Advertisement

ಬಡವರಿಗೆ ಒಳ್ಳೆ ದಿನಗಳು ಬಂದಿಲ್ಲ: ಮೋಟಮ್ಮ

05:28 PM May 07, 2018 | Team Udayavani |

ಆಲ್ದೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಾವು ಪ್ರಧಾನಿಯಾದ ನಂತರ ಎಲ್ಲರ ಖಾತೆಗೆ 15 ಲಕ್ಷ ರೂಗಳನ್ನು
ಹಾಕುತ್ತೇವೆ. ಎಲ್ಲರಿಗೂ ಉದ್ಯೋಗವನ್ನು ಕಲ್ಪಿಸುತ್ತೇವೆ. ಅಚೇfದಿನ ಬರುತ್ತದೆ ಎಂದು ಹೇಳಿದ್ದರು. ಆದರೆ, ದೇಶ ಲೂಟಿ ಮಾಡಿದ ವಿಜಯ್‌ ಮಲ್ಯ, ಲಲಿತ್‌ ಮೋದಿಗೆ ಅಚ್ಛೇದಿನ್‌ ಬಂದಿದೆ. ಬಡವರಿಗೆ ಮಾತ್ರ ಒಳ್ಳೆ ದಿನಗಳು ಬಂದಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಮೋಟಮ್ಮ ಹೇಳಿದರು.

Advertisement

ಪಟ್ಟಣದಲ್ಲಿ ರೋಡ್‌ ಶೋ ನಡೆಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲ ವಸ್ತುಗಳ ದರ
ಹೆಚ್ಚಿಸಿದೆ. ಸಾಲ ಮನ್ನಾ ಮಾಡಿಲ್ಲ. ಡಿಸೇಲ್‌, ಪೆಟ್ರೋಲ್‌, ಗ್ಯಾಸ್‌ ದರ ಹೆಚ್ಚಿಸಿದ್ದು ಬಡವರಿಗೆ ಹೊರೆಯಾಗಿದೆ. ಆದರೆ, ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಬಡವರ ಬಗ್ಗೆ ಕಾಳಜಿ ಹೊಂದಿದ ಕಾಂಗ್ರೆಸ್‌ ಸರಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅನ್ನ ಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮಾತೃಪೂರ್ಣ ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿದೆ ಎಂದರು.

ವಿಜಯಪುರದಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ಬಜರಂಗದಳ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ ಮೋಟಮ್ಮ, ಪ್ರಧಾನಿಯವರು ಹೇಳಿದ “ಬೇಟಿ ಬಚಾವೋ ಬೇಟಿ ಪಢಾವೋ’ ಎಂದರೆ ಇದೇನಾ, ಹೆಣ್ಣಿಗೆ ರಕ್ಷಣೆ ಎಲ್ಲಿದೆ ಎಂದು ಪ್ರಶ್ನಿಸಿದರು. ಶಾಸಕಿಯಾಗಿದ್ದಾಗ ಉತ್ತಮ ಕಾರ್ಯಗಳನ್ನು ಮಾಡಿದ್ದು , ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಭರವಸೆ ನೀಡಿದರು. 

ಹುಲಿಹಳ್ಳದಿಂದ ನೀರನ್ನು ತಂದು ಸುತ್ತಲಿನ ಹಳ್ಳಿಗಳಿಗೆ ನೀರೊದಗಿಸುವ ಕೆಲಸ ಮಾಡಿ ಮಾದರಿ ಗ್ರಾಮವನ್ನಾಗಿ ಮಾಡಲಾಗುತ್ತದೆ. ಕಾಂಗ್ರೆಸ್‌ ಬೆಂಬಲಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ಸಿಪಿಐನ ಸಾತಿ ಸುಂದರೇಶ್‌ ಮಾತನಾಡಿ, ದಲಿತರ , ಆದಿವಾಸಿಗಳ , ಜನಸಾಮಾನ್ಯರ ರಕ್ಷಣೆಗಾಗಿ ನಾವು ಕಾಂಗ್ರೆಸ್‌ ಬೆಂಬಲಿಸಿದ್ದೇವೆ. ಕರ್ನಾಟಕದ 219 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದೇವೆ ಎಂದರು.

ತಾರಾಪ್ರಚಾರಕಿ ನಟಿ ಮಾಲಾಶ್ರಿ ಮಾತನಾಡಿ, ಸಿನಿಮಾದಲ್ಲಿ ನಾನು ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದು, ಹೆಣ್ಣು ಶಕ್ತಿ
ಎಂಬುದನ್ನು ತೋರಿಸಿದ್ದೇನೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರು ಉತ್ತಮ ಆಡಳಿತ ನೀಡಿದ್ದಾರೆ. 5 ವರ್ಷಗಳ ಕಾಲ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದ್ದಾರೆ. ಮೋಟಮ್ಮ ಅವರು ಜನಪ್ರಿಯ ಮಹಿಳೆಯಾಗಿದ್ದು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. 

Advertisement

ಚಲನಚಿತ್ರನಟ ಸಂತೋಷ್‌ ಕೊಟ್ಯಾನ್‌ ಮಾತನಾಡಿದರು. ಮುಖಂಡರಾದ ನಯನ ಮೋಟಮ್ಮ, ವನಮಾಲ, ಸವಿತಾ, ಕೃಷ್ಣೇಗೌಡ, ಜಯಶೀಲಾ, ಅಶ್ರಫ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next