Advertisement
ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಮೂಲ್ಕಿ, ಮಂಗಳೂರು, ಪಣಂಬೂರು, ಸುತ್ತಮುತ್ತ ಮಳೆ ಬಂದಿದೆ. 8 ಗಂಟೆ ವೇಳೆಗೆ ಕಿನ್ನಿಗೋಳಿ, ಮೂಲ್ಕಿ ಪ್ರದೇಶಗಳಲ್ಲಿ ಮಳೆಯಾಗಿದೆ. ಕಾಸರಗೋಡು, ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲೂ ಮಳೆಯಾಗಿದೆ.
ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಶನಿವಾರ ಸಂಜೆ ವೇಳೆಗೆ ಗಾಳಿ, ಗುಡುಗು ಸಹಿತ ಭಾರಿ ಸುರಿದಿದೆ. ಸಂಜೆ ಆರಂಭವಾದ ಮಳೆ ನಿರಂತರ ಒಂದು ತಾಸು ಬಿರುಸಾಗಿ ಸುರಿದು, ಬಳಿಕ ತುಂತುರು ಮಳೆ ಹಾಗೂ ಗುಡುಗು ರಾತ್ರಿ 8 ಗಂಟೆ ತನಕ ಮುಂದುವರಿಯಿತು. ಹಳ್ಳಿಗಳಲ್ಲಿ ನೀರು ತುಂಬಿ ಹರಿಯಲಾರಂಭಿಸಿದೆ.
Related Articles
Advertisement
ಶುಕ್ರವಾರ ಸಂಜೆಯೂ ಉತ್ತಮ ಮಳೆಯಾಗಿದ್ದು ಗ್ರಾಮೀಣ ಭಾಗದ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಶನಿವಾರ ಮಧ್ಯಾಹ್ನದ ಹೊತ್ತಿಗೆ ಪೂರೈಕೆಯಾಗಿತ್ತು. ಮತ್ತೆ ಸಂಜೆ 5 ಗಂಟೆಗೆ ಮಾಯವಾದ ವಿದ್ಯುತ್ ತಡರಾತ್ರಿವರೆಗೂ ಪೂರೈಕೆಯಾಗಿಲ್ಲ. ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಯಿತು.
ಹಾರಿ ಹೋದ ಮೇಲ್ಛಾವಣಿಕಡಬ ಪರಿಸರದಲ್ಲಿ ಶನಿವಾರ ಸಂಜೆಯ ಗುಡುಗು ಸಹಿತ ಗಾಳಿ ಮಳೆಗೆ ನೂಜಿಬಾಳ್ತಿಲ ಗ್ರಾಮದ ಪಲಯಮಜಲು ದೇವಸ್ಯ ಅವರ ಮನೆಯ ಮೇಲ್ಛಾವಣಿಯ ಶೀಟು ಹಾರಿ ಹೋಗಿದೆ. ಅಪಾರ ನಷ್ಟ ಸಂಭವಿಸಿದೆ. ಮನೆಯೊಳಗಿನ ಸಾಮಗ್ರಿಗಳು ಒದ್ದೆಯಾಗಿ ಹಾನಿ ಸಂಭವಿಸಿದೆ. ಮನೆಗೆ ಸಿಡಿಲು :
ಇಬ್ಬರಿಗೆ ಗಾಯ
ಬಂಟ್ವಾಳ: ಪೆರಾಜೆ ಗ್ರಾಮದ ಸಾದಿಕುಕ್ಕಿನಲ್ಲಿ ಮನೆಗೆ ಸಿಡಿಲು ಬಡಿದು ಮನೆ ಹಾಗೂ ಸೊತ್ತುಗಳಿಗೆ ಹಾನಿಯಾಗಿ ರುವ ಜತೆಗೆ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಸಾದಿಕುಕ್ಕು ನಿವಾಸಿ ದಿ| ಮೋನಪ್ಪ ನಾಯ್ಕ ಅವರ ಪತ್ನಿ ಗೀತಾ ನಾಯ್ಕ ಅವರ ಮನೆಗೆ ಸಿಡಿಲು ಬಡಿದಿದ್ದು, ಮಕ್ಕ ಳಾದ ಜೀವನ್ ಅವರ ಮುಖಕ್ಕೆ ಗಾಯ ವಾಗಿದ್ದು, ಸಚಿನ್ ಅವರಿಗೆ ಸಿಡಿಲಿನ ಆಘಾತವಾಗಿದೆ. ಮೇಲ್ಛಾವಣಿ, ಗೋಡೆ ಬಿರುಕು ಬಿಟ್ಟಿದ್ದು, ಸೊತ್ತುಗಳಿಗೆ ಹಾನಿಯಾಗಿದೆ. ಮನೆಯ ಸಮೀಪದ ಅಕೇಶಿಯಾ ಮರ ವೊಂದು ಸಿಡಿಲಿನ ತೀವ್ರತೆಗೆ ಸಂಪೂರ್ಣ ಛಿದ್ರವಾಗಿದೆ. ಪೆರಾಜೆ ಪಿಡಿಒ ಸುನೀಲ್ ಕುಮಾರ್, ಗ್ರಾಮಕರಣಿಕೆ ಸುರಕ್ಷಾ ಸೇರಿ ದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.