Advertisement

ಶತಾಬ್ದಿಗೆ ವಿದಾಯ; ಜೂ.18ರೊಳಗೆ ವಿಶ್ವ ದರ್ಜೆಯ ಮೊದಲ ರೈಲು

11:24 AM Jan 23, 2018 | udayavani editorial |

ಹೊಸದಿಲ್ಲಿ : ಭಾರತೀಯ ರೈಲ್ವೇ ಇದೇ ವರ್ಷ ಜೂನ್‌ 18ರಿಂದ ದೇಶದಲ್ಲಿ ವಿಶ್ವ ದರ್ಜೆಯ ರೈಲೊಂದನ್ನು ಪರಿಚಯಿಸಲಿದೆ. ಅಂತೆಯೇ 2020ರೊಳಗೆ ಇನ್ನೊಂದು ವಿಶ್ವ ದರ್ಜೆ ರೈಲನ್ನು ಪರಿಚಯಿಸಲಿದೆ. 

Advertisement

ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣಾವಧಿಯು ಶೇ.20ರಷ್ಟು ಕಡಿಮೆಯಾಗಲಿದೆ. ಜತೆಗೆ ಪ್ರಯಾಣಿಕರಿಗೆ ವಿಶಿಷ್ಟ  ಸುಖ ಪ್ರಯಾಣದ ಅನುಭವವೂ ಆಗಲಿದೆ. 

ವರದಿಗಳ ಪ್ರಕಾರ ಈ ಎರಡು ರೈಲುಗಳು ಟ್ರೈನ್‌ ನಂಬರ್‌ 18 ಮತ್ತು ಟ್ರೈನ್‌ ನಂಬರ್‌ 20 ಎಂದು ಕರೆಯಲ್ಪಡಲಿವೆ. ಇವುಗಳು ಅನುಕ್ರಮವಾಇ ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳ ಸ್ಥಾನವನ್ನು ಪಡೆದುಕೊಳ್ಳಲಿವೆ. 

ವಿಶ್ವ ದರ್ಜೆಯ ಈ ಎರಡು ರೈಲುಗಳನ್ನು ರೈಲ್ವೆಯ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದೆ. ಇದೇ ವರ್ಷ ಜೂನ್‌ ಒಳಗಾಗಿ 16 ಕೋಚ್‌ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆ ಐಸಿಎಫ್ ಗೆ ಇದೆ. 

ಟ್ರೈನ್‌ ನಂಬರ್‌ 18ರ ಹೊರಮೈ ಸಂಪೂರ್ಣವಾಗಿ ಉಕ್ಕಿನಿಂದ ನಿರ್ಮಾಣವಾಗಿದೆ. ಟ್ರೈನ್‌ ನಂಬರ್‌ 20ರ ಹೊರಮೈ ಸಂಪೂರ್ಣವಾಗಿ ಅಲ್ಯುಮಿನಿಯಂ ನದ್ದಾಗಿರುತ್ತದೆ. 

Advertisement

ವಿಶ್ವ ದರ್ಜೆಯ ಈ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಇವುಗಳ ಏರೋಡೈನಾಮಿಕ್‌ ಮೂಗು ಕಡಿಮೆ ವಾಯು ಒತ್ತಡಕ್ಕೆ ಕಾರಣವಾಗಲಿದೆ. 

ಈಚಗೆ ನಡೆಸಲಾದ ಅಧ್ಯಯನದ ಪ್ರಕಾರ 1,440 ಕಿ.ಮೀ. ದೂರದ ದಿಲ್ಲಿ – ಹೌರಾ ಮಾರ್ಗವನ್ನು ಕ್ರಮಿಸುವ ಅವಧಿಯು ಈ ರೈಲುಗಳಿಗೆ 180 ನಿಮಿಷಗಳನ್ನು ಕಡಿಮೆ ಇರುತ್ತದೆ. ಶತಾಬ್ದಿ ಮತ್ತು ರಾಜಧಾನಿ ರೈಲುಗಳು ಗಂಟೆಗೆ 150 ಕಿ.ಮೀ.ಗಳ ಗರಿಷ್ಠ ವೇಗದಲ್ಲಿ ಓಡಬಲ್ಲವಾದರೂ ಅವುಗಳ ಸರಾಸರಿ ವೇಗ ಗಂಟೆಗೆ 90 ಕಿ.ಮೀ. ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next