Advertisement

ಮುಂಬಯಿ ಷೇರು ಪೇಟೆ : ಹೂಡಿಕೆದಾರರಿಗೆ 3. 57 ಲ.ಕೋ. ರೂ. ಲಾಭ

09:36 AM Feb 05, 2020 | Hari Prasad |

ಮುಂಬಯಿ: ಬಜೆಟ್‌ ಮಂಡನೆ ದಿನ ದಾಖಲೆಯ ಕುಸಿತ ಕಂಡಿದ್ದ ಮುಂಬಯಿ ಷೇರು ಪೇಟೆ  ಮಂಗಳವಾರ ಮತ್ತೆ ಚೇತರಿಸಿಕೊಂಡಿದೆ. ಮಂಗಳವಾರ ಬಾಂಬೆ ಷೇರು ಪೇಟೆ 917 ಪಾಯಿಂಟ್‌ಗಳಷ್ಟು ಜಿಗಿತ ಕಂಡಿದೆ. ಬಿಎಸ್‌ಇ ಸೂಚ್ಯಂಕ 40, 789.38ಕ್ಕೆ ತಲುಪಿದೆ. ಸೋಮವಾರ ಕೂಡ 136 ಅಂಕಗಳಷ್ಟು ಏರಿಕೆ ಕಂಡಿರುವುದರಿಂದ ಫೆ.1ಕ್ಕಿಂತ ಮೊದಲು ಇದ್ದ ಉತ್ಸಾಹದಾಯಕ ವಹಿವಾಟಿನ ಪರಿಸ್ಥಿತಿಗೆ ಮರಳಿದೆ.

Advertisement

ಎರಡು ದಿನಗಳ ಅವಧಿಯಲ್ಲಿ ಹೂಡಿಕೆದಾರರು 3.57 ಲಕ್ಷ ಕೋಟಿ ರೂ.ಗಳಿಸಿದ್ದಾರೆ. ನಿಫ್ಟಿ ಸೂಚ್ಯಂಕ ಕೂಡ 11, 979.65ಕ್ಕೆ ಏರಿಕೆಯಾಯಿತು. ಅಂದರೆ 271 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ಇದೇ ವೇಳೆ ಶಾಂಘೈ, ಹಾಂಕಾಂಗ್‌, ಟೋಕಿಯೋ ಸೇರಿದಂತೆ ವಿಶ್ವದ ಇತರ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿಯೂ ಧನಾತ್ಮಕವಾಗಿಯೇ ವಹಿವಾಟು ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next