Advertisement

Baanadariyalli… ಮತ್ತೂಂದು ಪ್ರೇಮ್‌ ಕಹಾನಿ!

10:49 AM Sep 07, 2023 | Team Udayavani |

ನಟ ಗಣೇಶ್‌ ಅಭಿನಯದ “ಬಾನದಾರಿಯಲಿ…’ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. ಗಣೇಶ್‌ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್‌ ಆಟಗಾರನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯುವಕನೊಬ್ಬನ ಪ್ರೀತಿ, ಪ್ರೇಮ, ಪ್ರಣಯ, ಸರಸ-ವಿರಸ, ತಲ್ಲಣ ಎಲ್ಲದರ ಸಣ್ಣ ಝಲಕ್‌ ಅನ್ನು “ಬಾನದಾರಿಯಲಿ…’ ಸಿನಿಮಾದ ಟ್ರೇಲರ್‌ನಲ್ಲಿ ತೆರೆದಿಡಲಾಗಿದೆ.

Advertisement

ಮೇಲ್ನೋಟಕ್ಕೆ ಲವ್‌ ಕಂ ಎಮೋಶನ್‌ ಡ್ರಾಮಾದಂತೆ ಕಾಣುವ “ಬಾನದಾರಿಯಲಿ…’ ಟ್ರೇಲರ್‌ನಲ್ಲಿ ವಿದೇಶದಲ್ಲಿ ಸಫಾರಿ, ಅಡ್ವೆಂಚರ್‌ ವಾಟರ್‌ ಗೇಮ್ಸ್‌, ನಾಯಕ ಗಣೇಶ್‌ ಗೆಟಪ್‌, ನಾಯಕಿಯರಾದ ರುಕ್ಮಿಣಿ ವಸಂತ್‌ ಮತ್ತು ರೀಷ್ಮಾ ನಾಣಯ್ಯ ಗ್ಲಾಮರಸ್‌ ಲುಕ್‌ ಒಂದಷ್ಟು ಗಮನ ಸೆಳೆಯುವಂತಿದೆ. ನಟ ರಂಗಾಯಣ ರಘು ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಲಾಶ್‌ ಕಲತ್ತಿ ಛಾಯಾಗ್ರಹಣ “ಬಾನದಾರಿಯಲಿ…’ ಟ್ರೇಲರಿನಲ್ಲಿ ದೃಶ್ಯಗಳನ್ನು ಸುಂದರವಾಗಿ ಕಾಣುವಂತೆ ಮಾಡಿದ್ದರೆ, ಅರ್ಜುನ್‌ ಜನ್ಯ ಸಂಗೀತ ಸನ್ನಿವೇಶಗಳಿಗೆ ಪೂರಕವಾಗಿ ಮೂಡಿಬಂದಿದೆ.

“ಮುಂಗಾರು ಮಳೆ’ ಸಿನಿಮಾದ ನಂತರ ಬ್ಯಾಕ್‌ ಟು ಬ್ಯಾಕ್‌ ಪ್ರೇಮ್‌ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ನಟ ಗಣೇಶ್‌ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ “ಬಾನದಾರಿಯಲಿ…’ ಸಿನಿಮಾದಲ್ಲೂ ಅಂಥದ್ದೇ ಮತ್ತೂಂದು ಪ್ರೇಮ್‌ ಕಹಾನಿಯನ್ನು ಪ್ರೇಕ್ಷಕರ ಮುಂದಿಡು ತ್ತಿರುವುದು ಬಹುತೇಕ ಪಕ್ಕಾ ಆಗಿರುವಂತೆ ಟ್ರೇಲರ್‌ನಲ್ಲಿ ಕಾಣುತ್ತದೆ.

ಇನ್ನು, “ಬಾನದಾರಿಯಲಿ’ ಸಿನಿಮಾದ ಟೈಟಲ್‌ಗೆ “ನೋಡು ಎಂಥ ಚೆಂದ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. “ಶ್ರೀವಾರಿ ಟಾಕೀಸ್‌’ ಲಾಂಛನ ದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್‌ ಹಾಗೂ ವೇಣು ಬಂಡವಾಳ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next