Advertisement
ಕಾರ್ಖಾನೆಗೆ ಸೇರಿದ್ದ 110 ಎಕರೆ ಜಾಗವನ್ನು ಇಸ್ರೋಗೆ ಹಸ್ತಾಂತರಿಸುವ ಕಾರ್ಯಕ್ರಮದೊಂದಿಗೆ ಎಚ್ಎಂಟಿಗೆಭಾವಪೂರ್ಣ ವಿದಾಯ, ಇಸ್ರೋಗೆ ಹೃದಯ ಸ್ಪರ್ಶಿ ಸ್ವಾಗತ ನೀಡಲು ನಗರ ಸಜ್ಜಾಗಿದೆ.
ಭೂತರಾಗಿದ್ದರು. ಅಂದು ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ 1977 ರಲ್ಲಿ ಶಂಕುಸ್ಥಾಪನೆಗೊಂಡ ಈ ಕಾರ್ಖಾನೆ 1979ರಲ್ಲಿ ಕಾರ್ಯಾರಂಭ ಮಾಡಿತ್ತು. 119 ಎಕರೆ ವಿಸ್ತೀರ್ಣದಲ್ಲಿದ್ದ ಕಾರ್ಖಾನೆ 2368 ನೌಕರರಿಗೆ ಆಶ್ರಯವಾಗಿತ್ತು. ಇಲ್ಲಿ ತಯಾರಾದ ಗಡಿಯಾರಗಳಿಗೆ ವಿಶ್ವಮಟ್ಟದಲ್ಲಿ ಬೇಡಿಕೆ ಬಂದಿತ್ತು. ಶರವೇಗದಲ್ಲಿ ಬೆಳೆದು ಉತ್ತುಂಗ ಶಿಖರವೇರಿದ್ದ ಕಾರ್ಖಾನೆಗೆ 1997 ರಿಂದ ಸಂಕಷ್ಟದ ದಿನಗಳು ಆರಂಭವಾದವು. 2002ರಲ್ಲಿ 250 ನೌಕರರು ವಿಆರ್‌ಎಸ್ ಪಡೆದರು. ಖಾಸಗಿ ವಾಚ್ ಕಂಪನಿಗಳ ಜತೆ ಪೈಪೋಟಿ ಮಾಡದ ಸ್ಥಿತಿಗೆ ಬಂದು ಕಾರ್ಖಾನೆ ದಿನೇದಿನೆ ನಷ್ಟ ಅನುಭವಿಸಿತು. ಕಡೆಯ ದಿನಗಳಲ್ಲಿ ಕಾರ್ಖಾನೆಯಲ್ಲಿ ಇದ್ದ ಸಿಬ್ಬಂದಿ ಹೊಸ ಬಗೆಯ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ವಾಚ್‌ಗಳನ್ನು
ಬಿಟ್ಟರು. ಆದರೂ ನಷ್ಟದಲ್ಲಿಯೇ ಇತ್ತು. ಅಂತಿಮವಾಗಿ ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚಲು ನಿರ್ಧರಿಸಿತು.
2016ರಲ್ಲಿ 4 ಹಂತದಲ್ಲಿ ನೌಕರರು ವಿಆರ್‌ಎಸ್ ಪಡೆದರು. ಈ ಮೂಲಕ ಗತವೈಭವದಿಂದ ಹೆಸರಾಗಿದ್ದ ಎಚ್‌ಎಂಟಿ ಕಾರ್ಖಾನೆ ಮುಚ್ಚಿಹೋಯಿತು. ಎಚ್‌ಎಂಟಿಯ 110 ಎಕರೆ ಜಾಗ ಇಸ್ರೋ ಹೆಸರಿಗೆ ನೋಂದಣಿ ಆಗಿದೆ. ಶನಿವಾರ ಎಚ್‌ಎಂಟಿ ಭೂಮಿಯನ್ನು ಇಸ್ರೋಗೆ ಹಸ್ತಾಂತರಿಸಲಾಗುತ್ತಿದೆ.