ಹಾಂಗ್ಝೂ (ಚೀನ): ಚೀನ ಎಟಿಪಿ ಟೆನಿಸ್ನಲ್ಲಿ ಭಾರತ ಮಿಶ್ರಫಲ ಅನುಭವಿಸಿದೆ. “ಹಾಂಗ್ಝೂ ಓಪನ್’ ಕೂಟದಲ್ಲಿ ಜೀವನ್ ನೆಡುಂಚೆಜಿಯಾನ್ – ವಿಜಯ್ ಸುಂದರ್ ಪ್ರಶಾಂತ್ ಚಾಂಪಿಯನ್ ಆಗಿ ಮೂಡಿಬಂದರೆ, “ಚೆಂಗುx ಓಪನ್’ ಪಂದ್ಯಾವಳಿಯ ಫೈನಲ್ನಲ್ಲಿ ಯೂಕಿ ಭಾಂಬ್ರಿ ಜೋಡಿ ಸೋಲನುಭವಿಸಿದೆ.
ಮಂಗಳವಾರದ ಫೈನಲ್ನಲ್ಲಿ, ಯಾವುದೇ ಶ್ರೇಯಾಂಕ ಹೊಂದಿ ಲ್ಲದ ಜೀವನ್-ವಿಜಯ್ ದಿಟ್ಟ ಹೋರಾಟ ವೊಂದನ್ನು ನಡೆಸಿ ಜರ್ಮನಿಯ ಕಾನ್ಸ್ಟಂಟೀನ್ ಫ್ರಾಂಟ್ಜೆನ್-ಹೆಂಡ್ರಿಕ್ ಜಿಬೆನ್ಸ್ ವಿರುದ್ಧ 4-6, 7-6 (5), 10-7 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಸೂಪರ್ ಟೈ-ಬ್ರೇಕ್ನಲ್ಲಿ ಭಾರತದ ಜೋಡಿ ಅಮೋಘ ಆಟವಾಡಿತು. ಒಂದು ಗಂಟೆ, 49 ನಿಮಿ ಷಗಳ ಕಾಲ ಇವರ ಹೋರಾಟ ಸಾಗಿತು. ಇದು ಜೀವನ್-ವಿಜಯ್ ಜತೆ ಯಾಗಿ ಗೆದ್ದ ಮೊದಲ ಎಟಿಪಿ ಪ್ರಶಸ್ತಿ.
ನೆಡುಂಚೆಜಿಯಾನ್ ಇದಕ್ಕೂ ಮೊದಲು ರೋಹನ್ ಬೋಪಣ್ಣ ಜತೆಗೂಡಿ 2017ರ ಚೆನ್ನೈ ಓಪನ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಆದರೆ ವಿಜಯ್ ಅವರಿಗೆ ಇದು ಮೊದಲ ಎಟಿಪಿ ಪ್ರಶಸ್ತಿ ಸಂಭ್ರಮ.
ಭಾಂಬ್ರಿ ಜೋಡಿ ಪರಾಭವ
ಯೂಕಿ ಭಾಂಬ್ರಿ ಮತ್ತು ಫ್ರಾನ್ಸ್ನ ಅಲ್ಬಾನೊ ಒಲಿವೆಟ್ಟಿ ಈ ವರ್ಷದ 3ನೇ ಟೆನಿಸ್ ಪ್ರಶಸ್ತಿಯಿಂದ ಸ್ವಲ್ಪದರಲ್ಲೇ ವಂಚಿತರಾದರು. ಮಂಗಳವಾರ ನಡೆದ ಚೆಂಗು ಓಪನ್ ಟೆನಿಸ್ ಫೈನಲ್ನಲ್ಲಿ ಇವರು ಫ್ರಾನ್ಸ್ನ ಸ್ಯಾಡಿಯೊ ಡೌಂಬಿಯ-ಫ್ಯಾಬೀನ್ ರೀಬೌಲ್ ವಿರುದ್ಧ ದಿಟ್ಟ ಹೋರಾಟ ನಡೆಸಿ 4-6, 6-4, 4-10 ಅಂತರದಿಂದ ಪರಾಭವಗೊಂಡರು.
ಯೂಕಿ ಭಾಂಬ್ರಿ-ಅಲ್ಬಾನೊ ಒಲಿವೆಟ್ಟಿ ಜತೆಗೂಡಿ 2024ರ ಸ್ವಿಸ್ ಓಪನ್ (ಗಸ್ಟಾಡ್) ಮತ್ತು ಬಿಎಂಡಬ್ಲ್ಯು (ಮ್ಯೂನಿಚ್) ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದರು.