Advertisement

ನಗರದಲ್ಲಿ ಗುಡ್‌ ಫ್ರೈಡೆ ಆಚರಣೆ

12:27 AM Apr 20, 2019 | Lakshmi GovindaRaju |

ಬೆಂಗಳೂರು: ಗುಡ್‌ ಫ್ರೈಡೆ ಅಂಗವಾಗಿ ಶುಕ್ರವಾರ ನಗರದ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಹಲವು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ನಗರದ ಹಲವು ಚರ್ಚ್‌ಗಳಲ್ಲಿ ಮೇಣದ ಬತ್ತಿ ಹಿಡಿದು ಪ್ರಾರ್ಥನೆ ಸಲ್ಲಿದ ದೃಶ್ಯ ಶುಕ್ರವಾರ ಕಂಡು ಬಂತು.

Advertisement

ಶಿವಾಜಿನಗರದ ಸೇಂಟ್‌ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಹಾಗೂ ಹಲಸೂರಿನ ಲೂದ್‌ ಮಾತಾ ಚರ್ಚ್‌ನಲ್ಲಿ ಯೇಸು ಕ್ರಿಸ್ತನು ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಯ ಮೇಲೆ ಮರಣ ಹೊಂದುವ ತನಕದ ವಿವಿಧ ಘಟನೆಗಳನ್ನು ನೆನಪಿಸುವ ಪ್ರದರ್ಶನದ ಮೂಲಕ ಜನರಿಗೆ ಏಸು ಕ್ರಿಸ್ತನ ಕುರಿತ ಸಂದೇಶ ಸಾರಲಾಯಿತು.

ನಾಗವಾರ ಮುಖ್ಯ ರಸ್ತೆಯಲ್ಲಿರುವ ಹೋಲಿ ವಾಟರ್‌ ಪವರ್‌ ಎ.ಜಿ.ಚರ್ಚ್‌ನಲ್ಲಿ ಮುಂಜಾನೆ ಪಾಸ್ಟರ್‌ ಗೋಲ್ಡನ್‌ ಸ್ಟಡ್‌ ಶಿಲುಬೆಗೇರಿದ ಯೇಸು ಕ್ರಿಸ್ತನು ಆಡಿದ ಮಹತ್ವದ ಏಳು ಮಾತುಗಳ ಕುರಿತು ಪ್ರವಚನ ನೀಡಲಾಯಿತು.

ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಗೆ ಏರುವವರೆಗಿನ ಘಟನೆಗಳನ್ನು ಅವಲೋಕಿಸುತ್ತಾ ಪ್ರಾರ್ಥಿಸುವ ಮೂಲಕ ಶುಭ ಶುಕ್ರವಾರದ ಆರಾಧನೆ ಮಾಡಲಾಯಿತು. ಮಲ್ಲೇಶ್ವರದ ಸಿಎಸ್‌ಐ ಗ್ರೇಸ್‌ ಚರ್ಚ್‌ನಲ್ಲಿ ನಡೆದ ಗುಡ್‌ಫ್ರೈಡೆ ಆರಾಧನೆಯಲ್ಲಿ ಹಲವು ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ಭಾಗವಹಿಸಿದ್ದರು.

ವಿವೇಕನಗರದ ಇನ್‌ಫೆಂಟ್‌ ಜೀಸಸ್‌ ಚರ್ಚ್‌, ಚಾಮರಾಜಪೇಟೆಯ ಸೇಂಟ್‌ ಮಾರ್ಕ್ಸ್ ಚರ್ಚ್‌, ಬ್ರಿಗೇಡ್‌ ರಸ್ತೆಯಲ್ಲಿರುವ ಸೇಂಟ್‌ ಪ್ಯಾಟ್ರಿಕ್‌ ಚರ್ಚ್‌, ಸೇಂಟ್‌ ಥೆರೆಸಾ ಚರ್ಚ್‌, ಹೆಬ್ಟಾಳ ರಿಂಗ್‌ ರಸ್ತೆಯಲ್ಲಿರುವ ಬೇಥೆಲ್‌ ಎಜಿ ಚರ್ಚ್‌, ಎಂಜಿ ರಸ್ತೆಯ ಸೇಂಟ್‌ ಮಾರ್ಕ್ಸ್ ಕ್ಯಾಥಡ್ರಲ್‌, ಸೇಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಗಂಗೊಂಡನಹಳ್ಳಿ ಸೇಂಟ್‌ ಅಂಥೋಣಿ ಚರ್ಚ್‌ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು.

Advertisement

ಬಾಣಸವಾಡಿಯ ಸೇಂಟ್‌ ವಿನ್ಸೆಂಟ್‌ ಪಲ್ಲೊಟ್ಟಿ ಚರ್ಚ್‌ನಲ್ಲೂ ಕೂಡ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮರಿಯಣ್ಣನ ಪಾಳ್ಯ, ಹಾರೋಬೆಲೆ, ತೆರೇಸಪುರ ಸೇರಿದಂತೆ ಬೆಂಗಳೂರಿನ ಹೊರವಲಯದ ಹಳ್ಳಿಗಳಲ್ಲೂ ಬೆಟ್ಟಗಳ ಮೇಲೆ ಶಿಲುಬೆ ಯಾತ್ರೆಯನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next