ಶಿರಸಿ : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ಅವರ ಗುರುವಾಗಿ ಮಾರ್ಗದರ್ಶನ ಮಾಡಿದ್ದ ಶಿರಸಿ ಬೆಂಗಳೆಯ ಯುವಕ, ಭಾರತೀಯ ಸೈನ್ಯದ ಸುಭೇದಾರ ಕಾಶೀನಾಥ ನಾಯ್ಕ ಅವರ ಪೂನಾದ ಮನೆಗೆ ಭೇಟಿ ಕೊಟ್ಟು ತಾಸುಗಳಿಗೂ ಅಧಿಕ ಕಾಲ ಸುದ್ದಿ ಹೇಳಿ, ಸಿಹಿ ತಿಂದು ಹೋಗುವ ಮೂಲಕ ಗುರುವೇ ಅಲ್ಲ ಕಾಶಿನಾಥ ಎಂದ ಅನೇಕರ ಪ್ರಶ್ನೆಗೆ ಸ್ವತಃ ಛೋಪ್ರಾ ಮಾತಿಲ್ಲದ ಉತ್ತರ ಕೊಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಬಂದ ಬಳಿಕ ಒತ್ತಡದ ಹೊತ್ತಿನಲ್ಲೂ ಕಾಶಿನಾಥ್ ಮನೆಗೆ ಛೋಪ್ರಾ ಬಂದು ಬೇಟಿಯಾದರು. ಕಾಶೀನಾಥ ಅವರ ಪತ್ನಿ ಚೈತ್ರಾ ನಾಯ್ಕ ಇಂದು (ಮಂಗಳವಾರ, ಆಗಸ್ಟ್ 24) ಮಧ್ಯಾಹ್ನ ಪೂನಾದ ಮನೆಗೆ ಬಂದಾಗ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಇದನ್ನೂ ಓದಿ : ರಾಪ್ಟಿಂಗ್, ಬೋಟಿಂಗ್ ಹಾಗೂ ಜಲಕ್ರೀಡೆಗೆ ಅನುಮತಿ ನೀಡಿ : ಆರ್.ಅಶೋಕ್ ಗೆ ಮನವಿ
ಕಾಶೀನಾಥ್ ಮಕ್ಕಳಾದ ದಕ್ಷ, ಲಕ್ಷರ ಜೊತೆಗೂ ಫೋಟೊ ತೆಗಸಿಕೊಂಡರು. ಮನೆಯ ಸಾಕು ನಾಯಿ ರಾಕಿಯ ಜೊತೆಗೂ ಫೊಟೊ ತೆಗಸಿಕೊಂಡರು. ಈ ನಂತರ ಉದಯವಾಣಿ ಜೊತೆ ಮಾತನಾಡಿದ ಕಾಶೀನಾಥ ನಾಯ್ಕ, ನೀರಜ್ ಬಂದು ಹೋದದ್ದು ನಮಗೆ ಎಲ್ಲಿಲ್ಲದ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ ಅಸೋಶಿಯೇಶನ್ ಅಧ್ಯಕ್ಷರು ಕಾಶಿನಾಥ ಯಾರೆಂದು ಗೊತ್ತೇ ಇಲ್ಲ, ಕೋಚ್ ಅಲ್ಲ ಅವರು ಎಂದು ಹೇಳಿದಾಗ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪ, ಅಸಮಧಾನಗಳು ವ್ಯಕ್ತವಾಗಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ : ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ಪ್ರಕರಣ: ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