Advertisement
ಅದೇ ಆಟಗಾರರು ಇನ್ನೆಷ್ಟು ದಿನ?ರೋಜರ್ ಫೆಡರರ್ ಕಳೆದ 15 ವರ್ಷಗಳಿಂದ ಆಡುತ್ತಿದ್ದಾರೆ. ಸದ್ಯಕ್ಕೇನೋ ಅವರು ಪ್ರಜ್ವಲಿಸುತ್ತಲೇ ಇದ್ದಾರೆ. ಆದರೆ ಇದು ವರ್ಷಗಳ ಕಾಲ ವಿಸ್ತರಿಸುವುದು ಕಷ್ಟ. ಈಗಾಗಲೇ ಅವರು ಆಯ್ದ ಟೂರ್ನಿಗಳಲ್ಲಿ ಮಾತ್ರ ರ್ಯಾಕೆಟ್ ಝಳಪಿಸುತ್ತಿದ್ದಾರೆ. ಫ್ರೆಂಚ್ ಓಪನ್‌ಗೆ ಬೆನ್ನು ತೋರಿಸುವ ಅವರ ಪ್ರವೃತ್ತಿ ಈ ವರ್ಷವೂ ಮುಂದುವರಿದರೆ ಅಚ್ಚರಿ ಪಡಬೇಕಾಗಿಲ್ಲ. ಪ್ರಮುಖ ಸ್ಪರ್ಧಿಗಳಾದ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ತಮ್ಮ ಗಾಯದ ಸಮಸ್ಯೆಯಿಂದಲೇ ಹೊರ ಬಂದಿಲ್ಲ. ಫಿಟ್‌ನೆಸ್ ಇಲ್ಲದ ಅವರ ಆಟದಲ್ಲಿ ಆತ್ಮವಿಶ್ವಾಸವೇ ಇಲ್ಲದೆ ನೋಡಲೂ ತ್ರಾಸ, ಯಡವಟ್ಟಾಗಿ ಆರಂಭಿಕ ಹಂತಗಳಲ್ಲಿ ಸೋಲುವುದು ಕೂಡ ನಿರೀಕ್ಷಿತವಾಗಿಬಿಡುತ್ತದೆ. 2018ರ ಋತುವಿನಲ್ಲಿ ಈ ಇಬ್ಬರೂ ಸ್ಪರ್ಧಾತ್ಮಕ ಟೆನಿಸ್ ಕೋರ್ಟ್‌ಗೇ ಇಳಿದಿಲ್ಲ. ವಿಚಿತ್ರ ಎಂದರೆ ಅವರು ಮನಸ್ಸಿನಲ್ಲಿಯೇ ನಾವು ಫಿಟ್ ಎಂದು ಪರಿಭಾವಿಸಿ ಮೆಲ್ಬೋನ್‌ನಲ್ಲಿ ಆಡಲು ಇಳಿದರೆ ಅನಾಮಿಕ ಆಟಗಾರರು ಪ್ರತಿಷ್ಟಿತರನ್ನು ಸೋಲಿಸಲು ತಮಗೊಂದು ಅವಕಾಶ ಸಿಕ್ಕಿದೆ. ಗಾಯದಿಂದ ಹಿಂತಿರುಗಿದ ಆಟಗಾರರಲ್ಲಿ ಒಂದು ಅಳುಕಿರುತ್ತದೆ. ಅದನ್ನು ತಾವು ನಗದು ಮಾಡಿಕೊಳ್ಳಬಹುದು ಎಂಬಂತಹ ಆಕ್ರಮಣಕಾರಿ ಮನೋಭಾವ, ಆಟ ಕಾಣುತ್ತಿಲ್ಲ. ಈ ಟಾಪ್ ಆಟಗಾರರು ಆಸ್ಟ್ರೇಲಿಯನ್ ಓಪನ್‌ನ ಎರಡನೇ ವಾರಕ್ಕೆ ಮುನ್ನಡೆಯುವಲ್ಲಿ ಈ ಅಂಶದ ಕಾಣಿಕೆಯೂ ಇದೆ.
