Advertisement
1976ರಲ್ಲಿ ಸ್ಥಾಪಿಸಲ್ಪಟ್ಟ ಈ ಅಂಕಣ ಗಳು 48 ವರ್ಷಗಳಷ್ಟು ಹಳೆಯವು. ಅವು ಸ್ಥಾಪನೆಯಾದ ಮೇಲೆ ಕೇವಲ 2ನೇ ಬಾರಿಗೆ 1.4 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅದನ್ನು ನವೀಕರಣ ಮಾಡಿದೆ. ಇನ್ನು ಈ ಅಂಕಣಗಳಲ್ಲಿ ಪ್ರತಿಷ್ಠಿತ ಐಟಿಎಫ್ (ಅಂ.ರಾ. ಟೆನಿಸ್ ಒಕ್ಕೂಟ), ಎಟಿಪಿ (ವೃತ್ತಿಪರ ಟೆನಿಸಿಗರ ಸಂಸ್ಥೆ) ಕೂಟಗಳನ್ನು ಇನ್ನಷ್ಟು ಉತ್ತಮವಾಗಿ ನಡೆಸಲು ಸಾಧ್ಯವಿದೆ.
ಅಂಕಣಗಳ ಅಡಿಪಾಯವನ್ನು 1 ಮೀಟರ್‌ನಷ್ಟು ಕೆಳಗೆ ಅಗೆದು, ಸುಧಾರಿಸಿ ಜೀವ ತುಂಬಲಾಗಿದೆ. ಹೊಸ ಅಂಕಣಗಳ ರೀತಿಯಲ್ಲೇ ಹಳೇ ಅಂಕಣಗಳ ರೂಪವನ್ನು ಬದಲಾಯಿಸ ಲಾಗಿದೆ. ಅಂದಾಜು 1.4 ಕೋಟಿ ರೂ. ಖರ್ಚಿನಲ್ಲಿ 4 ಅಂಕಣಗಳ ಸಹಿತ ಸಂಪೂರ್ಣ ವ್ಯವಸ್ಥೆಗಳು ನವೀಕರಣಗೊಂಡಿವೆ.
ಅಂಕಣಗಳ ಜತೆಗೆ ಕ್ರೀಡಾಂಗಣದ ಆವರಣದಲ್ಲಿನ ಆಟಗಾರರ ಕೊಠಡಿ ಗಳು, ವೀಕ್ಷಕರ ಆಸನಗಳ ಸಹಿತ ಇಲ್ಲಿನ ಎಲ್ಲ ಸೌಲಭ್ಯಗಳಿಗೆ ಹೊಸ ಹೊಳಪು ನೀಡಲಾಗಿದೆ. ಏನಿದು ಲೇಕೋಲ್ಡ್?
ಅಮೆರಿಕ ಯುಎಸ್ ಓಪನ್ ಸೇರಿದಂತೆ ಪ್ರತಿಷ್ಠಿತ ಟೆನಿಸ್ ಕೂಟಗಳಲ್ಲಿ ಲೇಕೋಲ್ಡ್ ಮಾದರಿಯನ್ನು ಬಳಸಲಾಗುತ್ತದೆ. ಇದನ್ನು ಅಂಕಣದ ಗಟ್ಟಿಯಾದ ಪದರದ (ಕಾಂಕ್ರೀಟ್) ಮೇಲೆ ನಿರ್ಮಿಸಲಾಗುತ್ತದೆ. ಅಂಕಣದ ಬಿರುಸನ್ನು ಕಡಿಮೆಮಾಡಲು ಅಗತ್ಯಬಿದ್ದರೆ ಕುಶನ್ ಹಾಕಲಾಗುತ್ತದೆ. ಈ ಮಾದರಿಯನ್ನು ಪೆನ್ಸಿಲ್ವೇನಿಯಾದ ಅಡ್ವಾನ್ಸ್$x ಪಾಲಿಮರ್ ಟೆಕ್ನಾಲಜಿ ಕಂಪೆನಿ ಸಿದ್ಧಪಡಿಸಿದೆ. ಇಲ್ಲೂ ಕೂಡ ಕುಶನ್ ಬಳಕೆಯಾಗಿದೆ.
Related Articles
25 ವರ್ಷಗಳಿಂದ ಅಂಕ ಣಗಳ ನವೀಕರಣ ನಡೆದಿರಲಿಲ್ಲ. ಹೀಗಾಗಿ ಅಂಕಣ ಗಳಿಗೆ ಹೊಸರೂಪ ನೀಡಬೇಕು ಎನ್ನುವ ಉದ್ದೇಶ ದಿಂದಲೇ ಹಿಂದಿನ ನಾಲ್ಕೂ ಅಂಕಣ ಗಳನ್ನು ನವೀಕರಿಸಿದೆವು. 5 ವರ್ಷಗ ಳಿಂದಲೇ ಇದಕ್ಕೆ ರೂಪುರೇಷೆ ಸಿದ್ಧ ಮಾಡಲಾರಂಭಿಸಿದ್ದೆವು. ಈಗ ಅಂಕಣ ಸಂಪೂರ್ಣವಾಗಿ ಅತ್ಯಾಕರ್ಷಕ ರೀತಿಯಲ್ಲಿ ತಯಾರಾಗಿ ನಿಂತಿದೆ.
Advertisement
-ಸುನೀಲ್ ಯಜಮಾನ್,ರಾಜ್ಯ ಟೆನಿಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ·ಎಸ್. ಸದಾಶಿವ