Advertisement

ತೂಕ ಇಳಿಕೆಗೆ ಉತ್ತಮ ದೇಸಿ ಆಹಾರ

05:26 AM Mar 05, 2019 | |

ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು ತ್ಯಜಿಸಿ ಪೋಷಕಾಂಶವುಳ್ಳ ತೂಕ ಇಳಿಕೆಗೆ ಪೂರಕವಾಗುವ ಆಹಾರಗಳನ್ನು ಸೇವಿಸುವುದು ರೂಢಿಸಿಕೊಳ್ಳಬೇಕಾಗುತ್ತದೆ.

Advertisement

ಇಂತಹ ಡಯೆಟ್‌ ಪಾಲಿಸುವವರಿಗೆ ಇಲ್ಲಿದೆ ಇನ್ನೊಂದು ಮಾರ್ಗ. ಲೋಕ್ಯಾಲೋರಿ ಇರುವ ದೇಸಿ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿದರೆ ದೇಹದ ತೂಕ ಬೇಗನೇ, ಆರೋಗ್ಯಕರವಾಗಿ ಇಳಿಸಿಕೊಳ್ಳಬಹುದು.

· ಅವಲಕ್ಕಿ
ಅವಲಕ್ಕಿ ಹಗುರ ಮತ್ತು ಪೋಷಕಾಂಶ ಯುಕ್ತ ಆಹಾರ. ಪ್ರತಿದಿನ ಅವಲಕ್ಕಿ ಯಿಂದ ತಯಾರಿಸಿದ ಆಹಾರವನ್ನು ಬ್ರೇಕ್‌ಫಾಸ್ಟ್‌ ಆಗಿ ಸೇವಿಸಬಹುದು. ಅಕ್ಕಿಯಿಂದ ತಯಾರಿಸಲ್ಪಟ್ಟ ಅವಲಕ್ಕಿ ಯಲ್ಲಿ ಕಬ್ಬಿಣಾಂಶ, ಅಗತ್ಯವಿರುವ ಫೊಲೆಟ್‌ ಅಂಶ ಹಾಗೂ ಕಾಬೊ ಹೈಡ್ರೇಟ್‌ ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅವಲಕ್ಕಿಯಿಂದ ತಯಾರಿಸಿದ ಆಹಾರಕ್ಕೆ ಪ್ರೋಟಿನ್‌ಯುಕ್ತ ಪದಾರ್ಥಗಳನ್ನು ಸೇವಿಸಿ ಇನ್ನಷ್ಟು ಆರೋಗ್ಯಕರವಾಗಿ ಮಾಡಬಹುದು. ಹೊಟ್ಟೆಯ ಕೊಬ್ಬಿನಾಂಶವನ್ನು ಕಡಿಮೆ ಗೊಳಿಸಬಲ್ಲ ಕ್ಯಾರೆಟ್‌, ಪಾಲಕ್‌ ಇದರೊಂದಿಗೆ ಸೇರಿಸಿಕೊಳ್ಳಬಹುದು.

· ಕಿಚಡಿ
ಆರೋಗ್ಯದಲ್ಲಿ ಏರುಪೇರಾದಾಗ ಕಿಚಡಿ ಸೇವಿಸುವುದು ಸಾಮಾನ್ಯ. ಇನ್ನು ಬೇಗನೇ ತೂಕ ಇಳಿಸಿಕೊಳ್ಳ ಬಯಸುವವರಿಗೆ ಕಿಚಡಿ ಹೇಳಿಮಾಡಿಸಿದ ಆಹಾರ. ಇದು ಕೊಬ್ಬಿನಾಂಶದ ವಿರುದ್ಧ ಹೋರಾಡುವ ಫೈಬರ್‌, ವಿಟಮಿನ್‌ ಸಿ, ಮ್ಯಾಗ್ನೇಶಿಯಂ ಹಾಗೂ ಪೋಟಾಷಿಯಂ ಅಂಶಗಳನ್ನು ಹೊಂದಿದೆ. ಇದು ಬಹುಬೇಗನೇ ಜೀರ್ಣವಾಗುವುದಲ್ಲದೇ ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವಂತೆ ಪ್ರೋಟಿನ್‌ ಒಳಗೊಂಡಿದೆ. ತೂಕ ಇಳಿಸುವಿಕೆಯೊಂದಿಗೆ
ಹೃದಯದ ಆರೋಗ್ಯವನ್ನು ಇದು ಕಾಪಾಡುತ್ತದೆ.

