Advertisement

ಅಭಿಮಾನಿಗಳಿಗೆ ಆರ್ ಆರ್ ಆರ್ ಚಿತ್ರತಂಡದಿಂದ ಗುಡ್ ನ್ಯೂಸ್

02:20 PM Jul 11, 2021 | Team Udayavani |

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸುಮಾರು 3 ವರ್ಷಗಳಿಂದ ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ ಚಿತ್ರತಂಡ ಜುಲೈ 15ಕ್ಕೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಇದುವರೆಗೂ ಸಿನಿಮಾದಿಂದ ಪೋಸ್ಟರ್ಸ್ ಮತ್ತು ರಾಮ್ ಚರಣ್ ಹಾಗೂ ಜೂ.ಎನ್ ಟಿ ಆರ್ ಟೀಸರ್ ಬಿಟ್ಟರೆ ಬೇರೆ ಏನನ್ನೂ ಬಿಡುಗಡೆ ಮಾಡಿರಲಿಲ್ಲ. ಇದೀಗ ಮೇಕಿಂಗ್ ವಿಡಿಯೋ ರಿಲೀಸ್ ಮುಂದಾಗಿದೆ.

Advertisement

ಇದೇ ತಿಂಗಳ  15ಕ್ಕೆ ಬಹುನಿರೀಕ್ಷೆಯ ಆರ್ ಆರ್ ಆರ್ ಚಿತ್ರದ  ಮೇಕಿಂಗ್ ವಿಡಿಯೋ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಘೋಷಣೆ ಮಾಡಿದೆ. ಈ ಮೂಲಕ ಚಿತ್ರದ ಪ್ರಮೋಷನ್ ಕೆಲಸವನ್ನು ಪ್ರಾರಂಭ ಮಾಡುತ್ತಿದೆ,

ಜುಲೈ 15 ಬೆಳಗ್ಗೆ 11 ಗಂಟೆಗೆ ಆರ್ ಆರ್ ಆರ್ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next