ಅಮೆರಿಕದ ಪೀಟ್ ಸಾಂಪ್ರಾಸ್ ಹಾಗೂ ಆ್ಯಂಡ್ರಿ ಅಗಾಸ್ಸಿಯವರ ನಿರ್ಗಮನದ ಸಂದರ್ಭದಲ್ಲಿಯೂ ಇಂತಹದ್ದೊಂದು ನಿರ್ವಾತ ಏರ್ಪಟ್ಟಿತ್ತು. ಈ ಇಬ್ಬರ 2000ದ ದಶಕದ ನಂತರ 2001ರಿಂದ 2004ರವರೆಗೆ ಏಕೈಕ ಹೊಡೆತದ ಅದ್ಭುತಗಳು ಕೂಡ ಸ್ಲಾಂ ಗೆಲ್ಲಲಾರಂಭಿಸಿದರು. ಅವತ್ತು ಗ್ರಾನ್ ಸ್ಲಾಂ ಗೆದ್ದ ಥಾಮಸ್ ಜಾನ್ಸನ್, ಅಲೆºರ್ಟಾ ಕೋಸ್ಟಾ ಮಾದರಿಯ ಆಟಗಾರರು ಸ್ಲಾಂ ಗೆದ್ದರು, ನೆನಪುಗಳನ್ನು ಗೆಲ್ಲಲ್ಲಿಲ್ಲ!
Related Articles
Advertisement
ಫೆಡರರ್‌ರ ಹೇಳಿಕೆಯಲ್ಲಿ ಆತಂಕ ಇತ್ತೇ ವಿನಃ ವ್ಯಂಗ್ಯವಿರಲಿಲ್ಲ. ಈ ಆತಂಕ ವಿಶ್ವ ಟೆನಿಸ್ ನಿರ್ವಾಹಕ ಎಟಿಪಿಯನ್ನು ಕೂಡ ಕಾಡಿದೆ. ಇಷ್ಟು ವರ್ಷಗಳ ತನಕ ನಿರುಮ್ಮಳವಾಗಿ ಸೃಷ್ಟಿಯಾಗುವ ಪ್ರತಿಭೆಗಳಿಗೆ ಅವಕಾಶಗಳನ್ನು ಹಂಚುವ ಕೆಲಸವನ್ನಷ್ಟೇ ಮಾಡುತ್ತಿದ್ದ ಆಲ್ ಟೆನಿಸ್ ಅಸೋಸಿಯೇಶನ್ 21ರೊಳಗಿನ ಟೆನಿಸ್ ಪ್ರತಿಭೆಗಳ ಪ್ರಕಾಶಕ್ಕೆ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಬರಲಿರುವ ನವೆಂಬರ್‌ನಲ್ಲಿ ಮಿಲಾನ್‌ನಲ್ಲಿ ನೆಕ್ಸ್r ಜನರೇಶನ್ ಎಟಿಪಿ ಫೈನಲ್ ಎಂಬ ಟೂನಿರ್ಣಯನ್ನು ಆಯೋಜಿಸಿದೆ. ಈ ಕೂಟದಲ್ಲಿ 1996 ಅಥವಾ ಆ ವರ್ಷದ ನಂತರ ಜನಿ¾ಸಿದ ಆಟಗಾರರು ಮಾತ್ರ ಆಡಬಹುದು!ಪ್ರತಿಭೆಗಳು ಇಲ್ಲ ಅಂತಲ್ಲ. ವಿಶ್ವದ ನಂ. 4ನೇ ಶ್ರೇಯಾಂಕದ ಜರ್ಮನ್ ಅಲೆಕ್ಸಾಂಡರ್ ಜ್ವರೇವಾ, ರಷ್ಯಾದ ಆ್ಯಂಡ್ರೆಯಿ ರುಬ್ಲೇವ್, ಕೆನಡಾದ ಡೆನಿಸ್ ಶಪೊವಲೋವಾ, ಯುಎಸ್‌ಎಯ ಜರೆಡ್ ಡೊನಾಲ್ಡ್‌ಸನ್, ದಕ್ಷಿಣ ಕೊರಿಯಾದ ಹೈಯಾನ್ ಚುಂಗ್… ಪಟ್ಟಿಯನ್ನು ಮುಂದುವರೆಸಬಹುದು. ಐತಿಹಾಸಿಕ ಸಾಧನೆಯ ಹುಚ್ಚು?
