ಲ್ ಫ್ರೆಂಡ್‌ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ 10,000 ರೂ.ಗಳನ್ನು ಕದ್ದ ಆರೋಪದ ಮೇಲೆ ಗೂಗಲ್‌ ಉದ್ಯೋಗಿ, 24ರ ಹರೆಯದ ಇಂಜಿನಿಯರ್‌, ಗಾರ್ವಿತ್‌ ಸಾಹಿನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹರಿಯಾಣದ ಅಂಬಾಲಾ ಜಿಲ್ಲೆಯವನೆಂದು ತಿಳಿದುಬಂದಿದೆ.

Advertisement

ಕಳೆದ ಸೆ.11ರಂದು ಬಹು ರಾಷ್ಟ್ರೀಯ ಕಂಪೆನಿಗಳ ಹಿರಿಯ ಎಕ್ಸಿಕ್ಯುಟಿವ್‌ಗಳಿಗಾಗಿ ಇಲ್ಲಿನ ತಾಜ್‌ ಪ್ಯಾಲೇಸ್‌ನಲ್ಲಿ ಐಬಿಎಂ ಮತ್ತು ಮಾಧ್ಯಮ ಸಂಸ್ಥೆಗಳು ಜತೆಗೂಡಿ ಕಾನ್ಫರೆನ್ಸ್‌ ಏರ್ಪಡಿಸಿದ್ದವು. ಕಾನ್ಫರೆನ್ಸ್‌ ವೇಳೆ ದೇವಯಾನಿ ಜೈನ್‌ ಎಂಬಾಕೆ ತನ್ನ ಕೈಚೀಲದಿಂದ 10,000 ರೂ. ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. 

ಪೊಲೀಸರು ಕೇಸು ದಾಖಲಿಸಿದ ಬಳಿಕ ಕಾನ್ಫರೆನ್ಸ್‌ ಹಾಲ್‌ನಲ್ಲಿದ್ದ ಸಿಸಿಟಿಸಿ ಕ್ಯಾಮೆರಾದ ಚಿತ್ರಿಕೆಯನ್ನು ಪರಿಶೀಲಿಸಿದರು. ಆಗ ಅವರಿಗೆ ಕೈಚೀಲದಿಂದ ವ್ಯಕ್ತಿಯೊಬ್ಬ ಹಣ ಕದಿಯುತ್ತಿರುವ ದೃಶ್ಯ ಕಂಡು ಬಂತು. ಕಾನ್ಫರೆನ್ಸ್‌ ಆಮಂತ್ರಿತರ ಪಟ್ಟಿಯನ್ನು ಪರಿಶೀಲಿಸಿದ ಪೊಲೀಸರಿಗೆ ಹಣ ಕದ್ದ ವ್ಯಕ್ತಿ ಯಾರೆಂಬುದು ಖಚಿತವಾಗಿ ಅವರು ಆರೋಪಿ ಗಾರ್ವಿತ್‌ ನನ್ನು ಅರೆಸ್ಟ್‌ ಮಾಡಿದರು. 

“ನನಗೆ ತೀವ್ರ ಹಣದ ಅಡಚಣೆ ಇತ್ತು. ಗರ್ಲ್ ಫ್ರೆಂಡ್‌ ಖರ್ಚು ವೆಚ್ಚ ನಿಭಾಯಿಸಲು ತತ್‌ಕ್ಷಣಕ್ಕೆ ಹಣ ಬೇಕಾಗಿತ್ತು. ಹಾಗಾಗಿ ನಾನು ಹಣ ಕದ್ದೆ ” ಎಂದು ಗಾರ್ವಿತ್‌ ಪೊಲೀಸರಲ್ಲಿ ಒಪ್ಪಿಕೊಂಡ. ಪೊಲೀಸರು ಆತನ ವಶದಲ್ಲಿದ್ದ ಕದ್ದ ಹಣದ ಪೈಕಿ 3,000 ರೂ.ಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸ್‌ ಡೆಪ್ಯುಟಿ ಕಮಿಷವನರ್‌ ಮಧುರ್‌ ವರ್ಮಾ ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next