Advertisement
ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಕೈಗೊಂಡ ನಿರ್ಧಾರ ವೆಂದರೆ ಸ್ಟಾರ್ ಆಟಗಾರ ಕ್ರಿಸ್ಟಿ ಯಾನೊ ರೊನಾಲ್ಡೊ ಅವರನ್ನು ಬೆಂಚ್ ಮೇಲೆ ಕೂರಿಸಿ 21ರ ಹರೆಯದ ಗೊನ್ಸಾಲೊ ರಮೋಸ್ ಅವರನ್ನು ಆಡಿಸಿದ್ದು, ಅವರು ಈ ಕೂಟದ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿ ಮೆರೆದದ್ದು! ರೊನಾಲ್ಡೊ ಅಂಗಳಕ್ಕಿಳಿಯುವಾಗ ಪೋರ್ಚುಗಲ್ ಆಗಲೇ 5 ಗೋಲು ಹೊಡೆದಾಗಿತ್ತು.
Related Articles
5 ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ಪುರಸ್ಕೃತ ರೊನಾಲ್ಡೊ ಅವರನ್ನು ಹೊರಗೆ ಕುಳ್ಳಿರಿಸಿ ಬಂದ ಗೊನ್ಸಾಲೊ ರಮೋಸ್ ಪೋರ್ಚು ಗಲ್ ಫುಟ್‌ಬಾಲ್‌ನ ನೂತನ ಸ್ಟಾರ್. “ಸಾಕರರ್’ ಎಂಬುದು ಈ ಪ್ರತಿಭಾನ್ವಿತನ ನಿಕ್ ನೇಮ್.
ವಿಶ್ವಕಪ್ ಆರಂಭಕ್ಕೂ ಕೇವಲ 3 ದಿನಗಳ ಹಿಂದೆ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿ ದ್ದರು. ಅದು ನೈಜೀರಿಯ ಎದುರಿನ ಕೊನೆಯ ಅಭ್ಯಾಸ ಪಂದ್ಯವಾಗಿತ್ತು. 2 ಗೋಲು ಬಾರಿಸಿದ ರಮೋಸ್ ಆಗಲೇ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದ್ದರು.
Advertisement
ರಮೋಸ್ ವಿಶ್ವಕಪ್ ಗ್ರೂಪ್ ಹಂತದ ಸ್ಪರ್ಧೆಗಳಲ್ಲಿ 10 ನಿಮಿಷ ವಷ್ಟೇ ಬದಲಿ ಆಟಗಾರನಾಗಿ ಕಾಣಿಸಿ ಕೊಂಡಿದ್ದರು. ಸ್ವಿಜರ್ಲೆಂಡ್ ವಿರುದ್ಧ ಮೊದಲ ಆಯ್ಕೆಯಲ್ಲೇ ಅವಕಾಶ ಪಡೆದರು. ಇದರೊಂದಿಗೆ 20 ವರ್ಷಗಳ ಬಳಿಕ ಮೊದಲ ವಿಶ್ವಕಪ್ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧಿಸಿದ ಆಟಗಾರನೆನಿಸಿದರು. 2002ರ ಸೌದಿ ಅರೇಬಿಯ ಎದುರಿನ ಪಂದ್ಯದಲ್ಲಿ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಈ ಸಾಧನೆಗೈದಿದ್ದರು.
ಇದು ಫಿಫಾ ವಿಶ್ವಕಪ್ ಇತಿಹಾಸದ 53ನೇ ಹ್ಯಾಟ್ರಿಕ್ ನಿದರ್ಶನ. ಪೋರ್ಚುಗಲ್ ಆಟಗಾರರ 4ನೇ ಹ್ಯಾಟ್ರಿಕ್ ಸಾಧನೆ. 1966ರಲ್ಲಿ ಡಿಆರ್‌ಪಿ ಕೊರಿಯಾ ವಿರುದ್ಧ ಇಸೆಬಿಯೊ, 2002ರಲ್ಲಿ ಪೋಲೆಂಡ್ ವಿರುದ್ಧ ಪೌಲೇಟ ಹಾಗೂ 2018ರಲ್ಲಿ ಸ್ಪೇನ್ ವಿರುದ್ಧ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ಪರ ಹ್ಯಾಟ್ರಿಕ್ ಬಾರಿಸಿದ್ದರು.