· ಡೋಕ್ಲಾ
ಗುಜರಾತಿನ ಪ್ರಮುಖ ಆಹಾರಗಳಲ್ಲಿ ಒಂದಾಗಿರುವ ಡೋಕ್ಲಾವನ್ನು ಬೆಳಗ್ಗಿನ ಉಪಹಾರ, ಪ್ರಮುಖ ಆಹಾರ, ಸೈಡ್‌ ಡಿಶ್‌, ಅಥವಾ ಸ್ನಾಕ್‌ ಆಹಾರವಾಗಿಯೂ ಸೇವಿಸಬಹುದು. ತೂಕ ಇಳಿಸಿಕೊಳ್ಳಲು ಇದು ಅತ್ಯುತ್ತಮವಾದ ಆಹಾರ. ಕಡಲೇಹಿಟ್ಟಿನಿಂದ ಮಾಡಲ್ಪಡುವ ಡೋಕ್ಲಾದಲ್ಲಿ ಕೆಟ್ಟ ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬನ್ನು ನಾಶಪಡಿಸುವಂತಹ ಫೈಬರ್‌, ವಿಟಮಿನ್‌ ಬಿ12, ಝಿಂಕ್‌ ಹೆಚ್ಚಿನ ಪ್ರಮಾಣದಲ್ಲಿದೆ.

Advertisement

· ಇಡ್ಲಿ ಸಾಂಬರ್‌
ಇಡ್ಲಿ ಸಾಂಬರ್‌ ಅನ್ನು ಅನೇಕ ಮಂದಿ ಬೆಳಗ್ಗಿನ ಉಪಹಾರವಾಗಿ ಸೇವಿಸುತ್ತಾರೆ. ಅಕ್ಕಿ ಹಾಗೂ ಉದ್ದಿನಬೇಳೆಯಿಂದ ಮಾಡಿದಂತಹ ಇಡ್ಲಿಯಲ್ಲಿ ಹೆಚ್ಚಿನ
ಕ್ಯಾಲೋರಿಗಳಿದೆ. ಸಾಂಬಾರ್‌ನಲ್ಲಿ ಹೆಚ್ಚಿನ ತರಕಾರಿಗಳಿರುವುದರಿಂದ ಆರೋಗ್ಯಕ್ಕೆ ಉತ್ತಮ. ಅಕ್ಕಿ ಇಡ್ಲಿಗೆ ಬದಲಾಗಿ ರಾಗಿ ಇಡ್ಲಿಯನ್ನು ಕೂಡ ಸೇವಿಸಬಹುದು. ಇದು ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆಗೊಳಿಸುತ್ತದೆ.

· ಸಬೂದಾನಿ ಕಿಚಡಿ
ಉಪವಾಸ ಕುಳಿತುಕೊಳ್ಳುವವರ ನೆಚ್ಚಿನ ಆಹಾರಗಳಲ್ಲಿ ಒಂದಾಗಿರುವ ಸಬೂದಾನಿ ದೇಹದ ತೂಕ ಇಳಿಸಿ ಕೊಳ್ಳಲು ಉತ್ತಮ ಆಹಾರಗಳಲ್ಲಿ ಒಂದು. ಸಬೂದಾನಿಯಲ್ಲಿ ಪ್ರೋಟಿನ್‌ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದರ
ಇನ್ನೊಂದು ವಿಶೇಷ ಏನೆಂದರೆ ಪದೇ ಪದೇ ತಿನ್ನಬೇಕು ಎಂಬ ಆಸೆಯನ್ನು ಇದು ಕೊನೆಗೊಳಿಸುತ್ತದೆ.

ಇಷ್ಟು ಮಾತ್ರವಲ್ಲದೆ ಮಖಾನಾ, ದಾಲ್‌- ಚವಾಲ್‌ ಕೂಡ ತೂಕ ಇಳಿಸಿಕೊಳ್ಳಬಯಸುವವರಿಗೆ ಅತ್ಯುತ್ತಮ ಆಹಾರ. ಇಂತಹ ಆಹಾರಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹದ ತೂಕ ಸುಲಭವಾಗಿ ಇಳಿಸಿಕೊಳ್ಳಬಹುದು.

ರಮ್ಯಾ 

Advertisement

Udayavani is now on Telegram. Click here to join our channel and stay updated with the latest news.

Next