Advertisement
ಬುದ್ಧಿಯೂ ಮನಸ್ಸಿನ ರೂಪವೇ. ಇದು ಬದುಕಿನ ರೇಖೆಯನ್ನು ರೂಪಿಸುವಂಥದ್ದು. ಹಾಗಾಗಿಯೇ ಒಳ್ಳೆಯ ಬುದ್ಧಿ ಕೊಡಪ್ಪ ಎಂಬ ಪ್ರಾರ್ಥನೆ ಎಲ್ಲರದ್ದು. ಕೀರ್ತಿ ಅಥವಾ ಅಪಕೀರ್ತಿಯ ಹಿಂದೆ ನಿರ್ದಿಷ್ಟ ಕಾರಣವಾಗಿ ಗುರುತಿಸಲ್ಪಡುವುದು ಕೂಡಾ ಈ ಬುದ್ಧಿ. ದುರ್ಬುದ್ಧಿಯನ್ನು ದೂರ ಮಾಡಿಕೊಂಡವ ಮುಕ್ತಿಯನ್ನು ಪಡೆಯಲು ಶಕ್ತನಾಗುತ್ತಾನೆ. ಹಾಗಾದರೆ, ನಮ್ಮೊಳಗಿನ ದುರ್ಬುದ್ಧಿಯ ಮೂಲ ಕಾರಣ ಏನು?
ಕೀರ್ತಿಂ ಕೃಂತತಿ ದುರ್ಮತಿಂ ವಿತರತಿ ವ್ಯಾಹಂತಿ ಪುಣೊÂàದಯಂ ದತ್ತೇ ಯಃ ಕುಗತಿಂ ಸ ಹಾತುಮೂಚಿತೋ ರೋಷಃ ಸ ದೋಷಃ ಸತಾಮ…||
ಇದು ಸೋಮಪ್ರಭಾಚಾರ್ಯನ ಸುಕ್ತಿಮುಕ್ತಾವಳಿ, ಇದರ ಅರ್ಥ, ಕೋಪವು ದೋಷಯುಕ್ತವಾದದ್ದು, ಇದನ್ನು ಸಜ್ಜನರು ತ್ಯಜಿಸಬೇಕು. ರೋಷವು ಮನಸ್ಸಿಗೆ ತಾಪವನ್ನು ಉಂಟುಮಾಡುತ್ತದೆ. ವಿನಯವನ್ನು ದೂರೀಕರಿಸುತ್ತದೆ. ಸ್ನೇಹವನ್ನು ಕೆಡಿಸುತ್ತದೆ. ಉದ್ವೇಗವನ್ನು ಉಂಟುಮಾಡುತ್ತದೆ. ಕೆಟ್ಟ ಮಾತನ್ನು ಹೇಳಿಸುತ್ತದೆ. ಜಗಳವನ್ನು ಹುಟ್ಟಿಸುತ್ತದೆ. ಕೀರ್ತಿಯನ್ನು ಕತ್ತರಿಸುತ್ತದೆ. ದುಬುìದ್ಧಿಯನ್ನು ಕೊಡುತ್ತದೆ. ಪುಣ್ಯವನ್ನು ತೂರಿ ದುರ್ಗತಿಯನ್ನು ತರುತ್ತದೆ.
Related Articles
Advertisement
ಸಜ್ಜೀವನದ ಗುರಿಯನ್ನು ಕ್ಷಣಾರ್ಧದಲ್ಲಿ ತಪ್ಪಿಸಿ, ಯಶಸ್ಸನ್ನೂ, ಕೀರ್ತಿಯನ್ನೂ ದುರ್ಲಭವಾಗುವಂತೆ ಮಾಡಿಬಿಡುವ ಈ ಕೋಪವನ್ನು ತ್ಯಜಿಸುವುದು ಅಗತ್ಯ. ಕೋಪನಿಗ್ರಹ ಬದುಕಿನ ಸರಳ ದಾರಿಗೆ ಸವಾಲಾದರೂ ಇದನ್ನು ನಿಗ್ರಹಿಸದ ಹೊರತು ಬದುಕು ಸರಳವಾಗಿ ದಕ್ಕುವುದಿಲ್ಲ!— ಭಾಸ್ವ