ಓರ್ವ ಹೆಸರು ಪ್ರಕಟವಾಗುವುದನ್ನು ಬಯಸದ ಖ್ಯಾತ ಕೋಚ್ ಹೇಳುತ್ತಾರೆ, “ಇಂದಿನ ಯುವ ಜನರಲ್ಲಿ ಸಾಮರ್ಥ್ಯವಿದೆ. ಅವರು ಇಂದಿನ ತಂತ್ರಜಾnನವನ್ನು ಕೂಡ ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಅಮೋಘ ಫಿಟ್‌ನೆಸ್ ಹೊಂದುತ್ತಾರೆ. ಅವರ ಅಥ್ಲೆಟಿಸಂ ಗಮನಾರ್ಹವಾದುದು. ಸಮಸ್ಯೆ ಇರುವುದು ಅಲ್ಲಲ್ಲ. ಅವರಲ್ಲಿ ನಾವು ಫೆಡ್, ರಫಾ ಅವರಲ್ಲಿ ಕಾಣುವ ಆಟದ “ಹುಚ್ಚು ಕಾಣಿಸುವುದಿಲ್ಲ. ಆಟಕ್ಕಾಗಿಯೇ ನಾವು ಜೀವ ತಳೆದಿದ್ದೇವೆ ಎಂಬ ಸಮರ್ಪಣಾ ಮನೋಭಾವವಿಲ್ಲ. ಹಿಂದಿನ ಆಟಗಾರರ ಆಟವನ್ನು ಅವರು ನೋಡುವುದಿಲ್ಲ. “ಲೈವ್‌ನ್ನು ಕೂಡ ಗಮನಿಸುವುದಿಲ್ಲ. ಅವರ ಆಸಕ್ತಿಯನ್ನು ಆಚೀಚೆ ಮಾಡುವ ಹತ್ತಾರು ಅನುಕೂಲಗಳು ಇಂದು ಇವೆ. ಹಿಂದಿನ ಆಟಗಾರರ ಕುರಿತು ಪ್ರಶ್ನೆ ಕೇಳಿದರೆ ಕೂಡ ಅವರೆಲ್ಲ ಡ್ರಾಪ್ ಶಾಟ್! ಹಾಗಾಗಿಯೇ ಅವರು ಐತಿಹಾಸಿಕ ಆಟಗಾರರು ಆಗುವುದು ಕಷ್ಟ. ಹೆಚ್ಚೆಂದರೆ ಆ ದಿನಗಳ ಒಳ್ಳೆಯ ಆಟಗಾರರಾಗಬಹುದಷ್ಟೇ….. ಭರವಸೆ ಇಡಬೇಕಾದುದು ಎಲ್ಲ ಆಶಾವಾದಿಯ ಕರ್ತವ್ಯ. ಎಟಿಪಿಯ 1996ರ ಗಡಿಯಿಂದ ಒಂದು ವರ್ಷ ಈಚೆ ಇರುವ ಬ್ರಿಟನ್‌ನ ನಿಕ್ ಕಿರ್ಗೋಯಿಸ್ ನಿರ್ವಾತ ತುಂಬುವ ಒಬ್ಬ ಸಶಕ್ತ. ಈತ ಮೊನ್ನೆ ಮೊನ್ನೆ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಗೆದ್ದು ಗಮನ ಸೆಳೆದಿದ್ದಾನೆ. ಚುಂಗ್ ಜೋಕೋವಿಚ್‌ರನ್ನು ಆಸ್ಟ್ರೇಲಿಯನ್ ಓಪನ್‌ನಲ್ಲಿ ಸುಲಭವಾಗಿ ಮಣಿಸಿದ್ದಾರೆ. ಅವತ್ತಿನಿಂದ ಇವತ್ತಿನವರೆಗೆ ಆಟಗಳು ಅಚ್ಚರಿಯನ್ನೇ ನಮ್ಮ ಮುಂದಿಡುತ್ತಿವೆ. ಈ ಸರ್‌ಪ್ರ„ಸ್ ಎಲಿಮೆಂಟ್‌ನಿಂದಾಗಿಯೇ ಆಟ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಪುರುಷರ ಟೆನಿಸ್‌ನಲ್ಲಿಯೂ ಇದು ಮತ್ತೆ ಮತ್ತೆ ಸಂಭವಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಮಾ.ವೆಂ.ಸ.ಪ್ರಸಾದ್