ನ್ಯೂಯಾರ್ಕ್: ನಟೋರಿಯಸ್ ಜೋಕರ್ ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್ ಗೆ ಮತ್ತೆ ದಾಳಿಯಿಟ್ಟಿದೆ. ಕಳೆದ ಜುಲೈನಲ್ಲಿ ಗೂಗಲ್ ಪ್ಲೇ ಸ್ಟೋರ್ ಸುಮಾರು 11 ಆ್ಯಪ್ ಗಳನ್ನು ಇದೇ ಕಾರಣಕ್ಕೆ ನಿಷ್ಕ್ರೀಯಗೊಳಿಸಿತ್ತು. ಇದೀಗ ಮತ್ತೆ 6 ಆ್ಯಪ್ ಗಳಿಗೆ ಜೋಕರ್ ಮಾಲ್ವೇರ್ ವಕ್ಕರಿಸಿಕೊಂಡಿದೆ.
ದುರಂತವೆಂದರೇ ಈ ಆರು ಅಪ್ಲಿಕೇಶನ್ ಗಳು ಸುಮಾರು 2,00.000 ಬಾರಿ ಡೌನ್ ಲೋಡ್ಸ್ ಕಂಡಿವೆ. ಜೋಕರ್ ಮಾಲ್ವೇರ್ ಗಳು ದುರುದ್ದೇಶಪೂರಿತ ಮಾಹಿತಿಯನ್ನು ಹರಡುತ್ತದೆ. ಮಾತ್ರವಲ್ಲದೆ ಅಗತ್ಯವಲ್ಲದ ಎಂಎಂಎಸ್ ಗಳನ್ನು, ಹಾಗೂ ಬಳಕೆದಾರರ ಗಮನಕ್ಕೆ ಬಾರದಂತೆ ಪ್ರೀಮಿಯಂ ಸೇವೆಗಳನ್ನು ಸಬ್ ಸ್ಕ್ರೈಬ್ ಮಾಡುತ್ತದೆ. ಈ ಮಾಲ್ವೇರ್ ನಲ್ಲಿ ಕೋಡ್ ಒಂದನ್ನು ಬಳಸಲಾಗಿದ್ದು, ಇದರ ಇರುವಿಕೆಯನ್ನು ಪತ್ತೆ ಮಾಡುವುದು ಕೂಡ ಕಷ್ಠಕರವಾದ ಕೆಲಸ.
ಇದೀಗ ಪ್ರಮುಖ 6 ಅಪ್ಲಿಕೇಶನ್ ಗಳು ಜೋಕರ್ ಮಾಲ್ವೇರ್ ದಾಳಿಗೆ ತುತ್ತಾಗಿದೆ. ಮುಖ್ಯವಾಗಿ Safety AppLock, Convenient Scanner 2, Push Message- Texting & SMS, Emoji Wallpaper, Separate Doc Scanner and Fingertip GameBox. ಇವುಗಳನ್ನು ಗೂಗಲ್ ಪ್ಲೇಸ್ಟೋರ್ ನಿಂದ ಈಗಾಗಲೇ ರಿಮೂವ್ ಮಾಡಲಾಗಿದೆ. ಬಳಕೆದಾರರು ಈ ಆ್ಯಪ್ ಗಳನ್ನು ಬಳಸುತ್ತಿದ್ದರೇ ಕೂಡಲೇ ಅನ್ ಇನ್ ಸ್ಟಾಲ್ ಮಾಡುವುದು ಒಳಿತು. ಇವುಗಿಳಿಂದ ನಿಮ್ಮ ಸ್ಮಾರ್ಟ್ ಫೋನ್ ಡೇಟಾ ಸಂಪೂರ್ಣವಾಗಿ ಹ್ಯಾಕರ್ ಗಳ ಪಾಲಾಗುತ್ತದೆ.
ಗೂಗಲ್ 2017 ರಲ್ಲಿ ಜೋಕರ್ ಮಾಲ್ವೇರ್ ಇರುವಿಕೆಯನ್ನು ಮೊದಲ ಬಾರಿಗೆ ಪತ್ತೆಹಚ್ಚಿತ್ತು. ಇದನ್ನು Bread ಎಂದು ಕೂಡ ಕರೆಯುತ್ತಾರೆ.