ಗುರುಮಠಕಲ್: ಹಿರಿಯರ ಮಾರ್ಗದರ್ಶನದಿಂದ ಅವರ ಅನುಭವಗಳಿಂದ ಕಿರಿಯರು ಸರಕಾರಿ ಸೇವೆ ಮಾಡಲು ಉತ್ತಮ ಸಹಕಾರಿ ಆಗುರುತ್ತದೆ ಎಂದು ತಹಶೀಲ್ದಾರ್ ಶರಣಬಸವ ಹೇಳಿದರು.
ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ 80 ವರ್ಷ ವಯೋಮಿತಿ ಹೊಂದಿರುವ ಸರಕಾರಿ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರಿ ನೌಕರರು ನಿವೃತ್ತಿ ಹೊಂದಿದ ಮೇಲೆ ಅವರಿಗೆ ಸಮಾಜದಲ್ಲಿ ಮೊದಲು ಸಿಗುತ್ತಿರುವ ಮಾರ್ಯದೆ ದೊರಕುವುದಿಲ್ಲ. ಆದರೆ ಗುರುಮಠಕಲ್‌ನ ನಿವೃತ್ತ ನೌಕರರು ಸಂಘವನ್ನು ಮಾಡಿಕೊಂಡು ಹುಮ್ಮಸ್ಸುನಿಂದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಸಮಾಜಮುಖೀ ಉತ್ತಮ ಕಾರ್ಯಗಳಿಗೆ ವೇ ಕೆ ಕಲ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಸರಕಾರಿ ನಿವೃತ್ತ ನೌಕರರಾದ ಶಿಕ್ಷಣ ಇಲಾಖೆವತಿಯಿಂದ ಎಂ.ರಾಮಪ್ಪ, ಭಾಗಯ್ಯ ಪರಮಯ್ಯ, ಚನ್ನಬಸಪ್ಪ ಗೌಡಪ್ಪ, ಎ.ರಾಮಪ್ಪ ನರಸಪ್ಪ, ಶಿವಾರೆಡ್ಡಿ, ಗುರುಚಾರ್ಯ, ಮಹ್ಮದ್ ಗುಲಾಮ್ ಮೈನೋದ್ದೀನ್, ಗೋವಿಂದಪ್ಪ, ಕಂದಾಯ ಇಲಾಖೆ ವತಿಯಿಂದ ಕಿಷ್ಟಯ್ಯ ನಾರಾಯಣ, ಆರೋಗ್ಯ ಇಲಾಖೆ ವತಿಯಿಂದ ಹಣಮಂತು ಮಿನಾಸಪೂರ, ನೀರಾವರಿ ಇಲಾಖೆಯ ಹಬಿಬುರ್ ರೆಹಮಾನ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಕಿಷ್ಟಪ್ಪ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಪಿಐ ಖಾಜಾಹುಸೇನ್, ಸಂಘದ ಜಿಲ್ಲಾಧ್ಯಕ್ಷ ರಾಮಯ್ಯ ಶಾಬಾದಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ಬಸವರಾಜ ಬೂದಿ, ಕೃಷ್ಣರೆಡ್ಡಿ, ಭೀಮರೆಡ್ಡಿ ಕೊಂಕಲ್, ಜನಾರ್ದನ ಬುಡ್ಡಪ್ಪ, ಅಖಂಡೇಶ್ವರ ಹಿರೇಮಠ ಇದ್ದರು.